ಕಟ್ಟಡ ಕಾರ್ಮಿಕರೇ ಗಮನಿಸಿ | ನಿಮಗೆ ಸಿಗಲಿದೆ ಮಾಸಿಕ 2000ರೂ. ಪಿಂಚಣಿ | ನೋಂದಣಿ ಹೇಗೆ ?

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ ಅನುಸಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಮಂಡಳಿಯ ಫಲಾನುಭವಿಗಳಾಗಿ ನೋಂದಣಿ ಮಾಡಲಾಗುತ್ತಿದೆ. ಮಂಡಳಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಯೋಜನೆಯಡಿ ನೀಡಲಾಗುವ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳ ಸಮರ್ಪಕ ವಿತರಣೆ ಮಾಡುವುದಕ್ಕೆ ಮತ್ತು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ 1996 ಹಾಗೂ ಸುಂಕ ನಿಯಮಗಳ ಅಡಿಯಲ್ಲಿ ಮಂಡಳಿಗೆ ಸುಂಕದ ರೂಪದ ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸುವುದು ಸಹ ಉದ್ದೇಶವಾಗಿರುತ್ತದೆ.

ನೋಂದಣಿಗೆ ಅರ್ಹತೆಗಳೇನು?


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಮಗಾರಿಯಲ್ಲಿ ಸೇವೆ ಸಲ್ಲಿಸುತ್ತಿರುವವರ ವರ್ಗದಲ್ಲಿ ನೋಂದಣಿ ಮಾಡಿಕೊಳ್ಳಲು ಸರಕಾರ ಕೆಲವು ಷರತ್ತುಗಳನ್ನು ವಿಧಿಸಿದೆ. ಇದರ ಅನ್ವಯ ಒಬ್ಬ ಫಲಾನುಭವಿಯು ನೋಂದಾಣಿಯಾಗಬೇಕಾದರೆ, ಅಂತಹ ವ್ಯಕ್ತಿಯು ವರ್ಷದಲ್ಲಿ ಅಥವಾ 12 ತಿಂಗಳಲ್ಲಿ ಕಟ್ಟಡ ಅಥವಾ ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು. ವಯೋಮಿತಿ 18 ರಿಂದ 60 ವರ್ಷದೊಳಗಿರಬೇಕು.

ಬೇಕಾದ ಅಗತ್ಯ ದಾಖಲೆಗಳು : ಮೇಲೆ ತಿಳಿಸಲಾದ ಷರತ್ತುಗಳ ಜತೆಗೆ ನೋಂದಣಿಗೆ ಕೆಲವು ದಾಖಲೆಗಳನ್ನು ಸಲ್ಲಿಸುವುದು ಅಗತ್ಯವಾಗಿರುತ್ತದೆ. ಅವುಗಳೆಂದರೆ,

ನಮೂನೆ-1ರಲ್ಲಿ ಅರ್ಜಿ ಸಲ್ಲಿಸಬೇಕು.
ಒಂದು ವರ್ಷದಲ್ಲಿ ಕನಿಷ್ಟ 90 ದಿನಗಳ ಕಟ್ಟಡ ನಿರ್ಮಾಣ ಕೆಲಸ ನಿರ್ವಹಿಸಿರುವ ಉದ್ಯೋಗ ದೃಢೀಕರಣ ಪತ್ರ ಸಲ್ಲಿಸಬೇಕು.
ಪಾಸ್‌ಪೋರ್ಟ್ ಅಳತೆಯ ಪೋಟೋ,
ವಯಸ್ಸಿನ ದಾಖಲೆಯ ಪತ್ರ,
ಅರ್ಜಿದಾರರ ಆಧಾರ್ ಕಾರ್ಡ್.

ಕಾರ್ಮಿಕ ಇಲಾಖೆಯಲ್ಲಿ ಒಮ್ಮೆ ಕಟ್ಟಡ ಕಾರ್ಮಿಕರಾಗಿ ನೊಂದಣಿಯಾದರೆ, ಮಾಸಿಕ 2 ಸಾವಿರ ಪಿಂಚಣಿ ಸೌಲಭ್ಯ, ಕುಟುಂಬ ಪಿಂಚಣಿ ಸೌಲಭ್ಯ- ಮೃತ ಪಿಂಚಣಿದಾರರ ಪತಿ ಹಾಗೂ ಪತ್ನಿಗೆ ಮಾಸಿಕ ಒಂದು ಸಾವಿರ ನೀಡುವುದು, ದುರ್ಬಲತೆ ಪಿಂಚಣಿ ಫಲಾನುಭವಿಗೆ ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ ಅಥವಾ ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ 2ಸಾವಿರ ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ರೂ.2,00,000 ದವರೆಗೆ ಸಹಾಯಧನ ನೀಡಲಾಗುತ್ತಿದೆ.

