ಪತಿಯ ಸಹಪಾಠಿಯನ್ನು ರೇಪ್ ಮಾಡಲು ಪತ್ನಿ ಕೊಟ್ಟಳು ಸುಪಾರಿ !

ವಿಚಿತ್ರವಾದ ಗ್ಯಾಂಗ್ ರೇಪ್ ಪ್ರಕರಣವೊಂದು ಬಯಲಾಗಿದೆ. ಈ ಸಂಬಂಧ ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ತನ್ನ ಪತಿಯ ಮೇಲೆ ಅನುಮಾನಗೊಂಡು ಪತಿಯ ಗೆಳತಿಯನ್ನು ರೇಪ್ ಮಾಡಲು ಪತ್ನಿಯೆ ಸುಪಾರಿ ಕೊಟ್ಟು ಇದೀಗ ಸಿಕ್ಕಿಬಿದ್ದಿದ್ದಾಳೆ.

ಹೈದರಾಬಾದಿನ ಗಚ್ಚಿಬೊಳಿಯಲ್ಲಿ ವಾಸವಾಗಿರುವ 32 ವರ್ಷದ ವ್ಯಕ್ತಿ ಯುಪಿಎಸ್ಸಿ ಪರೀಕ್ಷೆಗೆ ತಯಾರಾಗುತ್ತಿದ್ದ. ಅದಾಗಲೇ ಮದುವೆಯಾಗಿರುವ ಆತನಿಗೆ ಯುಪಿಎಸ್ಸಿ ಗೆ ತಯಾರಾಗುತ್ತಿದ್ದ ಹುಡುಗಿಯೊಬ್ಬಳು ಪರಿಚಯವಾಗಿದ್ದಳು. ಕಾಲಕ್ರಮೇಣ ಅವರಿಬ್ಬರ ಮಧ್ಯೆ ಸಹಜ ಗೆಳೆತನ ಏರ್ಪಟ್ಟಿತ್ತು. ಮೊದಮೊದಲು ಎಲ್ಲವೂ ಸರಿಯಾಗಿತ್ತು. ಮೂರು ಜನ ಗೆಳೆಯರಂತೆ ವರ್ತಿಸುತ್ತಿದ್ದರು. ಆಗ ಆ ಹುಡುಗಿ ಕೂಡ ಗಂಡ-ಹೆಂಡಿರ ಜೊತೆ ಬಂದು ಅದೇ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ತದನಂತರ ಅದೇಕೋ ಪತ್ನಿಗೆ ತನ್ನ ಗಂಡನಿಗೂ ಮತ್ತು ಆತನ ಗೆಳತಿಗೂ ಅದೇನೋ ಸಂಬಂಧ ಇರುವ ತರ ಅನಿಸಿದೆ. ಸಂಬಂಧಗಳಲ್ಲಿ ಅಪನಂಬಿಕೆಗಳು ಜಾಸ್ತಿಯಾಗಿವೆ. ಕೊನೆಕೊನೆಗೆ ಜಗಳವಾಡುವ ಮಟ್ಟಿಗೆ ಬಂದಾಗ ಹುಡುಗಿ ಮನೆ ಖಾಲಿ ಮಾಡಿ ಹೋಗಿದ್ದಾಳೆ.

ಹಾಗೆ ಹುಡುಗಿ ಗಂಡ-ಹೆಂಡಿರನ್ನು ಬಿಟ್ಟು ಬೇರೆ ವಾಸ್ತವ್ಯ ಹೂಡಿದರೂ ಹೆಂಡತಿಗೆ ಅನುಮಾನ ನಿಂತಿಲ್ಲ. ಹೇಗಾದರೂ ಮಾಡಿ ಆ ಹುಡುಗಿಗೆ ಜೀವನಪರ್ಯಂತ ನೆನಪಿಸಿಕೊಳ್ಳುವ ಶಿಕ್ಷೆ ವಿಧಿಸಬೇಕೆಂದು ಪತ್ನಿ ಅಂದುಕೊಂಡಿದ್ದಾಳೆ. ಅದರಂತೆ ಸ್ಕೆಚ್ ಹಾಕಿದ್ದಾಳೆ. ಅಷ್ಟರಲ್ಲಿ ಒಂದು ಬಾರಿ ಹುಡುಗಿಯ ಮೇಲೆ ಪೊಲೀಸ್ ಕಂಪ್ಲೇಂಟ್ ಕೂಡ ಕೊಟ್ಟಿದ್ದಾಳೆ ಆತನ ಪತ್ನಿ.

