ಎಂಡೋಪೀಡಿತ ರೋಗಕ್ಕೆ ತುತ್ತಾಗಿದ್ದ ಪುತ್ರಿಯನ್ನು ಕೊಲೆಗೈದ ತಾಯಿ!

ಕಾಸರಗೋಡು: ಎಂಡೋಸಲ್ಫಾನ್ ರೋಗಕ್ಕೆ ತುತ್ತಾಗಿದ್ದ ಪುತ್ರಿಯನ್ನು ತಾಯಿಯೋರ್ವಳು ಕೊಲೆಗೈದು ತಾನೂ ಆತ್ಮಹತ್ಯೆಗೈದ ಘಟನೆ ರಾಜಪುರ ಸಮೀಪದ ಚಾಮುಂಡಿಕುನ್ನು ಎಂಬಲ್ಲಿ ನಡೆದಿದೆ.

ಎಂಡೋಸಲ್ಫಾನ್ ಸಂತ್ರಸ್ಥೆ ರೇಶ್ಯಾ(28)ರನ್ನು ತಾಯಿ ವಿಮಲಕುಮಾರಿ (58) ಕೊಲೆಗೈದಿದ್ದು, ನಂತರದಲ್ಲಿ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆಯು ಸೋಮವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ನಡೆದಿದ್ದು, ಮೃತದೇಹಗಳನ್ನು ಜಿಲ್ಲಾಸ್ಪತ್ರೆಯಲ್ಲಿರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಪುರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.