ಕಾರು ಹಾಗೂ ಲಾರಿ ನಡುವೆ ರಸ್ತೆ ಅಪಘಾತ ನಾಲ್ವರ ದುರ್ಮರಣ

ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಸ್ಥವನಿಧಿ ಸಮೀಪದ ಸರ್ವಿಸ್‌ ರಸ್ತೆಯ ಅಮರ್ ಹೋಟೆಲ್ ಎದುರು ಲಾರಿ ಮತ್ತು ಕಾರಿನ ನಡುವೆ ಶುಕ್ರವಾರ ಸಂಭವಿಸಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.


Ad Widget

ನಿಪ್ಪಾಣಿಯ ಸಾಯಿಶಂಕರ ನಗರದ ಅದಗೊಂಡ ಬಾಬು ಪಾಟೀಲ (60), ಛಾಯಾ ಅದಗೊಂಡ ಪಾಟೀಲ (55), ಮಹಾರಾಷ್ಟ್ರದ ರಾಧಾ ನಗರದ ಚಂಪಾತಾಯಿ ಬಾಳೆಷಾ ಮಗದುಮ್ಮ (85) ಮತ್ತು ಸದಲಗಾದ ಮಹೇಶ ದೇವಗೊಂಡ ಪಾಟೀಲ (28) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದೆ. ನಿಪ್ಪಾಣಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಜೆಸಿಬಿಯಿಂದ ಕಾರನ್ನು ತೆರವುಗೊಳಿಸಲಾಗಿದೆ. ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…


Ad Widget
error: Content is protected !!
Scroll to Top
%d bloggers like this: