ಕರಿಬೇವಿನ ಎಲೆಯ ಉಪಯೋಗದ ಕುರಿತು ಮಾಹಿತಿ
ಕರಿಬೇವಿನ ಎಲೆಯ ಕುರಿತು ಪ್ರತಿಯೊಬ್ಬರಿಗೂ ಮಾಹಿತಿ ಇದ್ದೇ ಇರುತ್ತದೆ. ಯಾಕಂದ್ರೆ ಭಾರತೀಯ ಅಡುಗೆಮನೆಯಲ್ಲಿ ಇದರ ಸ್ಥಾನ ಮಹತ್ವದ್ದಾಗಿದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳು ಕರಿಬೇವಿನ ಎಲೆ ಇಲ್ಲದೆ ಪೂರ್ಣ ಎಂದೆನಿಸುವುದೇ ಇಲ್ಲ. ಆದರೆ ಇದು ಕೇವಲ ಅಡುಗೆ ಮನೆಯ ವಸ್ತು ಅಲ್ಲ. ಯಾಕಂದ್ರೆ ಇದರ ಉಪಯೋಗ ಆರೋಗ್ಯಕ್ಕೂ ಇದೆ.
ಹೌದು. ಕರಿಬೇವಿನ ಎಲೆ ಬಳಸುವುದರಿಂದ ಆಹಾರದ ರುಚಿ ಹೆಚ್ಚುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ಈ ಎಲೆಗಳನ್ನು ಬೆಳಿಗ್ಗೆ ಅಗಿದು ತಿನ್ನುವುದರಿಂದ ಏನೆಲ್ಲಾ ಪ್ರಯೋಜನವನ್ನು ಪಡೆಯಬಹುದು ಎಂಬುದು ನಿಮಗೆ ತಿಳಿದಿದೆಯೇ?..ಹೌದು. ಕರಿಬೇವಿನ ಸೊಪ್ಪಿನಲ್ಲಿ ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ವಿಟಮಿನ್‌ಗಳು ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು ಕಂಡುಬರುತ್ತವೆ. ಇದು ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಪ್ರತಿದಿನ ಬೆಳಿಗ್ಗೆ 3 ರಿಂದ 4 ಹಸಿರು ಎಲೆಗಳನ್ನು ಅಗಿದು ತಿನ್ನುವುದರಿಂದ ಆಗುವ ಪ್ರಯೋಜನವನ್ನು ನಾವು ತಿಳಿಸುತ್ತೇವೆ ನೋಡಿ.
- ಕಣ್ಣುಗಳಿಗೆ ಒಳ್ಳೆಯದು:
ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ, ಇರುಳುಗುರುಡುತನ ಅಥವಾ ಕಣ್ಣುಗಳಿಗೆ ಸಂಬಂಧಿಸಿದ ಇತರ ಅನೇಕ ಕಾಯಿಲೆಗಳ ಅಪಾಯವನ್ನು ತಪ್ಪಿಸಬಹುದು ಎಂದು ಹೇಳಲಾಗುತ್ತದೆ. ಏಕೆಂದರೆ ಇದರಲ್ಲಿ ವಿಟಮಿನ್ ಎ ಅಗತ್ಯ ಪೋಷಕಾಂಶವು ಕಂಡುಬರುತ್ತದೆ, ಇದು ದೃಷ್ಟಿ ಹೆಚ್ಚಿಸಲು ಸಹಾಯ ಮಾಡುತ್ತದೆ. - ಮಧುಮೇಹದಲ್ಲಿ ಸಹಾಯಕ:
ಕರಿಬೇವಿನ ಎಲೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಹೈಪೊಗ್ಲಿಸಿಮಿಕ್ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಮಧುಮೇಹ ರೋಗಿಗಳಿಗೆ ಹೆಚ್ಚಾಗಿ ಕರಿಬೇವಿನ ಎಲೆಗಳನ್ನು ಅಗಿಯಲು ಸಲಹೆ ನೀಡಲಾಗುತ್ತದೆ. - ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ:
ಕರಿಬೇವಿನ ಎಲೆಗಳನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಗಿಯಬೇಕು. ಏಕೆಂದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆ, ಆಮ್ಲೀಯತೆ, ಉಬ್ಬುವುದು ಸೇರಿದಂತೆ ಎಲ್ಲಾ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. - ಸೋಂಕನ್ನು ತಡೆಗಟ್ಟುವುದು:
ಆಂಟಿಫಂಗಲ್ ಮತ್ತು ಆಯಂಟಿಬಯೋಟಿಕ್ ಗುಣಗಳು ಕರಿಬೇವಿನ ಎಲೆಗಳಲ್ಲಿ ಕಂಡುಬರುತ್ತವೆ, ಇದು ಅನೇಕ ರೀತಿಯ ಸೋಂಕುಗಳನ್ನು ತಡೆಯುತ್ತದೆ ಮತ್ತು ರೋಗಗಳ ಅಪಾಯವನ್ನು ತಪ್ಪಿಸುತ್ತದೆ. - ತೂಕವನ್ನು ಕಳೆದುಕೊಳ್ಳಲು:
ಕರಿಬೇವಿನ ಎಲೆಗಳನ್ನು ಜಗಿಯುವುದು ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಈಥೈಲ್ ಅಸಿಟೇಟ್, ಮಹಾನಿಂಬಿನ್ ಮತ್ತು ಡೈಕ್ಲೋರೋಮೆಥೇನ್ ನಂತಹ ಪೋಷಕಾಂಶಗಳಿವೆ.