ಅವಳ ಬಿಟ್ಟು ಇರಲಾರೆ | ಸಲಿಂಗ ಕಾಮದ ಜೋಡಿಗಾಗಿ ಕಣ್ಣೀರಿಡುತ್ತಿರುವ ಯುವತಿ !!!

ಸಲಿಂಗ ಕಾಮದ ಪ್ರೀತಿಯಲ್ಲಿ ಬಿದ್ದ ಜೋಡಿಯೊಂದು ಬೇರೆ ಬೇರೆಯಾಗಿದ್ದು, ನಮ್ಮನ್ನು ಒಟ್ಟಿಗೆ ಬದುಕಲು ಬಿಡಿ ಎಂದು ಹೋರಾಟ ಮಾಡುತ್ತಿದ್ದಾರೆ. ಈ ವಿಚಿತ್ರ ಘಟನೆಯೊಂದು ಕೇರಳದ ಕೋಯಿಕ್ಕೋಡ್ ನಲ್ಲಿ ಬೆಳಕಿಗೆ ಬಂದಿದೆ.

ಅಲುವಾ ಮೂಲದ ಆಧಿಲಾ ನಸ್ರಿನ್ (22) ಮತ್ತು ಕೊಯಿಕ್ಕೋಡ್ ಮೂಲದ ಫಾತಿಮಾ ನೋರಾ (23) ಎಂಬ ಯುವತಿಯರು ಪ್ರೀತಿಯಲ್ಲಿ ಬಿದ್ದ ಪ್ರೇಮಿಗಳು. ಆದರೆ, ಇಬ್ಬರ ಸಲಿಂಗಕಾಮಕ್ಕೆ ಕುಟುಂಬದವರು ಕಟ್ಟುನಿಟ್ಟಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಕಂಗೆಟ್ಟ ಇಬ್ಬರು ಬಾಳಲು ಸಾಕಷ್ಟು ಹೋರಾಟ ನಡೆಸುತ್ತಿದ್ದು, ಪೊಲೀಸ್ ಇಲಾಖಾ ಮತ್ತು ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ.

ನಾನು ಬದುಕುವುದಾದರೆ, ನೋರಾ ಜತೆಯಲ್ಲೇ ಎಂಬ ನಿರ್ಧಾರಕ್ಕೆ ಬಂದಿರುವ ಆಧಿಲಾ, ಮಾಧ್ಯಮದ ಮುಂದೆ ತನ್ನ ಕತೆಯನ್ನು ಬಿಚ್ಚಿಟ್ಟಿದ್ದಾಳೆ.

ಇವರಿಬ್ಬರ ಭೇಟಿ ಸೌದಿ ಅರೇಬಿಯಾದಲ್ಲಿ 11ನೇ ತರಗತಿ ಓದುವಾಗ ಆಗುತ್ತದೆ. ದಿನ ಕಳೆದಂತೆ ಇಬ್ಬರ ಸ್ನೇಹ ಗಾಢವಾಗುತ್ತದೆ. ಆಗ ಇಬ್ಬರದ್ದು ಸಲಿಂಗಕಾಮ ಎಂದು ಅರಿವಾಗುತ್ತದೆ. ಅಂದಿನಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ತುಂಬಾ ಹತ್ತಿರವಾಗುತ್ತಾರೆ. ಇದರ ಜೊತೆಗೆ ಇವರಿಬ್ಬರ ಪೋಷಕರು ಕೂಡಾ ಫ್ರೆಂಡ್ಸ್ ಆಗಿರುವುದರಿಂದ ಉನ್ನತ ಶಿಕ್ಷಣಕ್ಕಾಗಿ ಕೊಯಿಕ್ಕೋಡ್‌ನಲ್ಲಿರುವ ಕಾಲೇಜಿಗೆ ಕಳುಹಿಸಲು ನಿರ್ಧಾರ ಮಾಡುತ್ತಾರೆ. ಇದು ಇವರಿಬ್ಬರಿಗೆ ಮತ್ತಷ್ಟು ಹತ್ತಿರ ಬರಲು ಸಹಾಯ ಮಾಡುತ್ತದೆ.

