ಹಲಸಿನ ಹಣ್ಣು ಕೊಯ್ಯುವಾಗ ಮರದಿಂದ ಬಿದ್ದು ವ್ಯಕ್ತಿ ಸಾವು latest By Praveen Chennavara On May 30, 2022 Share the Article ಉಡುಪಿ : ಹಲಸಿನ ಹಣ್ಣು ಕೊಯ್ಯಲು ಮರವೇರಿದ ವ್ಯಕ್ತಿ ಆಕಸ್ಮಿಕವಾಗಿ ಕಾಲು ಜಾರಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯಿಂದ ವರದಿಯಾಗಿದೆ. ಕುಂದಾಪುರ ತಾಲೂಕಿನ ನಂಚಾರು ಗ್ರಾಮದ ಅಂಡಾರು ಕಟ್ಟೆ ನಿವಾಸಿ ಮಂಜುನಾಥ ಶೆಟ್ಟಿ (50) ಎಂಬವರೇ ಮೃತಪಟ್ಟವರು. ಈ ಪ್ರಕರಣ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.