ಶ್ವಾನ 2 ಕಿಮೀ ನಡೆದು ಮಾಲೀಕನಿಗೆ ಊಟ ಮುಟ್ಟಿಸಿದ್ದು ಹೇಗೆ ಗೊತ್ತೇ ? ಇಲ್ಲಿದೆ ನೋಡಿ ಅಪರೂಪದ ವೀಡಿಯೋ

ಶ್ವಾನ ಮನುಷ್ಯರ ಆಪ್ತ ಮಿತ್ರ. ನಾಯಿ ಸಾಕುವ ಅನೇಕರು ಅವುಗಳನ್ನು ಬಿಟ್ಟಿರಲಾರದಷ್ಟು ಅವುಗಳೊಂದಿಗೆ ಆಪ್ತತೆ ಹೊಂದಿರುತ್ತಾರೆ.ಈಗ ಜರ್ಮನ್ ಶೆಫರ್ಡ್ ಶ್ವಾನವೊಂದು ತನ್ನ ಮಾಲೀಕನಿರುವ ಕಚೇರಿಗೆ 2 ಕಿಮೀ ನಡೆದುಕೊಂಡು ಹೋಗಿ ಮಧ್ಯಾಹ್ನದ ಊಟವನ್ನು ನೀಡುವ ವಿಡಿಯೋವೊಂದು ವೈರಲ್ ಆಗಿದೆ.

ಈ ಶ್ವಾನದ ಹೆಸರು ಶೇರು. ತನ್ನ ಮಾಲೀಕನಿಗೆ ಮಧ್ಯಾಹ್ನದ ಊಟವನ್ನು ತಲುಪಿಸಲು ಶೇರು ಪ್ರತಿದಿನ ಬೆಳಗ್ಗೆ ಎರಡು ಕಿಲೋಮೀಟರ್ ದೂರ ಪ್ರಯಾಣಿಸುತ್ತದೆ.

ವಿಡಿಯೋದಲ್ಲಿ ಕಾಣಿಸುವಂತೆ ಜರ್ಮನ್ ಶೆಫರ್ಡ್ ಶ್ವಾನ ತನ್ನ ಮಾಲೀಕನಿಗೆ ಊಟವನ್ನು ತೆಗೆದುಕೊಂಡು ಹೋಗುತ್ತಿದೆ. ಬಾಯಿಯಲ್ಲಿ ಬುತ್ತಿಯನ್ನು ಗಟ್ಟಿಯಾಗಿ ಕಚ್ಚಿ ಹಿಡಿದಿರುವ ಶ್ವಾನ ರಸ್ತೆಬದಿಯಲ್ಲಿ ನಿಧಾನವಾಗಿ ಸಾಗುತ್ತಿದೆ. ದೊಡ್ಡ ದೊಡ್ಡ ವಾಹನಗಳು ಬರುತ್ತಿದ್ದಂತೆ ರಸ್ತೆ ಪಕ್ಕದಿಂದ ಬದಿಗೆ ಸರಿಯುವ ಶ್ವಾನ ವಾಹನ ಮುಂದೆ ಸಾಗಿದ ನಂತರ ಮತ್ತೆ ರಸ್ತೆ ಪಕ್ಕಕ್ಕೆ ಬಂದು ಬುತ್ತಿ ಹಿಡಿದು ಸಾಗುತ್ತದೆ.

https://www.instagram.com/reel/Cd2hYGqhxJn/?utm_source=ig_web_copy_link
ವೈರಲ್ ವೀಡಿಯೋ

Leave A Reply

Your email address will not be published.