ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಭಿವೃದ್ದಿ ಕುಂಠಿತ ನಿಟ್ಟೂರು ಗ್ರಾಮ

ಸಿರುಗುಪ್ಪ : ರಾಜ್ಯದ ಯಾವುದೇ ಹಳ್ಳಿಗಳು ಅಭಿವೃದ್ದಿ ವಂಚಿತವಾಗಬಾರದು ಎಂಬ ಉದ್ದೇಶದಿಂದ ಸರ್ಕಾರವು ಅನೇಕ ಯೋಜನೆಗಳ ಲಾಭವನ್ನು ಹಳ್ಳಿಗಳಲ್ಲೇ ನೀಡುವಂತಾಗಬೇಕೆAದು ಅಧಿಕಾರಿಗಳ ನಡೆ ಹಳ್ಳಿಯ ಕಡೆಯೆಂಬ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

ಆದರೆ ಇದಕ್ಕೆ ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸದೇ ಕುಂಟು ನೆಪಗಳನ್ನು ಹೇಳುವ ಮೂಲಕ ಅಭಿವೃದ್ದಿಯನ್ನು ಮರೆತಿದ್ದು ತಾಲೂಕಿನೆಲ್ಲೆಡೆ ಹಲವು ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ.
ತಾಲೂಕಿನ ನಡವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಟ್ಟೂರು ಗ್ರಾಮವು ಸಾಮ್ರಾಟ್ ಅಶೋಕನ ಸಾಮ್ರಾಜ್ಯದ ಬೀಡು ಎನ್ನುವ ಐತಿಹಾಸಿಕ ಕುರುಹಿನ ಗ್ರಾಮವು ಇಂದು ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ.
ಹಲವು ವರ್ಷಗಳೇ ಕಳೆದರೂ ನಿರ್ಮಾಣವಾಗದ ಬಸ್ ನಿಲ್ದಾಣ : ಈ ಮೊದಲು ನಿರ್ಮಾಣವಾಗಿದ್ದ ಬಸ್ ನಿಲ್ದಾಣವು ಶಿಥಿಲಾವಸ್ಥೆ ತಲುಪಿದ್ದರಿಂದ ಕಟ್ಟಡ ನೆಲಸಮಗೊಳಿಸಿ ಹಲವು ವರ್ಷಗಳೇ ಕಳೆದರೂ ಮರು ನಿರ್ಮಾಣವಾಗಿಲ್ಲ ಪ್ರಯಾಣಿಕರು ಬಸ್ಸಿಗಾಗಿ ಬಿಸಿಲು ಮಳೆಯಲ್ಲೇ ಕಾಯುವ ಸ್ಥಿತಿಯಾಗಿದಲ್ಲದೇ ಸಾಯಂಕಾಲವಾದರೇ ಸಾಕು ಅಕ್ರಮ ಮದ್ಯ ಮಾರಾಟದ ಕೇಂದ್ರವಾಗಿದೆ.
ವ್ಯರ್ಥವಾಗಿರುವ ಉಪಆರೋಗ್ಯ ಕೇಂದ್ರ : ಗ್ರಾಮದ ಸಾರ್ವಜನಿಕರಿಗೆ, ಗರ್ಭಿಣಿಯರಿಗೆ. ಅನುಕೂಲವಾಗಲೆಂದು ಉಪ ಆರೋಗ್ಯ ಕೇಂದ್ರವು ನಿರ್ಮಾಣವಾಗಿದ್ದು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್ ಉನ್ನತ ವ್ಯಾಸಂಗಕ್ಕೆ ತೆರಳಿದಾಗಿನಿಂದ ಖಾಲಿ ಬಿದ್ದಿದಲ್ಲದೇ ಖಾಸಗಿ ಕುಟುಂಬಗಳ ವಾಸಕ್ಕೆ ಉಪಯೋಗಿಸಲಾಗುತ್ತಿತ್ತು.
Àಣ್ಣಪುಟ್ಟ ಚಿಕಿತ್ಸೆಗಾಗಿ ಇಲ್ಲಿನ ಜನರು ದೂರದ ತಾಲೂಕು ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದ್ದು ಇಲ್ಲಿ ಉಪ ಆರೋಗ್ಯ ಕೇಂದ್ರವು ಇದ್ದು ಇಲ್ಲದಂತಾಗಿ ವ್ಯರ್ಥವಾಗಿದೆ.
