ಅರ್ಹತಾ ವಯಸ್ಸನ್ನು ಇಳಿಕೆ ಮಾಡುವ ಜೊತೆಗೆ ನಗದು ಪ್ರೋತ್ಸಾಹವನ್ನು ಘೋಷಿಸಿದ ಏರ್ ಇಂಡಿಯಾ!

ನವದೆಹಲಿ: ಏರ್ ಇಂಡಿಯಾ ತನ್ನ ಉದ್ಯೋಗಿಗಳು ಸ್ವಯಂ ಪ್ರೇರಿತವಾಗಿ ನಿವೃತ್ತಿಯಾಗುವಂತೆ ಉತ್ತೇಜಿಸುವ ನಿಟ್ಟಿನಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅರ್ಹತಾ ವಯಸ್ಸನ್ನು ಇಳಿಕೆ ಮಾಡುವ ಜೊತೆಗೆ ನಗದು ಪ್ರೋತ್ಸಾಹವನ್ನು ಘೋಷಿಸಿದೆ.

 

ಏರ್‌ ಇಂಡಿಯಾ ಏಳು ದಶಕಗಳ ನಂತರ ಟಾಟಾ ಸಮೂಹದ ಅಂಗಳಕ್ಕೆ ಕಳೆದ ವರ್ಷ ಅಕ್ಟೋಬರ್ 8 ರಂದು ಮರಳಿದೆ. ಏರ್‌ಲೈನ್ಸ್ ಬಿಡ್ ಅನ್ನು ಯಶಸ್ವಿಯಾಗಿ ಗೆದ್ದ ನಂತರ ಟಾಟಾ ಗ್ರೂಪ್ ಜನವರಿ 27 ರಂದು ಏರ್ ಇಂಡಿಯಾವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು.ಇದೀಗ ಏರ್ ಇಂಡಿಯಾ ನಿನ್ನೆ ಅರ್ಹತಾ ವಯಸ್ಸನ್ನು 55 ರಿಂದ 40 ಕ್ಕೆ ಇಳಿಸಿದೆ ಮತ್ತು ನಗದು ಪ್ರೋತ್ಸಾಹವನ್ನು ಘೋಷಿಸಿದೆ.

ಏಪ್ರಿಲ್‌ನಿಂದ, ಏರ್‌ಲೈನ್‌ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಏರ್‌ಲೈನ್‌ನ ಉನ್ನತ ನಿರ್ವಹಣೆಗಾಗಿ ಶ್ರಮ ವಹಿಸಿದ್ದು, ಜೊತೆಗೆ ಟಾಟಾ ಸಮೂಹದ ಇತರ ಕಂಪನಿಗಳಾದ ಟಾಟಾ ಸ್ಟೀಲ್ ಮತ್ತು ವಿಸ್ತಾರಾದಲ್ಲಿ ಕೆಲಸ ಮಾಡಿದ ಹಿರಿಯ ಮತ್ತು ಮಧ್ಯಮ ಮಟ್ಟದ ಕಾರ್ಯನಿರ್ವಾಹಕರನ್ನು ಕರೆತಂದಿದ್ದಾರೆ.

Leave A Reply

Your email address will not be published.