ಯಾಸೀನ್ ಮಲಿಕ್ ಗೆ ಗಲ್ಲು ಶಿಕ್ಷೆ ಆಗಬೇಕೆಂದು ಮೃತ ಯೋಧನ ಪತ್ನಿಯ ಆಕ್ರೋಶ | ಜೀವಾವಧಿಗೆ ಮುಫ್ತಿ, ಫಾರೂಕ್ ಸೇರಿದಂತೆ ಪಾಕಿಸ್ತಾನದ ನಾಯಕರುಗಳ ಅಸಮಾಧಾನ !!

ಯಾಸಿನ್ ಮಲಿಕ್ ತಾನು ಮಾಡಿದ ಪಾಪ ಕೃತ್ಯಗಳಿಗೆ ಇದೀಗ ಜೀವನಪರ್ಯಂತ ಜೈಲಿನಲ್ಲಿ ಕೊಳೆಯುವ ಹಾಗೆ ಆಗಿದೆ. ಯಾಸಿನ್ ಮಲಿಕ್ ಗೆ ಜೀವಾವಧಿ ‌ಶಿಕ್ಷೆ ಘೋಷಣೆಯಾಗಿರುವ ಕಾರಣ ಪಾಕಿಸ್ತಾನದ ಭಯೋತ್ಪಾದಕರ ಮೇಲಿನ ಪ್ರೀತಿಯ ಬಗ್ಗೆಯೂ ಜಗತ್ತಿಗೆ ಗೊತ್ತಾಗಿದೆ. ಯಾಸಿನ್ ಮಲಿಕ್ ಅವರಂತಹ ನೀಚರಿಗೆ ಭಯೋತ್ಪಾದಕ ಚಟುವಟಿಕೆಗಳಿಗೆ ಪಾಕಿಸ್ತಾನ ಹಣಕಾಸು ನೆರವು ನೀಡುತ್ತಿತ್ತು ಎಂಬುದು ನಂಬಲಾಗದ ಸತ್ಯವೇನಲ್ಲ.

 

ಈ ನಡುವೆ, “ಜೆಕೆಎಲ್‌ಎಫ್ ಅಧ್ಯಕ್ಷ ಯಾಸಿನ್ ಮಲಿಕ್ ನನ್ನು 32 ವರ್ಷಗಳ ಕಾಲ ಹಾಯಾಗಿ ಸುತ್ತಾಡಲು ಬಿಟ್ಟು ಈಗ ಜೀವಾವಧಿ ಶಿಕ್ಷೆ ನೀಡಿದರೆ ಸಾಲದು, ಅವನನ್ನು ಗಲ್ಲಿಗೇರಿಸಬೇಕು” ಎಂದು ಕಾಶ್ಮೀರಿ ಪ್ರತ್ಯೇಕತಾವಾದಿಗಳ ನಿಷೇಧಿತ ಸಂಘಟನೆಯಿಂದ ಕೊಲ್ಲಲ್ಪಟ್ಟ ನಾಲ್ವರು ಐಎಎಫ್ ಅಧಿಕಾರಿಗಳಲ್ಲಿ ಒಬ್ಬರಾದ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರ ಪತ್ನಿ ನಿರ್ಮಲ್ ಖನ್ನಾ ಹೇಳಿದ್ದಾರೆ.

ಭಯೋತ್ಪಾದನೆ ಮತ್ತು ಭಯೋತ್ಪಾದನೆ ನಿಧಿಗಾಗಿ ಜೆಕೆಎಲ್‌ಎಫ್ ಮುಖ್ಯಸ್ಥನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಎನ್‌ಐಎ ನ್ಯಾಯಾಲಯದ ತೀರ್ಪು ಕುರಿತು ಪ್ರತಿಕ್ರಿಯಿಸಿದರು. “ನನ್ನ ಗಂಡನ ಕೊಲೆಗಾರ ಮುಕ್ತವಾಗಿ ತಿರುಗಾಡುವ ಹೊರೆಯಲ್ಲಿ ನಾನು ಪ್ರತಿದಿನ ಬದುಕಿದ್ದೇನೆ. ನನ್ನ ಪತಿಯನ್ನು ಕೊಂದ ನಂತರ ಮಲಿಕ್ ಬದುಕಿದ್ದಕ್ಕೆ ನನಗೆ ನೋವಾಗಿದೆ. ವಿಳಂಬವಾದ ತೀರ್ಪು ನ್ಯಾಯವನ್ನು ನಿರಾಕರಿಸುತ್ತದೆ” ಎಂದು ಅವರು ಬುಧವಾರ ಜಮ್ಮುವಿನಲ್ಲಿ ಹೇಳಿದ್ದಾರೆ.

ದೇಶವಿರೋಧಿಗಳಿಗೆ ಒಂದೇ ಒಂದು ನಿಯಮ ಇರಬೇಕು ಮತ್ತು ಅದು ‘ಖೂನ್ ಕಾ ಬದ್ಲಾ ಖೂನ್’. ನಾನು ರಕ್ತಕ್ಕಾಗಿ ರಕ್ತವನ್ನೇ ಬೇಡುತ್ತೇನೆ. ಮಲಿಕ್ ಒಬ್ಬ ಭಯೋತ್ಪಾದಕ ಮತ್ತು ನನ್ನ ಗಂಡನನ್ನು ಕೊಂದಿದ್ದಕ್ಕಾಗಿ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಮಲಿಕ್ ಅವರ ಕೈಯಲ್ಲಿ ಕಾಶ್ಮೀರಿ ಪಂಡಿತರ ರಕ್ತವಿರುವುದರಿಂದ ಸಂಪೂರ್ಣ ನ್ಯಾಯವನ್ನು ಇನ್ನೂ ನೀಡಲಾಗಿಲ್ಲ ಎಂದು ಜೆ & ಕೆ ಮಾಜಿ ಡಿಜಿಪಿ ಶೇಶ್ ಪಾಲ್ ವೈದ್ ಹೇಳಿದ್ದಾರೆ. “ಭಾರತೀಯ ವಾಯುಪಡೆಯ ಅಧಿಕಾರಿಗಳ ತಣ್ಣನೆಯ ರಕ್ತದ ಕೊಲೆಗಳು ಮತ್ತು ಕಾಶ್ಮೀರಿ ಪಂಡಿತರ ನರಮೇಧದಂತಹ ಅಪರಾಧಗಳು ಇನ್ನೂ ನ್ಯಾಯಕ್ಕಾಗಿ ಕಾಯುತ್ತಿವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅದಲ್ಲದೆ ಮಲಿಕ್ ಗೆ ಜೀವಾವಧಿ ಶಿಕ್ಷೆ ನೀಡಿದ್ದಕ್ಕೆ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮಫ್ತಿ, ಫಾರೂಕ್, ಪಾಕ್ ನಾಯಕರುಗಳಿಂದ ಅಸಮಾಧಾನ ವ್ಯಕ್ತವಾಗಿದೆ.

Leave A Reply

Your email address will not be published.