ಸಿ.ಸಿ ರಸ್ತೆಯ ಮೇಲೆಯೇ ತಿಪ್ಪೆಗುಂಡಿ ಹುಲ್ಲಿನ ಬಣವಿ : ತೆಕ್ಕಲಕೋಟೆ ಮಾರ್ಗದಿಂದ ಅಂಗನವಾಡಿ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗಲು ಸುಸಜ್ಜಿತ ಸಿ.ಸಿ ರಸ್ತೆ ನಿರ್ಮಾಣವಾಗಿದೆಯಾದರೂ ಸಿಸಿ ರಸ್ತೆಯ ಮೇಲೆಯೇ ತಿಪ್ಪೆಗಳನ್ನು ಹಾಕಿದ್ದರಿಂದ ಸಾರ್ವಜನಿಕರು ತಿರುಗಾಡಲು ರಸ್ತೆಯೇ ಇಲ್ಲದಂತಾಗಿದೆ. ಮಕ್ಕಳು ಶಾಲೆಯಿಂದ ಮನೆಗೆ ಮನೆಯಿಂದ ಶಾಲೆಗೆ ಈ ತಿಪ್ಪೆಗಳ ಮದ್ಯೆಯೇ ತಿರುಗಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಅಂಗನವಾಡಿ ಶಾಲೆಯ ಪಕ್ಕದಲ್ಲೇ ಹುಲ್ಲಿನ ಬಣವಿ : ಗ್ರಾಮದ ಅಂಗನವಾಡಿ ಕೇಂದ್ರ 1ಮತ್ತು2 ಕೇಂದ್ರಗಳ ಪಕ್ಕದಲ್ಲೇ ಸ್ಥಳೀಯರಿಂದ ಹುಲ್ಲಿನ ಬಣವಿಗಳನ್ನು ಹಾಕಲಾಗಿದೆ. ಸಿ.ಸಿ ರಸ್ತೆಯ ಮೇಲೆಯೇ ಹುಲ್ಲಿನ ಬಣವಿಗಳನ್ನು ಹಾಕಲಾಗಿದ್ದರೂ ಇದಕ್ಕೆ ಸಂಬAದಿಸಿದ ಗ್ರಾ.ಪಂ. ಅಧಿಕಾರಿಗಳು ತೆರವುಗೊಳಿಸದಿರುವುದು ಆಕಸ್ಮಿಕ ಬೆಂಕಿ ಅನಾಹುತಕ್ಕೆ ಆಹ್ವಾನಿಸಿದಂತಾಗಿದೆ.
ನೆನೆಗುದಿಗೆ ಬಿದ್ದಿರುವ ಸಮುದಾಯ ಭವನ ಕಟ್ಟಡಗಳು : ಸಾರ್ವಜನಿಕರ ಅನುಕೂಲಕ್ಕಾಗಿ ಸಮುದಾಯ ಭವನಗಳನ್ನು ನಿರ್ಮಿಸಲಾಗುತ್ತಿದ್ದು, ಬಹುದಿನಗಳಿಂದ ಕಾಮಗಾರಿ ಮುಗಿಯದೇ ಅರ್ಧಕ್ಕೆ ನಿಂತಿದ್ದು ಕಾಮಗಾರಿ ಮುಗಿಯುವ ಮುನ್ನವೇ ಹಾಳಾಗುತ್ತಿವೆ.
ಸರಕಾರಿ ಕಟ್ಟಡಗಳಲ್ಲಿ ಖಾಸಗಿ ವ್ಯಕ್ತಿಗಳ ವಾಸ : ಗ್ರಾಮದ ಉಪ ಆರೋಗ್ಯ ಕೇಂದ್ರ ಕಟ್ಟಡ ಮತ್ತು ಅನುದಾನ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯಲ್ಲಿ ಖಾಸಗಿ ವ್ಯಕ್ತಿಗಳ ವಾಸಕ್ಕೆ ಅನುಮತಿ ನೀಡಿದವರು ಯಾರೆಂಬುದೇ ಗ್ರಾಮಸ್ಥರ ಪ್ರಶ್ನೆಯಾಗಿದೆ.
