ಕೇವಲ ಎರಡಂಕಿ ಸಂಬಳಕ್ಕೆ ದುಡಿಯುತ್ತಿರುವ ಸಿಕ್ಸರ್ ಸಿಧು

ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಮತ್ತು ಟೀಂ ಇಂಡಿಯಾದ ಮಾಜಿ ಆಟಗಾರ ನವಜೋತ್‌ ಸಿಂಗ್‌ ಸಿಧು ಅವರಿಗೆ 1988ರ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿ ಒಂದು ವರ್ಷ ಜೈಲು ಶಿಕ್ಷೆಯನ್ನು ಪಟಿಯಾಲಾ ನ್ಯಾಯಾಲಯ ನೀಡಿದೆ.

 

ಜೈಲು ವಾಸದಲ್ಲಿರುವ ಸಿಧು, ಅಲ್ಲಿ ದಿನಗೂಲಿ ಕೆಲಸಗಾರರಾಗಿ ದುಡಿಯುತ್ತಿದ್ದಾರಂತೆ. ಹೌದು, ಅವರು ಒಂದು ವರ್ಷದ ಜೈಲು ಶಿಕ್ಷೆಯ ಸಮಯದಲ್ಲಿ ಪ್ರತಿದಿನ ರೂ.40 ರಿಂದ 90 ಗಳಿಸುತ್ತಾರೆ. ಅದೇ ಜೈಲಿನಲ್ಲಿ ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಕೂಡ ಡಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದಾರೆ.

ನವಜೋತ್‌ ಸಿಂಗ್‌ ಸಿಧು ಅವರು 1988ರ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿ ಒಂದು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

ಸಿಧು ಅವರು ಜೈಲು ವಾಸದ ಸಮಯದಲ್ಲಿ ಅಕೌಂಟೆಂಟ್ ಆಗಿ ದಿನಗೂಲಿ ಲೆಕ್ಕದಲ್ಲಿ ಕೆಲಸ ಮಾಡಲಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆ ವರೆಗೆ ಸಿಧು ಕೆಲಸ ಮಾಡಲಿದ್ದಾರೆ. ಇದರ ನಡುವೆ ಅವರಿಗೆ 3 ಗಂಟೆಗಳ ವಿರಾಮ ನೀಡಲಾಗುತ್ತದೆ ಎಂದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೈಲಿನ ನಿಯಮಗಳ ಪ್ರಕಾರ ಸಿದುಗೆ ಮೊದಲ 3 ತಿಂಗಳ ಕಾಲ ತರಬೇತಿ, ಈ ಅವಧಿಯಲ್ಲಿ ವೇತನವಿಲ್ಲದೆ ಕೆಲಸ ಮಾಡಬೇಕಾಗಿದೆ.

Leave A Reply

Your email address will not be published.