“ಸಾಯುವಾಗ ಯಾರೂ ಇರಲ್ಲ ನಿನ್ನ ಜೊತೆ” ಎಂದ ನೆಟ್ಟಿಗನಿಗೆ ಮುಟ್ಟಿ ನೋಡುವಂತೆ ಉತ್ತರ ನೀಡಿದ ನಟಿ ಸಮಂತಾ

ಸಮಂತಾ ಈಗ ಭಾರೀ‌ ಪ್ರಚಾರದಲ್ಲಿರುವ ನಟಿ. ಹಲವಾರು ಸೌತ್, ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಎಂದರೆ ತಪ್ಪಾಗಲಾರದು. ಆದರೆ ಈಗ ಲೈಮ್ ಲೈಟ್ ನಲ್ಲಿ ಸದಾ ಸುದ್ದಿಯಲ್ಲಿರಲು ಕಾರಣ ನಾಗಚೈತನ್ಯಗೆ ನೀಡಿದ ವಿಚ್ಛೇದನ. ಅನಂತರ ಸಮಂತಾ ಏನು ಮಾಡಿದರೂ ಸುದ್ದಿನೇ ಸುದ್ದಿ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲರ್ ಗಳಿಗೆ ಆಹಾರವಾಗುತ್ತಿದ್ದಾರೆ.

ಇತ್ತೀಚೆಗೆ ಸಮಂತಾ ತಮ್ಮ ನೆಚ್ಚಿನ ಸಾಕು ನಾಯಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಯೋಗ ಮಾಡುತ್ತಿರುವ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದಕ್ಕೆ ಹಲವಾರು ಮಂದಿ ಕಮೆಂಟ್ ಹಾಕಿದ್ದರು. ಆದರೆ ಓರ್ವ ನೆಟ್ಟಿಗ ‘ಸಾಯುವಾಗ ನೀನು ಏಕಾಂಗಿಯಾಗಿರುತ್ತೀ’ ಎಂದು ಕಾಮೆಂಟ್ ಮಾಡಿದ್ದ.

ಈ ಕಾಮೆಂಟ್ ಗೆ ಸಮಂತಾ ತಮಾಷೆಯಾಗಿಯೇ ತಿರುಗೇಟು ನೀಡಿದ್ದಾರೆ. ‘ಹಾಗಿದ್ದರೆ ನಾನು ತುಂಬಾ ಅದೃಷ್ಟವಂತೆ ಎಂದುಕೊಳ್ಳುತ್ತೇನೆ’ ಎಂದಿದ್ದಾರೆ. ಇದಾದ ಬಳಿಕ ನೆಟ್ಟಿಗ ತನ್ನ ಕಾಮೆಂಟ್ ನ್ನು ಅಳಿಸಿ ಹಾಕಿದ್ದಾನೆ.

ಸಿನಿಮಾ‌ ಸ್ಟಾರ್ ಗಳು ಏನೇ ಮಾಡಿದರೂ ಕಾಂಟ್ರವರ್ಸಿಗೆ ಗುರಿಯಾಗಿವುದು ಸಹಜ. ಅದೇನೇ ಇದ್ದರೂ ಅಭಿಮಾನಿಗಳ ಅಭಿಮಾನ ಅಂತಾ ಹೇಳಬಹುದು. ಆದರೆ ಆಕೆಯನ್ನು ಈ ರೀತಿಯಾಗಿ ಮಾನಸಿಕವಾಗಿ ಕುಗ್ಗಿಸುವ ಕಮೆಂಟ್ ಮಾಡುವ ಜನರಿಗೆ ಏನೆನ್ನಬೇಕು ಅನ್ನೋದು ಮಾತ್ರ ಗೊತ್ತಾಗ್ತಿಲ್ಲ.

Leave A Reply

Your email address will not be published.