ಮರಳು ಲಾರಿಗಳಿಂದ ರಸ್ತೆ ಹಾಳು : ಪಕ್ಕದ ಉಡೇಗೋಳ ಗ್ರಾಮದಲ್ಲಿನ ಮರಳು ಕೇಂದ್ರದಿAದ ಮರಳು ತುಂಬಿದ ಲಾರಿಗಳು ಗ್ರಾಮವನ್ನು ಆಯ್ದು ತೆಕ್ಕಲಕೋಟೆ ಮಾರ್ಗವಾಗಿ ರಾಜಧಾನಿವರೆಗೂ ಮರಳು ಸಾಗಣೆ ಮಾಡಲು ನಿರಂತರವಾಗಿ ಚಲಿಸುತ್ತಿರುವುದರಿಂದ ರಸ್ತೆ ತೀವ್ರ ಹದಗೆಟ್ಟು ಗುಂಡಿಗಳು ನಿರ್ಮಾಣವಾಗಿವೆ. ದೂಳಿನಿಂದ ಬೆಳೆಗಳ ಮೇಲೆ ಪರಿಣಾಮ ಬೀರುವಂತಾಗಿದೆ. ವಾಹನ ಸವಾರರು ತಗ್ಗುಗುಂಡಿಗಳಿAದ ಪ್ರಯಾಣಿಸಲು ತೊಂದರೆಯಾಗಿದೆ.
ನೆನೆಗುದಿಗೆ ಬಿದ್ದ ನಿಟ್ಟೂರು ಮತ್ತು ಸಿಂಗಾಪುರ ಸೇತುವೆ : ಈ ಭಾಗದ ಬಹುನಿರೀಕ್ಷಿತ ಹಾಗೂ ಬೃಹತ್ ಮಟ್ಟದ ನಿಟ್ಟೂರು ಮತ್ತು ಸಿಂಗಾಪುರ ಸೇತುವೆ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿ ಹಲವಾರು ವರ್ಷಗಳೇ ಕಳೆದರೂ ಸೇತುವೆ ನಿರ್ಮಾಣದ ಕಾಮಗಾರಿ ಮಾತ್ರ ಆರಂಭವಾಗದಿರುವುದು ನದಿಯಾಚೆಯ ಕಾರಟಗಿ, ಗಂಗಾವತಿ, ಕೊಪ್ಪಳಕ್ಕೆ ದಿನನಿತ್ಯ ಸಂಚರಿಸುವ ಪ್ರಯಾಣಿಕರಿಗೆ, ವ್ಯಾಪಾರಿಗಳಿಗೆ ದೋಣಿಯಲ್ಲಿ ಸಂಚರಿಸುವAತಾಗಿದ್ದು ಸುಗಮ ಸಂಚಾರಕ್ಕೆ ಅಡೆಯುಂಟಾಗಿದೆ.
ಮರೆಯಾಗುತ್ತಿವೆ ಹಳ್ಳಿ ಕಟ್ಟೆಗಳು : ಈ ಮೊದಲು ಗ್ರಾಮದ ಹಿರಿಯ ನಾಗರೀಕರು ಕುಳಿತು ವಿಶ್ರಾಂತಿ ಪಡೆಯುತ್ತಿದ್ದ ಹಳ್ಳಿಕಟ್ಟೆ ಅಥವಾ ನ್ಯಾಯದ ಕಟ್ಟೆಗಳು ಇಂದು ಅನ್ಯರ ಪಾಲಾಗುತ್ತಿದ್ದು, ಈ ಕಟ್ಟೆಗಳನ್ನು ಉಳಿಸಿ ಎತ್ತರದಲ್ಲಿ ನೂತನ ಕಟ್ಟೆಗಳನ್ನು ನಿರ್ಮಿಸಿ ಸಾರ್ವಜನಿಕರ ಅನುಕೂಲಕ್ಕೆ ಅನುವು ಮಾಡಿಕೊಡಬೇಕಾಗಿದೆ.
ದುರಸ್ತಿ ಕಟ್ಟಡಗಳ ಬಳಕೆಗಿಲ್ಲ ಅಧಿಕಾರಿಗಳ ಒಲವು : ಅನುದಾನ ಹಿರಿಯ ಪ್ರಾಥಮಿಕ ಶಾಲೆಯು ಮುಚ್ಚಿಹೋಗಿದ್ದು ಕಟ್ಟಡಗಳು ದುರಸ್ಥಿಯಲ್ಲಿದ್ದರೂ ಈ ಜಾಗದ ದಾನಿಗಳ ಅಪ್ಪಣೆ ಪಡೆದು ದಾನಿಗಳ ಹೆಸರಲ್ಲಿ ಒಂದು ಸುಂದರ ಭವನ ನಿರ್ಮಿಸಿದಲ್ಲಿ ಗ್ರಾಮಸ್ಥರಿಗೆ ಕಾರ್ಯಕ್ರಮಗಳನ್ನು ಮಾಡಲು ಅನುಕೂಲª
ವಾಗುತ್ತದೆ. ಆದರೆ ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮನ ಹರಿಸದಿರುವುದು ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ.