ಇದರ ನಡುವೆ ಎರಡು ಕುಟುಂಬಕ್ಕೆ ಇಬ್ಬರ ಸಂಬಂಧದ ಬಗ್ಗೆ ತಿಳಿಯುತ್ತದೆ. ಕೂಡಲೇ ಪೋಷಕರು ಇಬ್ಬರನ್ನು ಬೇರೆ ಬೇರೆ ಕಾಲೇಜಿಗೆ ಕಳುಹಿಸುವ ನಿರ್ಧಾರಕ್ಕೆ ಬರುತ್ತಾರೆ. ಇಬ್ಬರ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹಾಕಿ ಇಬ್ಬರನ್ನೂ ದೂರ ಮಾಡಲು ನೋಡುತ್ತಾರೆ ಪೋಷಕರು. ಆದರೆ, ಇಬ್ಬರು ಸಾಮಾಜಿಕ ಜಾಲತಾಣದ ಮೂಲಕ ಮತ್ತೆ ಸಂಪರ್ಕ ಬೆಳೆಸುತ್ತಾರೆ. ಅಲ್ಲದೇ ಇಬ್ಬರು ಮತ್ತೆ ಭೇಟಿಯಾಗಿ, ಸಲಿಂಗ ಪ್ರೇಮಿಗಳು, ಸಲಿಂಗಕಾಮದ ಬಗ್ಗೆ ಹೆಚ್ಚು ಅರಿತುಕೊಂಡು ಒಟ್ಟಿಗೆ ವಾಸಿಸಲು ದಿಟ್ಟ ನಿರ್ಧರಿಸುತ್ತಾರೆ.

ಇದರ ನಡುವೆ ಇಬ್ಬರು ಯುವತಿಯರು ಮೇ 19ರಂದು ತಮ್ಮ ಮನೆ ಬಿಟ್ಟು ಹೋಗುತ್ತಾರೆ. ಇಬ್ಬರು ಕೊಯಿಕ್ಕೋಡ್‌ನ ಆಶ್ರಯಧಾಮದಲ್ಲಿ ಇರುತ್ತಾರೆ. ಆದರೆ, ಪಾಲಕರ ಕೈಗೆ ಮತ್ತೆ ಸಿಕ್ಕಿಬೀಳುತ್ತಾರೆ. ಇಬ್ಬರು ಒಟ್ಟಿಗೆ ಬಾಳಲು ಅನುಮತಿ ನೀಡುವಾಗಿ ಭರವಸೆ ನೀಡಿ ನನ್ನನ್ನು ಆಶ್ರಯಧಾಮದಿಂದ ಪಾಲಕರು ಅಲುವಾಗೆ
ಕರೆದೊಯ್ಯುತ್ತಾರೆ. ಅನಂತರ ಇಬ್ಬರ ಭೇಟಿ ಸಾಧ್ಯವಾಗುವುದಿಲ್ಲ.

https://www.instagram.com/tv/CeIqt4qIhHo/?utm_source=ig_web_copy_link

ನಮ್ಮ ಪಾಲಕರು ಮತ್ತು ಸಂಬಂಧಿಕರು ನನ್ನನ್ನು ಅಣಕಿಸುತ್ತಿದ್ದಾರೆ ಮತ್ತು ಸಲಿಂಗಕಾಮವು ಮಾನಸಿಕ ಅಸ್ವಸ್ಥತೆ ಎಂದು ತಿರಸ್ಕಾರದಿಂದ ನಡೆಸಿಕೊಳ್ಳುತ್ತಿದ್ದಾರೆ. ಸಲಿಂಗ ಜೋಡಿ ಒಟ್ಟಿಗೆ ಬಾಳುವುದನ್ನು ಬಹುತೇಕ ಜನರು ಸ್ವೀಕರಿಸುವುದಿಲ್ಲ. ನಾವಿಬ್ಬರು ಸಾಕಷ್ಟು ಭಾವನಾತ್ಮಕ ಹಾಗೂ ದೈಹಿಕ ಹಿಂಸೆಗೆ ಒಳಗಾಗಿದ್ದೇವೆ. ಬಯಸಿದರೆ ಸಲಿಂಗ ಜೋಡಿ ಒಟ್ಟಿಗೆ ಬಾಳಬಹುದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ನಾವು ಒಟ್ಟಿಗೆ ಇರಲು ಯಾರೂ ಬಿಡುತ್ತಿಲ್ಲ. ನೊರಾ ಜತೆ ಮತ್ತೆ ಸೇರುತ್ತೇನೆ ಎಂಬ ಭರವಸೆ ಈಗಲೂ ಇದೆ ಎಂದು ಆಧಿಲಾ ಹೇಳಿದ್ದಾಳೆ. ಅಲ್ಲದೆ, ನೋರಾಳಿಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಆಧಿಲಾ, ನ್ಯಾಯಾಲಯದ ಮೆಟ್ಟಿಲೇರಲು ನಿರ್ಧಾರ ಮಾಡಿದಾಳೆ. ಈ ವೀಡಿಯೋ ಮೂಲಕವೂ ಆಧಿಲಾ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾಳೆ.

Leave A Reply

Your email address will not be published.