ಅದೊಂದು ದಿನ ಮಾತುಕತೆಗೆಂದು ಆ ಹುಡುಗಿಯನ್ನು ಮನೆಗೆ ಕರೆಸಿಕೊಂಡಿದ್ದಾಳೆ ಪತ್ನಿ. ಆ ಹುಡುಗಿ ತನ್ನ ತಂದೆ-ತಾಯಿಯ ಜೊತೆ ಅವರ ಮನೆಗೆ ಬಂದಿದ್ದಾಳೆ. ನನಗೆ ಆಕೆಯ ಜೊತೆ ಒಂದಷ್ಟು ಹೊತ್ತು ಪ್ರೈವೇಟ್ ಆಗಿ ಮಾತನಾಡಬೇಕೆಂದು ಆ ಪತ್ನಿ ಹುಡುಗಿಯನ್ನು ಪಕ್ಕದ ರೂಮಿಗೆ ಕರೆದಿದ್ದಾಳೆ. ಅಷ್ಟೇ. ಅಲ್ಲಿ ಐದು ಜನ ಹಸಿದ ಹೆಬ್ಬುಲಿಗಳು ಅದಾಗಲೇ ಬಂದು ಕೂತಿದ್ದರು. ಪತ್ನಿಯೇ ಅವರನ್ನು ಸುಪಾರಿ ಕೊಟ್ಟು ಕರೆಸಿ ಈ ಹುಡುಗಿಯನ್ನು ರೇಪ್ ಮಾಡಲು ನೇಮಿಸಿದ್ದಳು. ಹುಡುಗಿ ಒಳಗೆ ಬರುತ್ತಿದ್ದಂತೆ ಆಕೆಯ ಬಾಯಿಯನ್ನು ಮುಚ್ಚಿ ಆಕೆಯ ಮೇಲೆ ಎರಗಿದ್ದಾರೆ ಕಿರಾತಕರು. ಒಬ್ಬ ಆತ ಆಕೆಯನ್ನು ರೇಪ್ ಕೂಡ ಮಾಡಿದ್ದಾರೆ. ಪತ್ನಿ ಅದನ್ನೆಲ್ಲ ರೆಕಾರ್ಡ್ ಕೂಡಾ ಮಾಡಿಕೊಂಡಿದ್ದಾಳೆ. ರೇಪ್ ಮಾಡುವ ಮೊದಲು ಚೆನ್ನಾಗಿ ಆಕೆಗೆ ತದುಕಿದ್ದಾರೆ. ಆಗ ಒಂದು ಸಣ್ಣ ಅವಕಾಶ ಪಡೆದುಕೊಂಡ ಹುಡುಗಿ ಜೋರಾಗಿ ಚೀರಿದ್ದಾಳೆ. ಮಗಳು ಕೂಗಿದ ಸದ್ದು ಕೇಳಿ ತಂದೆ-ತಾಯಿ ರೂಮಿನೊಳಗೆ ಧಾವಿಸಿ ನೋಡಿದಾಗ ಆಕೆ ಚಿಂತಾಜನಕ ಸ್ಥಿತಿಯಲ್ಲಿ ಇದ್ದಳು. ಆಕೆಯ ತಂದೆತಾಯಿ ಎಂಟ್ರಿ ಆಗುತ್ತಿದ್ದಂತೆ ರೇಪಿಸ್ಟುಗಳು ಜಾಗ ಖಾಲಿ ಮಾಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮೊದಲು ಪತ್ನಿಯನ್ನು ಬಂಧಿಸಿ ಆಕೆ ಕೊಟ್ಟ ಮಾಹಿತಿಯಂತೆ ತಕ್ಷಣ ನಾಲ್ವರನ್ನು ಬಂಧಿಸಿದ್ದಾರೆ. ಅವರಲ್ಲಿ ಒಬ್ಬನೇ ಒಬ್ಬ ರೇಪು ಮಾಡಿದ್ದರೂ, ತಾಂತ್ರಿಕವಾಗಿ ಎಲ್ಲರೂ ರೇಪು ಮಾಡಿದಂತೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave A Reply