ಪಾನ್ ಮಸಾಲ ಜಾಹಿರಾತಿನಲ್ಲಿ ಶಾರೂಕ್, ಅಜಯ್ ದೇವಗನ್‌ | 5 ರೂ. ಮನಿ ಆರ್ಡರ್ ಕಳುಹಿಸಿದ ವಿದ್ಯಾರ್ಥಿನಿ!

Share the Article

ಇತ್ತೀಚೆಗೆ ಪಾನ್ ಮಸಾಲ ತಂಬಾಕು ಜಾಹೀರಾತಿನಲ್ಲಿ ಕಾಣಿಸಿಕೊಂಡು ಭಾರೀ ಸುದ್ದಿಯಾಗಿದ್ದ ಬೆನ್ನಲ್ಲೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಜಾಹೀರಾತಿನಿಂದ ಹಿಂದೆ ಸರಿದಿದ್ದರು.

ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದೇ ತಮಗೆ ಹಣವೇ ಮುಖ್ಯ ಎಂದು ಮತ್ತೊಮ್ಮೆ ಸಾಬೀತುಪಡಿಸಿ ತಂಬಾಕು ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟರಾದ ಶಾರೂಕ್ ಖಾನ್ ಹಾಗೂ ಅಜಯ್ ದೇವಗನ್ ಅವರಿಗೆ ವಿದ್ಯಾರ್ಥಿನಿಯೊಬ್ಬಳು ಭೀಮಾರಿ ಹಾಕಿದ್ದಾಳೆ.

ಮಧ್ಯಪ್ರದೇಶದ ಖರಗೋನ್ ಜಿಲ್ಲೆಯವಳಾದ ಈಕೆ ಬಿಎ ವ್ಯಾಸಂಗ ಮಾಡುತ್ತಿದ್ದು, ಸ್ಟಾರ್ ನಟರನ್ನು ಈಗ ತರಾಟೆಗೆ ತೆಗೆದುಕೊಂಡಿದ್ದಾಳೆ.

ಇದಕ್ಕೆ ಕಾರಣ, ಖ್ಯಾತ ನಟರಿಬ್ಬರೂ ಆಕ್ಷೇಪದ ನಡುವೆಯೂ ತಂಬಾಕು ಜಾಹೀರಾತಿನಲ್ಲಿ ಕಾಣಿಸಿಕೊಂಡು ಯುವಜನತೆ ಮೇಲೆ ಪರಿಣಾಮ ಬೀರುವಂತೆ ಮಾಡಿದ್ದಾರೆ ಎಂದು ಈ ಬಾಲಕಿ ಆರೋಪಿಸಿದ್ದಾರೆ. ಇದಕ್ಕಾಗಿ ಕೋಪಗೊಂಡು ಈ ಇಬ್ಬರು ನಟರ ಮನೆ ವಿಳಾಸಕ್ಕೆ 5 ರೂ. ಮನಿಆರ್ಡರ್ ಮಾಡಿದ್ದಾಳೆ.

Leave A Reply