ಪುತ್ತೂರು : ತವರು ಮನೆಗೆ ಬಂದಿದ್ದ ಮಹಿಳೆ, ತನ್ನ ಪುಟ್ಟ ಮಗುವಿನೊಂದಿಗೆ ನಾಪತ್ತೆ !

ಪುತ್ತೂರು : ತವರು ಮನೆಗೆ ಹೋಗಿದ್ದ ಮಹಿಳೆಯೊಬ್ಬರು ತನ್ನ ಪುಟ್ಟ ಕಂದನೊಂದಿಗೆ ನಾಪತ್ತೆಯಾಗಿರುವ ಘಟನೆ ನಡೆದಿದೆ.

ನೆಟ್ಟಣಿಗೆ ಮುನ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪುಳಿತ್ತಡಿ ನಿವಾಸಿ ನೆಲ್ಯಾಡಿ ಅಲ್ಲಾ ಎಂಬವರ ಪತ್ನಿ ಇರ್ಶಾನಾ (25) ಹಾಗೂ ಅವರ ಒಂದೂವರೆ ವರ್ಷದ ಮಗ ಮೊಹಮ್ಮದ್ ಆದಿಲ್ ನಾಪತ್ತೆಯಾಗಿರುವ ಬಗ್ಗೆ ಸಂಪ ಠಾಣೆಯಲ್ಲಿ ದೂರು ದಾಖಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ವಾರದ ಹಿಂದೆ ಇರ್ಶಾನಾ ಪುಳಿತ್ತಡಿಯಲ್ಲಿರುವ ತನ್ನ ತವರು ಮನೆಗೆ ಹೋಗಿದ್ದು, ಮದುವೆಗೆಂದು ಕೇರಳಕ್ಕೆ ತೆರಳಿದ್ದ ಆಕೆಯ ಪೋಷಕರು ಮೇ 20 ರಂದು ಮನೆಗೆ
ಹಿಂದಿರುಗಿದಾಗ ಆಕೆ ತನ್ನ ಮಗನೊಂದಿಗೆ ನಾಪತ್ತೆಯಾಗಿದ್ದಳು.

ಈ ಸಂಬಂಧ ಇರ್ಶಾನ ತಂದೆ ಅಬ್ದುಲ್ ಲತೀಫ್ ನೀಡಿದ ದೂರಿನ ಮೇರೆಗೆ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top
%d bloggers like this: