ಕೊನೆಗೂ ರೈತರ ಖಾತೆಗೆ ಸೇರಿದ ಪಿಎಂ ಕಿಸಾನ್ ಹಣ |  ರೈತರ ಮುಖದಲ್ಲಿ ಮಂದಹಾಸ

ಮುಂಗಾರು ಪ್ರವೇಶದ ಬರುವಿಕೆಯನ್ನು ಕಾತುರತೆಯಿಂದ ನೋಡುತ್ತಿರುವ ಜನರಿಗೆ ಮತ್ತೊಂದು ಸಿಹಿ ಸುದ್ದಿ ದೊರಕಿದೆ.  ಈ ಬಾರಿಯ ಮಳೆ ಬೇಗನೇ ಬರುವ ಸಂದೇಶದ ಜೊತೆ ಜೊತೆಗೆ ಸರ್ಕಾರದಿಂದ ನಾಲ್ಕು ತಿಂಗಳಿಗೊಮ್ಮೆ ಸಿಗುವ ಸಹಾಯಧನದ ನಿರೀಕ್ಷೆಯಲ್ಲಿ ಕುಳಿತಿರುವ ರೈತರ ಕೈಗೆ ಹಣ ಕೂಡಾ ಬಂದು ಸೇರಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರ  ರೈತರ ಖಾತೆಗಳಿಗೆ ಜಮೆ ಮಾಡಿದೆ. 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮುಖಾಂತರ ಕೇಂದ್ರ ಸರ್ಕಾರ ರೈತರಿಗೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6000ರೂ. ಆರ್ಥಿಕ ಸಹಾಯ ನೀಡುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ 2000ರೂ. ಅನ್ನು ಸರ್ಕಾರ ಜಮೆ ಮಾಡುತ್ತದೆ. ಈ ರೀತಿ ಇಲ್ಲಿಯ ತನಕ ಸರ್ಕಾರ 10 ಕಂತುಗಳಲ್ಲಿ ರೈತರ ಖಾತೆಗಳಿಗೆ ಹಣ ಜಮೆ ಮಾಡಿದೆ. ಈಗ 11 ನೆಯ ಕಂತು ಕೂಡಾ ಬಿಡುಗಡೆಯಾಗಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಬೀರಿದೆ.

ಪಿಎಂ ಕಿಸಾನ್ ಯೋಜನೆಯ 11 ನೇ ಕಂತಿನ ಹಣ ಕೊನೆಗೂ ರೈತರ ಖಾತೆಗೆ ಜಮೆಯಾಯಿತು. ಕಳೆದ ಒಂದು ತಿಂಗಳಿಂದ ರೈತರಿಗೆ ಪಿಎಂ ಕಿಸಾನ್ ಯೋಜನೆಯ 11ನೇ ಕಂತಿನ ಹಣ ಯಾವಾಗ ಜಮೆಯಾಗುತ್ತದೆ ಎಂಬುದರ ಕುರಿತು ಕುತೂಹಲವಿತ್ತು. ಏಕೆಂದರೆ ಇಕೆವೈಸಿ ಮಾಡಿಸಲು ಮೇ 31 ಕೊನೆಯ ದಿನಾಂಕವಾಗಿದ್ದರಿಂದ ರೈತರಿಗೆ ಯಾವಾಗ ಜಮೆಯಾಗುತ್ತದೆ. ಇಕೆವೈಸಿ ಗಡುವು ಮುಗಿದ ನಂತರ ಜಮೆಯಾಗುತ್ತೋ ಅಥವಾ ಅದಕ್ಕಿಂತ ಮುಂಚಿತವಾಗಿ ಜಮೆಯಾಗುತ್ತೋ ಎಂಬ ಕುತೂಹಲವಿತ್ತು.

