ಕಲುಷಿತ ನೀರು ಸೇವಿಸಿ 63 ಜನ ಅಸ್ವಸ್ಥ

ರಾಯಚೂರು: ನಗರದಲ್ಲಿ ಕಲುಷಿತ ಕುಡಿಯುವ ನೀರು ಕುಡಿದು ವಾಂತಿ-ಭೇದಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದು, 63ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದಿರಾನಗರದ ನಿವಾಸಿ ಮಲ್ಲಮ್ಮ ಮುದುಕಪ್ಪ (40) ನರ್ಜಲಿಕರಣದಿಂದ ಮೃತಪಟ್ಟಿದ್ದಾರೆ. 63ಕ್ಕೂ ಹೆಚ್ಚು ಜನರು ನಿರ್ಜಲೀಕರಣ, ವಾಂತಿ, ಭೇದಿ, ಮೂತ್ರಪಿಂಡದ ತೊಂದರೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಅನಾರೋಗ್ಯಕ್ಕೆ ಒಳಗಾದವರಲ್ಲಿ 23 ಮಕ್ಕಳಿದ್ದು, ಮೂರು ಜನರಲ್ಲಿ ಮೂತ್ರಪಿಂಡ, ಒಬ್ಬರಿಗೆ ಡಯಾಲೀಸಿಸ್ ಸಮಸ್ಯೆ ಕಾಡುತ್ತಿದೆ’ ಎಂದು ರಿಮ್ಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ನಗರಸಭೆಯಿಂದ ಪೂರೈಕೆಯಾ ಗುವ ನೀರನ್ನೇ ಅವಲಂಬಿ ಸಿರುವ ಕೊಳೆಗೇರಿ ನಿವಾಸಿಗಳ ಆರೋಗ್ಯವು ಕಲುಷಿತ ನೀರಿನಿಂದ ಏರುಪೇರಾಗಿದೆ. ನೀರು ಶುದ್ಧೀಕರಣ ಮಾಡುವುದು, ಪೈಪ್‌ಲೈನ್‌ ದುರಸ್ತಿ ಮಾಡುವಂತೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದರು.

Leave A Reply

Your email address will not be published.