ವಿಮಾನ ನಿಲ್ದಾಣದ ಡಿಸ್ ಪ್ಲೇ ಸ್ಕ್ರೀನ್ ನಲ್ಲಿ ಏಕಾಏಕಿ ಪ್ಲೇ ಆದ “ಬ್ಲೂ ಫಿಲಂ” ಚಿತ್ರ | ಮುಜುಗರ ಪಟ್ಟ ಪ್ರಯಾಣಿಕರು

ವಿಮಾನ ನಿಲ್ದಾಣದವೆಂದರೆ ಅದೊಂದು ಭಾವನೆಗಳ ಮಹಾಪೂರನೇ ಹರಿದು ಬರುವ ಸ್ಥಳ ಎಂದೇ ಹೇಳಬಹುದು. ಕೆಲವರು ತಮ್ಮ ದೇಶಕ್ಕೆ ವಾಪಾಸು ಬರುವವರಿರುತ್ತಾರೆ. ಇನ್ನು ಕೆಲವರು ದೇಶ ತೊರೆದು ಹೋಗುವವರಿರುತ್ತಾರೆ. ಹಾಗಾಗಿ ಜನ ಸ್ವಲ್ಪ ಭಾವುಕರಾಗಿಯೇ ಇರುತ್ತಾರೆಂದೇ ಹೇಳಬಹುದು. ಆದರೆ ನೀವು ನಂಬ್ತಿರೋ ಬಿಡ್ತಿರೋ ಇಲ್ಲೊಂದು ವಿಮಾನ ನಿಲ್ದಾಣದಲ್ಲಿ ಆದ ಘಟನೆಯಿಂದ ಅಲ್ಲಿ ಇದ್ದ ಎಲ್ಲರೂ ಕಣ್ಣುಮುಚ್ಚುವಂತಾಗಿದೆ.

ಹೌದು ! ಈ ವಿಮಾನ ನಿಲ್ದಾಣದಲ್ಲಿ ವಿಮಾನದ ವೇಳಾಪಟ್ಟಿಗಾಗಿ ಹಾಕಲಾಗಿರುವ ಡಿಸ್‌ಪ್ಲೇ ಸ್ಕ್ರೀನ್ ನಲ್ಲಿ ಏಕಾಏಕಿ ಬಂದ ದೃಶ್ಯಗಳಿಂದ ಪ್ರಯಾಣಿಕರು ತಬ್ಬಿಬ್ಬಾಗಿದ್ದಾರೆ ಮಾತ್ರವಲ್ಲದೇ ಮುಜುಗರ ಪಟ್ಟಿದ್ದಾರೆ. ಬ್ರೆಜಿಲ್‌ನ ರಿಯೋ ಡಿ ಜನೈರೋ ವಿಮಾನ ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರು ತಮ್ಮ ತಮ್ಮ ವಿಮಾನ ಮಾಹಿತಿ ತಿಳಿಯಲಿ ಅಲ್ಲಿ ಅಳವಡಿಸಿರುವ ಡಿಸ್ ಪ್ಲೇ ಸ್ಕ್ರೀನ್‌ಗಳತ್ತ ಕಣ್ಣಾಯಿಸಿದ್ದಾರೆ. ಆಗ ಕಂಡ ದೃಶ್ಯಗಳು ಅಲ್ಲಿದ್ದ ಪ್ರಯಾಣಿಕರು ಗಾಬರಿಗೊಳ್ಳುವಂತೆ ಮಾಡಿತು. ಅಂದಹಾಗೆ ಅಲ್ಲಿ ಕಂಡುಬಂದ ದೃಶ್ಯಗಳು ಏನಾಗಿರಬಹುದು ಊಹಿಸಲೂ ಸಾಧ್ಯವಿಲ್ಲ.

ಡಿಸ್‌ಪ್ಲೇ ನಲ್ಲಿ ಕಂಡುಬಂದ ದೃಶ್ಯಗಳು ನೀಲಿ ಚಿತ್ರಗಳದ್ದಾಗಿದ್ದವು. ಅರೆ.. ಏನಿದು ವಿಮಾನ ನಿಲ್ದಾಣದಲ್ಲಿ ಈ ದೃಶ್ಯಗಳು ಹೇಗೆ ಬಂತು ಎಂದು ಎಲ್ಲರೂ ಕೆಲಕಾಲ ಗಾಬರಿಯಾದರು. ಪ್ರಯಾಣಿಕರು ತಮ್ಮ ತಮ್ಮ ಮಕ್ಕಳ ಕಣ್ಣುಮುಚ್ಚಿದ ದೃಶ್ಯಗಳು ಕಂಡುಬಂದಿತು. ತಕ್ಷಣವೇ ಅಧಿಕಾರಗಳ ಗಮನಕ್ಕೆ ಬಂದ ಕೂಡಲೇ ಎಲ್ಲಾ ಸ್ಕ್ರೀನ್ ಗಳನ್ನು ಆಫ್ ಮಾಡಲಾಯಿತು. ಶುಕ್ರವಾರ ಈ ಘಟನೆ ನಡೆದಿದ್ದು, ಈ ಸಂಬಂಧ ಇಲ್ಲಿನ ಫೆಡರಲ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್ನು ವಿಮಾನ ನಿಲ್ದಾಣದ ವೆಬ್‌ಸೈಟ್ ಹ್ಯಾಕ್ ಆಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Leave A Reply