ಶಿಶ್ನ ಆಕಾರದ ಚೀಲಗಳಲ್ಲಿ ಪಾನೀಯ ಮಾರಾಟ ! ಹೀಗಿದೆ ನೋಡಿ ರುಚಿ ನೋಡಿದವರ ಪ್ರತಿಕ್ರಿಯೆ

ಹೊಟೇಲ್, ರೆಸ್ಟೋರೆಂಟ್‌ಗಳು ಸಹ ಹೆಚ್ಚು ಗ್ರಾಹಕರನ್ನು ತಮ್ಮತ್ತ ಸೆಳೆಯಲು ನಾನಾ ಉಪಾಯ ಮಾಡುತ್ತವೆ. ಇತ್ತೀಚಿನ ಹಲವು ವರ್ಷಗಳಲ್ಲಿ ಆಹಾರವು ಅತಿ ದೊಡ್ಡ ಉದ್ಯಮವಾಗಿ ಬೆಳೆದಿದೆ. 

ಥೈಲ್ಯಾಂಡ್‌ನ ಸಾಂಗ್‌ಖ್ಲಾಲ್ಲಿರುವ ಕೆಫೆ ಯೊಂದು ಜನರನ್ನು ಆಕರ್ಷಿಸಲು ವಿಚಿತ್ರ ಐಡಿಯಾ ಮಾಡಿದೆ. ಗ್ರಾಹಕರು ಇಲ್ಲಿ ಪಾನೀಯ ಸೇವಿಸಲು ಮುಜುಗರ ಪಟ್ಟಿಕೊಳ್ಳುತ್ತಿದ್ದಾರೆ. ಥೈಲ್ಯಾಂಡ್‌ನ ಸಾಂಗ್‌ಖ್ಲಾ ಪ್ರಾಂತ್ಯದ ಕೆಫೆಯು ಒಂದು ತುದಿಯಲ್ಲಿ ಶಿಶ್ನದ ಆಕಾರದ ಪ್ಲಾಸ್ಟಿಕ್ ಚೀಲಗಳಲ್ಲಿ ಪಾನೀಯಗಳನ್ನು ನೀಡುತ್ತಿದೆ.

ಕೆಫೆಯು ಫೇಸ್‌ಬುಕ್‌ನಲ್ಲಿ ಈ ಕುರಿತಾದ ಫೋಟೋ ಗಳನ್ನು ಅಪ್‌ಲೋಡ್ ಮಾಡಿದೆ. ಫೋಟೋದಲ್ಲಿ ಥಾಯ್ ಹಾಲು ಚಹಾ, ಹಸಿರು ಚಹಾ ಮತ್ತು ಸೋಡಾ ಚಿತ್ರಗಳ ಮೂಲಕ ವ್ಯಕ್ತಿಯೊಬ್ಬರು ಶಿಶ್ನದ ಆಕಾರದ ಚೀಲಗಳನ್ನು ಹಿಡಿದಿದ್ದಾರೆ. ನಿಮ್ಮ ಕೈಯಲ್ಲಿ ನಮ್ಮ ಪಾನೀಯಗಳು ಇದ್ದಾಗ, ಎಲ್ಲರೂ ನಿಮ್ಮತ್ತ ನೋಡುತ್ತಾರೆ ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಆದರೆ ನಂತರ ಜನರನ್ನು ಸೆಳೆಯೋಕೆ ಕೆಫೆ ಈ ಐಡಿಯಾ ಮಾಡಿದ್ದರೂ ಸ್ಪಲ್ಪ ದಿನದಲ್ಲೇ ಈ ಶಿಶ್ನದ ಆಕಾರದ ಚೀಲಗಳಲ್ಲಿ ಪಾನೀಯ ವಿತರಿಸುವುದನ್ನು ನಿಲ್ಲಿಸಲಾಯಿತು. ಯಾಕೆಂದರೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಲ್ಲಿಲ್ಲ. ಐಡಿಯಾ ಏನೋ ಯೂನಿಕ್ ಆಗಿತ್ತು. ಅದು ಎಲ್ಲರನ್ನೂ ತನ್ನತ್ತ ಸೆಳೆಯುವಂತೆ ಇತ್ತು. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಆಥರ ಶಿಶ್ನದ ಆಕಾರದ ಕೊಳವೆಗೆ ಬಾಯಿ ಹಾಕಿ ಜ್ಯೂಸ್ ಚೀಪಲು ಜನರು ಮುಜುಗರ ಪಟ್ಟುಕೊಳ್ಳುತ್ತಿದ್ದರು. ಕೆಲವೊಬ್ಬರು, ಮುಖ್ಯವಾಗಿ ಮಹಿಳೆಯರು ಇಂಥಾ ಚೀಲಗಳಲ್ಲಿ ದೊರಕುವ ಪಾನೀಯಗಳನ್ನು ಖರೀದಿಸಲು ಹಿಂದೇಟು ಹಾಕಿದರು. ಕೆಫೆಗೆ ಬರುವುದನ್ನೇ ನಿಲ್ಲಿಸಿದರು. ಕಾರಣ ಯುವ ಜನತೆ ನಗುತ್ತಾ ಈ ಜ್ಯೂಸ್ ಚೀಪುತ್ತಿದ್ದರೆ, ಹೆಂಗಸರಿಗೆ ಮುಜುಗುರ ಆಗುತ್ತಿತ್ತು. ಹಾಗಾಗಿ ಈ ಯೋಜನೆ ಬಿಟ್ಟುಬಿಟ್ಟಿದೆ ಈ ಕಂಪನಿ ಎಂದು ತಿಳಿದುಬಂದಿದೆ.

Leave A Reply