ಹೀಗೆ ಅನೇಕ ಸಮಸ್ಯೆಗಳಿಂದ ಗ್ರಾಮವು ಅಭಿವೃದ್ದಿ ಮರೀಚಿಕೆಯಾಗಿದ್ದು ಇದಕ್ಕೆ ಸಂಬAದಿಸಿದ ಅಧಿಕಾರಿಗಳು ಚುನಾವಣಾ ಸಂದರ್ಭದಲ್ಲಿ ಪೊಳ್ಳು ಭರವಸೆಗಳನ್ನು ನೀಡುವ ಜನಪ್ರತಿನಿಧಿಗಳು ಗಮನಹರಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ಕೋಟ್ : ಬಹುದಿನಗಳಿಂದ ನಮ್ಮ ಗ್ರಾಮದಲ್ಲಿ ಆರೋಗ್ಯ ಕಟ್ಟಡದ ನಿರುಪಯುಕ್ತತೆ, ಬಸ್ ನಿಲ್ದಾಣವಿಲ್ಲದಿರುವುದು, ಅರ್ಧಕ್ಕೆ ನಿಂತ ಸಮುದಾಯ ನಿರ್ಮಾಣದಂತಹ ಸಮಸ್ಯೆಗಳಿಗೆ ಯಾವೊಬ್ಬ ಅಧಿಕಾರಿಯೂ ಗಮನಹರಿಸುತ್ತಿಲ್ಲ.
ಗುಳೇದ ಹೇಮಣ್ಣ, ಅಂಜಿನಪ್ಪ, ಬಂಟನಾಳ್ ಬಸಪ್ಪ, ಕೆ.ಕರಿಲಿಂಗ. ಗ್ರಾಮಸ್ಥರು ನಿಟ್ಟೂರು.
ಸಿರುಗುಪ್ಪ ತಾಲೂಕು.
ಗ್ರಾಮದಲ್ಲಿ ಜನರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ತಿಪ್ಪೆ ತೆಗೆಯುತ್ತಿಲ್ಲ, ಬಸ್‌ನಿಲ್ದಾಣದ ಜಾಗದ ಬಗ್ಗೆ ಸಮಸ್ಯೆ ಇದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಪರಿಹರಿಸಲಾಗುವುದು.
ಸಾಕೀರ್. ಗ್ರಾ.ಪಂ.ಅಭಿವೃದ್ದಿ ಅಧಿಕಾರಿ.
ನಿಟ್ಟೂರು ಗ್ರಾಮಕ್ಕೆ ಇದುವರೆಗೂ ಬೇಟಿ ನೀಡಿಲ್ಲ ಬೇಟಿ ನೀಡಿ ಅಲ್ಲಿನ ಸಮಸ್ಯೆಗಳ ಇತ್ಯರ್ಥಪಡಿಸಲಾಗುವುದು.
ಮಡಗಿನ ಬಸಪ್ಪ. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ. ಸಿರುಗುಪ್ಪ.
28-ಸಿರುಗುಪ್ಪ-1(ಎ) : ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಬಸ್ ನಿಲ್ದಾಣವಿಲ್ಲದೇ ಜಾಗ ಖಾಲಿ ಬಿದ್ದಿರುವುದು.
28-ಸಿರುಗುಪ್ಪ-1(ಬಿ) : ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಉಪಯೋಗವಿಲ್ಲದೇ ಖಾಲಿ ಬಿದ್ದಿರುವುದು.
ಸಿರುಗುಪ್ಪ-1(ಸಿ) : ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಅಂಗನವಾಡಿ ಮತ್ತು ಶಾಲೆಯ ಪಕ್ಕದಲ್ಲಿರುವ ಸಿ.ಸಿ. ರಸ್ತೆ ಮೇಲೆಯೇ ತಿಪ್ಪೆ ಹುಲ್ಲಿನ ಬಣವಿ ಹಾಕಿರುವುದು.
ಸಿರುಗುಪ್ಪ-1(ಡಿ) : ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಮರಳು ಲಾರಿಗಳಿಂದ ರಸ್ತೆ ಹಾಳಾಗಿರುವುದು.