ಪ್ರಧಾನಿ ನರೇಂದ್ರ ಮೋದಿಯವರು ಕೊನೆಗೂ ಪಿಎಂ ಕಿಸಾನ್ 11 ನೇ ಕಂತಿನ ಹಣವನ್ನು ಹಿಮಾಚಲ ಪ್ರದೇಶದಲ್ಲಿ ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು. ದೇಶದ 10 ಕೋಟಿಗೂ ಅಧಿಕ ರೈತರಿಗೆ ಸುಮಾರು 20 ಕೋಟಿ ರೂಪಾಯಿ ಹಣ ರೈತರ ಖಾತೆಗೆ ಜಮೆಯಾಯಿತು.

ಹೆಸರು ಪರಿಶೀಲಿಸುವುದು ಹಾಗೂ ಹೆಸರು
ನೋಂದಾಯಿಸುವುದು ಹೇಗೆ ?

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಈಗಾಗಲೇ ನೋಂದಾಯಿಸಿಕೊಂಡಿರುವರು 2020ರ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು pmkisan.gov.in ವೆಬ್ ಸೈಟ್ ಮೂಲಕ ಪರಿಶೀಲಿಸಬಹುದು. ಅಲ್ಲದೆ, ನೋಂದಣಿಯಾಗಿಲ್ಲದವರು ಕೂಡ, ಸರಕಾರದಿಂದ ಅರ್ಜಿ ಕರೆದಾಗ ಇದೇ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.

ರೈತರು ಮೊದಲನೆಯಾದಾಗಿ pmkisan.gov.in ವೆಬ್ ಸೈಟ್ ಗೆ ಲಾಗ್ ಆನ್ ಆಗಬೇಕು.
ನಂತರ ‘ಫಾರ್ಮರ್ ಕಾರ್ನರ್’ ವಿಭಾಗದಲ್ಲಿ ಬೆನಿಫಿಷಿಯರಿ ಲಿಸ್ಟ್ (ಫಲಾನುಭವಿಗಳ ಪಟ್ಟಿ) ಟ್ಯಾಬ್ ಕ್ಲಿಕ್ ಮಾಡಬೇಕು.
ಇಲ್ಲಿ ಸರಕಾರದಿಂದ ಯೋಜನೆಯ ಪ್ರಯೋಜನ ಪಡೆದ ರೈತರ ಹೆಸರುಗಳನ್ನು ಪ್ರಕಟಿಸುತ್ತದೆ. ರಾಜ್ಯ / ಜಿಲ್ಲೆ / ತಾಲೂಕು/ ಗ್ರಾಮವಾರು ಫಲಾನುಭವಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಆಯಾ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮಗಳನ್ನು ಕ್ಲಿಕ್ ಮಾಡುವ ಮೂಲಕ ಫಲಾನುಭವಿಗಳ ಸಂಪೂರ್ಣ ಪಟ್ಟಿಯನ್ನ ನೋಡಬಹುದು. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬಹುದು.

ಈ ಟ್ಯಾಬ್ ನಲ್ಲಿ ರೈತರು ಪಿಎಂ ಕಿಸಾನ್ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ. ನೀವು ಈ ಹಿಂದೆ ಅರ್ಜಿ ಸಲ್ಲಿಸಿದ್ದರೆ ಮತ್ತು ನಿಮ್ಮ ಆಧಾರ್ ಸಂಖ್ಯೆ ಸರಿಯಾಗಿ ಅಪ್ ಲೋಡ್ ಆಗಿಲ್ಲದಿದ್ದರೆ ಅಥವಾ ಯಾವುದೋ ಕಾರಣದಿಂದ ಆಧಾರ್ ಸಂಖ್ಯೆಯನ್ನ ತಪ್ಪಾಗಿ ನಮೂದಿಸಿದ್ದರೆ, ಅದರ ಮಾಹಿತಿಯೂ ಅದರಲ್ಲಿ ಸಿಗುತ್ತದೆ.

ಪ್ರತಿ ವರ್ಷವೂ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗುವುದು. ಒಂದು ವೇಳೆ ನೀವು ಈ ಯೋಜನೆಯಡಿ ನೋಂದಣಿ ಆಗಿರದಿದ್ದರೆ. ಆನ್‌ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು.

Leave A Reply

Your email address will not be published.