ಸಿಗುವ ಇತರೆ ಸೌಲಭ್ಯಗಳು

ಹೆರಿಗೆ ಸೌಲಭ್ಯ (ತಾಯಿ ಲಕ್ಷಿತ್ರ್ಮ ಬಾಂಡ್)- ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ ರೂ.30,000 ಮತ್ತು ಗಂಡು ಮಗುವಿನ ಜನನಕ್ಕೆ ರೂ.20,000, ಶಿಶು ಪಾಲನಾ ಸೌಲಭ್ಯ, ಅಂತ್ಯಕ್ರಿಯೆ ವೆಚ್ಚ .4,000 ಹಾಗೂ ಎಕ್ಸ್‌ಗ್ರೇಷಿಯಾ ರೂ.50,000
ಸಹಾಯಧನ, ಟ್ರೈನಿಂಗ್-ಕಮ್-ಟೂಲ್‌ಕಿಟ್ ಸೌಲಭ್ಯ (ಶ್ರಮ ಸಾಮರ್ಥ್ಯ), ಶ್ರಮ ಸಂಸಾರ ಸಾಮರ್ಥ್ಯ ತರಬೇತಿ ಸೌಲಭ್ಯ, ಮನೆ ಖರೀದಿ, ಕಟ್ಟಲು ಸಹಾಯಧನ (ಕಾರ್ಮಿಕ ಗೃಹ ಭಾಗ್ಯ)- ರೂ.2,00,000 ದವರೆಗೆ ಮುಂಗಡ ಸಾಲ ಸೌಲಭ್ಯ, ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ)- ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಬಿತರಿಗೆ ರೂ.300 ರಿಂದ ರೂ.10,000 ಅಪಘಾತ ಪರಿಹಾರ- ಮರಣ ಹೊಂದಿದ್ದಲ್ಲಿ ರೂ.5,00,000 ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ರೂ. 2,00,000 ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ರೂ.1,00,000, ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ)- ಶಸ್ತ್ರಚಿಕಿತ್ಸೆಗಳಿಗೆ ರೂ.2,00,000ವರೆಗೆ ಮದುವೆ ಸಹಾಯಧನ (ಗೃಹ ಲಕ್ಷ್ಮೀ ಬಾಂಡ್) ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ರೂ.50,000 ಕಾರ್ಮಿಕ ಅನಿಲ ಭಾಗ್ಯ
(ಎಲ್‌ಪಿಜಿ) ಸಂಪರ್ಕ ಸೌಲಭ್ಯ, ಬಿಎಂಟಿಸಿ ಬಸ್ ಪಾಸ್ ಸೌಲಭ್ಯ, ತಾಯಿ ಮಗು ಸಹಾಯಹಸ್ತ, ಕನ್ನಡಕ, ಶ್ರವಣಯಂತ್ರ, ಕೃತಕ ಕೈಕಾಲು ಮತ್ತು ಗಾಲಿ ಖುರ್ಚಿ, ಕೆಎಸ್‌ಆರ್‌ಟಿಸಿ ಬಸ್ ಪಾಸ್‌ನ ಸೌಲಭ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ನೋಂದಣಿಯಾಗಲು ಮತ್ತು ಸೌಲಭ್ಯಗಳನ್ನು ಪಡೆಯಲು ಅರ್ಹರಿರುತ್ತಾರೆ. ಈ ಸೌಲಭ್ಯವನ್ನು ಪಡೆದುಕೊಳ್ಳಲು ಸೇವಾಸಿಂಧು ಪೋರ್ಟಲ್ ಮುಖಾಂತರ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕಾಗಿರುತ್ತದೆ.

Leave a Reply

error: Content is protected !!
Scroll to Top
%d bloggers like this: