BSNL ನೀಡುತ್ತಿದೆ ಹೊಸ ಆಫರ್ | ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್‌ 60 ದಿನಗಳಿಗೆ ಹೆಚ್ಚುವರಿ

Share the Article

ನವದೆಹಲಿ : ಗ್ರಾಹಕರನ್ನು ತನ್ನತ್ತ ಸೆಳೆಯಲು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಇತ್ತೀಚೆಗೆ ಹೊಸ ಆಫರ್ ಗಳನ್ನು ನೀಡುತ್ತಿದ್ದು, ಇದೀಗ ಮತ್ತೊಮ್ಮೆ ತನ್ನ ವಾರ್ಷಿಕ ಪ್ರಿಪೇಯ್ಡ್ ರೀಚಾರ್ಜ್‌ನ್ನು ವಿಸ್ತೃತಗೊಳಿಸಿದೆ.

ಈ ಹಿಂದೆ ಡೇಟಾ, ಕರೆಗಳು ಮತ್ತು SMS ಸೇರಿದಂತೆ ಒಂದು ವರ್ಷ ಅಥವಾ 365 ದಿನಗಳ ಸೇವೆಯನ್ನು ನೀಡುತ್ತಿದ್ದು, ರೀಚಾರ್ಜ್ ಈಗ ಬಳಕೆದಾರರಿಗೆ 60 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ನೀಡಲಿದೆ.

ಟೆಲಿಕಾಂ ಸೇವಾ ಪೂರೈಕೆದಾರರು ನಿಯಮಿತವಾಗಿ ಬಳಕೆದಾರರಿಗೆ ನಿರ್ದಿಷ್ಟ ರೀಚಾರ್ಜ್‌ಗಳಲ್ಲಿ ಹೆಚ್ಚುವರಿ ದಿನಗಳನ್ನು ಪಡೆಯುವ ಸಾಮರ್ಥ್ಯವನ್ನು ನೀಡಲಿದ್ದು, ಈ ಕೊಡುಗೆಯು ಜೂನ್ ನಿಂದ ದೊರೆಯಲಿದೆ ಎಂದು ತಿಳಿಸಿದೆ.

Leave A Reply