ಮೂರು ಅತ್ಯದ್ಭುತ ಹೊಸ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿದೆ ಏರ್‌ಟೆಲ್ !!

ಸ್ಮಾರ್ಟ್‌ಫೋನ್‌ ಬಳಕೆದಾರರು ಇಂಟರ್ನೆಟ್ ಸೌಲಭ್ಯ ಹೊಂದಿರುವುದು ಸಾಮಾನ್ಯ. ಆದರೆ ನಮ್ಮ ಮನೆಗಳಲ್ಲಿ, ಚಲನಚಿತ್ರಗಳನ್ನು ವೀಕ್ಷಿಸಲು ಅಥವಾ ಡೌನ್‌ಲೋಡ್ ಮಾಡಲು, ವೈಫೈ ಬಳಸುವುದು ಉತ್ತಮ ಆಯ್ಕೆಯಾಗಿದೆ. ಒಂದು ವೇಳೆ ನೀವೂ ಕೂಡ ನಿಮ್ಮ ಮನೆಯಲ್ಲಿರುವ ವೈ-ಫೈ ವೇಗದಿಂದ ತೊಂದರೆಯನ್ನು ಅನುಭವಿಸುತ್ತಿದ್ದರೆ ಅಥವಾ ನಿಮ್ಮ ಮನೆಗೆ ಉತ್ತಮ ವೈಫೈ ಸಂಪರ್ಕದ ಹುಡುಕಾಟದಲ್ಲಿದ್ದರೆ ಏರ್‌ಟೆಲ್ ಕಡೆಯಿಂದ ನಿಮಗೊಂದು ಸಿಹಿಸುದ್ದಿ ಇದೆ.

 

ದೇಶದ ಖ್ಯಾತ ಟೆಲಿಕಾಂ ಆಪರೇಟರ್ ಏರ್‌ಟೆಲ್ ತನ್ನ ಬ್ರಾಡ್‌ಬ್ಯಾಂಡ್ ಸೇವೆಯಾದ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಅಡಿ ಮೂರು ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಮೂರು ಯೋಜನೆಗಳು ಅತ್ಯಂತ ಕೈಗೆಟುಕುವ ದರದ ಯೋಜನೆಗಳಾಗಿದ್ದು, ಅದ್ಭುತ ಪ್ರಯೋಜನಗಳನ್ನು ನೀಡುತ್ತವೆ. ಈ ಯೋಜನೆಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಏರ್‌ಟೆಲ್ ತನ್ನ ಬಳಕೆದಾರರಿಗೆ ಮೂರು ಹೊಸ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಯೋಜನೆಗಳು ಕಡಿಮೆ ಬೆಲೆಯಲ್ಲಿ ಅದ್ಭುತ ಪ್ರಯೋಜನಗಳನ್ನು ನೀಡುವ ಯೋಜನೆಗಳಾಗಿವೆ. ಭಾರತಿ ಏರ್‌ಟೆಲ್‌ನ ಸಿಇಒ ವೀರ್ ಇಂದರ್ ನಾಥ್ ಅವರು ಭಾರತದ ಮನರಂಜನಾ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ. ಈ ಯೋಜನೆಗಳು ಹೆಚ್ಚಿನ ವೇಗದ ಡೇಟಾ ಮತ್ತು ಕಡಿಮೆ ವೆಚ್ಚದಲ್ಲಿ ಅನೇಕ OTT ಚಂದಾದಾರಿಕೆಗಳೊಂದಿಗೆ ಹೆಚ್ಚಿನ ಪ್ರಯೋಜನಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿವೆ ಎಂದು ಅವರು ಹೇಳಿದ್ದಾರೆ.

ಏರ್‌ಟೆಲ್ ರೂ. 699ರ ಬ್ರಾಡ್‌ಬ್ಯಾಂಡ್ ಯೋಜನೆ

ಈ ಪಟ್ಟಿಯಲ್ಲಿರುವ ಅತ್ಯಂತ ಅಗ್ಗದ ಯೋಜನೆ ಇದಾಗಿದೆ. ಇದು ರೂ. 699 ಗೆ ಆಕರ್ಷಕ ಪ್ರಯೋಜನಗಳೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ, ನಿಮಗೆ 3.3TB ಅಂದರೆ 40Mbps ವೇಗದಲ್ಲಿ ಪ್ರತಿ ತಿಂಗಳು 3300GB ಡೇಟಾವನ್ನು ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಈ ಯೋಜನೆಯು 15 OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಯೊಂದಿಗೆ ಬರುತ್ತಿದೆ. OTT ಪ್ರಯೋಜನಗಳಲ್ಲಿ Netflix ಮತ್ತು Amazon Prime ವೀಡಿಯೊಗೆ ಪ್ರವೇಶವನ್ನು ನೀಡಲಾಗಿಲ್ಲ ಎಂಬುದು ಇಲ್ಲಿ ಗಮನಾರ್ಹ. ನೀವು ಈ ಎಲ್ಲಾ ಯೋಜನೆಗಳನ್ನು ಕಂಪನಿಯ ವೆಬ್ ಸೈಟ್ ಮೂಲಕ ಖರೀದಿಸಬಹುದು.

ಏರ್‌ಟೆಲ್ ರೂ. 1099ರ ಬ್ರಾಡ್‌ಬ್ಯಾಂಡ್ ಯೋಜನೆ

1099 ರೂ.ಗಳ ಈ ಯೋಜನೆಯಲ್ಲಿ, ಏರ್‌ಟೆಲ್ ಪ್ರತಿ ತಿಂಗಳು 3300GB ಅಂದರೆ 3.3TB ಡೇಟಾವನ್ನು 200Mbps ವೇಗದಲ್ಲಿ ನೀಡುತ್ತಿದೆ. Amazon Prime Video, Disney + Hotstar, Eros Now, SonyLIV, Lionsgate Play, Shemaroo ಮುಂತಾದ ಹಲವು ಹೆಸರುಗಳು ಶಾಮೀಲಾಗಿರುವ ಈ ಯೋಜನೆಯಲ್ಲಿ ನಿಮಗೆ ಒಟ್ಟು 16 OTT ಪ್ಲಾಟ್ಫಾರ್ಮ್ ಗಳ ಚಂದಾದಾರಿಕೆಗಳನ್ನು ನೀಡಲಾಗುತ್ತಿದೆ. ಈ ಯೋಜನೆಯು Netflix ಚಂದಾದಾರಿಕೆಯೊಂದಿಗೆ ಬರುವುದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್ ಆಫರ್ ಅನ್ನು ಈ ಯೋಜನೆಯಲ್ಲಿ ಸೇರಿಸಲಾಗಿದ್ದು, ಇದರಲ್ಲಿ 350 ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳನ್ನು ಸಹ ನೀಡಲಾಗುತ್ತಿದೆ. ಆದರೆ, ನೀವು ಸೆಟ್-ಟಾಪ್ ಬಾಕ್ಸ್‌ಗಳ ಬಗ್ಗೆ ಹೇಳುವುದಾದರೆ, ಈ ಟಿವಿ ಚಾನೆಲ್‌ಗಳ ಲಾಭವನ್ನು ಪಡೆಯಲು, ನೀವು 2 ಸಾವಿರ ರೂಪಾಯಿಗಳನ್ನು ಪಾವತಿಸಿ ಏರ್‌ಟೆಲ್ 4K ಎಕ್ಸ್‌ಸ್ಟ್ರೀಮ್ ಬಾಕ್ಸ್ ತೆಗೆದುಕೊಳ್ಳಬೇಕು.

ಏರ್‌ಟೆಲ್ ರೂ. 1599ರ ಯೋಜನೆ

ಬಿಡುಗಡೆ ಮಾಡಲಾದ ಮೂರು ಬ್ರಾಡ್‌ಬ್ಯಾಂಡ್ ಯೋಜನೆಗಳಲ್ಲಿ, ಈ ಯೋಜನೆಯು ಅತ್ಯಂತ ದುಬಾರಿಯಾಗಿದೆ ಮತ್ತು ಹೆಚ್ಚು ಪ್ರಯೋಜನಗಳನ್ನು ಹೊಂದಿದೆ. ಈ ಯೋಜನೆಯಲ್ಲಿ, ನಿಮಗೆ 3.3TB ಅಥವಾ 3300GB ಡೇಟಾವನ್ನು ನೀಡಲಾಗುತ್ತಿದೆ, ಇದರ ವೇಗವು 300Mbps ಆಗಿದೆ. ಈ ಡೇಟಾವನ್ನು ಮಾಸಿಕ ಆಧಾರದ ಮೇಲೆ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ, ಡೇಟಾದ ಜೊತೆಗೆ, ನಿಮಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವೀಡಿಯೋ, ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಗಳನ್ನು ಸಹ ನೀಡಲಾಗುತ್ತಿದೆ. ಅಷ್ಟೇ ಅಲ್ಲ ಈ ಚಂದಾದಾರಿಕೆಗಳೊಂದಿಗೆ, Airtel Xstream Premium ನ ಒಂದೇ ಲಾಗಿನ್ ಮೂಲಕ, SonyLIV, Eros Now, Lionsgate Play, ManoramaMax, Shemaroo ಮತ್ತು Shorts TV ನಂತಹ 14 OTT ಪ್ಲಾಟ್‌ಫಾರ್ಮ್‌ಗಳಿಗೆ ನಿಮಗೆ ಪ್ರವೇಶವನ್ನು ನೀಡಲಾಗುತ್ತಿದೆ.

Leave A Reply

Your email address will not be published.