ಮಂಗಳೂರು ನಗರದಲ್ಲಿ ಜೇಬುಗಳ್ಳರ ಹಾವಳಿ..! ರಷ್ ಬಸ್ ಹಾಗೂ ಎಟಿಎಂ ನಿಂದ ಹೊರ ಬರುವವರನ್ನೇ ಟಾರ್ಗೆಟ್ ಮಾಡುವ ಬುರ್ಖಾಧಾರಿ ಮಹಿಳೆಯರು

ಮಂಗಳೂರು: ಬಸ್ಸಿನಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣ ಹೆಚ್ಚಳವಾಗುತ್ತಿದೆ. ತುಂಬಿ ತುಳುಕುವ ಬಸ್ಸನ್ನೇ ಹತ್ತುವ ಇವರು ಸಾದಾ ಸೀದಾ ಪ್ರಯಾಣಿಕರಂತೆ ಕಾಣುತ್ತಾರೆ. ಹೊರ ರಾಜ್ಯದವರಾದ ಇವರು ರಷ್ ಬಸ್ಸಿನಲ್ಲಿ ಸುತ್ತುವರಿದು ನಿಲ್ಲುತ್ತಾರೆ. ಕ್ಷಣಮಾತ್ರದಲ್ಲಿ ಪಿಕ್ ಪಾಕೆಟ್ ಮಾಡಿ ಹೋಗುತ್ತಾರೆ. ಪ್ರಯಾಣಿಕನಿಗೆ ಗೊತ್ತಾಗುವುದು ಎಲ್ಲಾ ಮುಗಿದ ಮೇಲೆ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚರಿಸುವ ಬಸ್ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಪಿಕ್ ಪಾಕೆಟ್ ಪ್ರಕರಣಗಳು ಹೆಚ್ಚಳವಾಗುತ್ತಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಇದೇ ರೀತಿ 4 ದಿನದ ಹಿಂದೆ ಕುಲಶೇಖರಕ್ಕೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು 2 ಸಾವಿರ ರೂ. ಕಳೆದುಕೊಂಡಿದ್ದಾರೆ

ಮಂಗಳೂರು ನಗರದ ಬಿಜೈಯ ವ್ಯಾಪಾರಿಯೊಬ್ಬರು ಸೋಮವಾರ ಮಧ್ಯಾಹ್ನ ತಮ್ಮ ಸಂಬಂಧಿಕರ ಮನೆಗೆ ಹೋಗಲು ತೊಕ್ಕೊಟ್ಟಿಗೆ ತೆರಳಿದ್ದಾರೆ. ಅಲ್ಲಿಂದ ಹರೇಕಳ ಪಾವೂರಿಗೆ ಹೋಗುವ ರೂಟ್ ನಂ. 55 ಬಸ್ ಹತ್ತಿದ್ದಾರೆ. ಬಸ್‌ನಲ್ಲಿ ಸಾಧಾರಣ ಪ್ರಯಾಣಿಕರಿದ್ದ ಕಾರಣ ನಿಂತೇ ಪ್ರಯಾಣಿಸಬೇಕಾಯಿತು. ಪಂಚೆಯನ್ನೇ ಧರಿಸುವ ಅವರು ಒಳಗೊಂದು ಬರ್ಮುಡಾ ಧರಿಸಿ ಅದರಲ್ಲಿ 7ಸಾವಿರ ರೂ. ಇಟ್ಟಿದ್ದರು. ಕಳ್ಳರು ಬರ್ಮುಡಾ ಜೇಬು ಹರಿದು ಅದರಲ್ಲಿದ್ದ 7,000 ರೂ. ನಗದನ್ನು ಕದ್ದಿದ್ದಾರೆ. ತಮ್ಮ ಮನೆಗೆ ತಲುಪಿದ ಬಳಿಕವಷ್ಟೇ ಅವರಿಗೆ ತಮ್ಮ ದುಡ್ಡು ಕಳುವಾಗಿರುವುದು ನಂತರ ಅವರ ಅರಿವಿಗೆ ಬಂದಿದೆ.

ಇದೇ ರೀತಿ ವಾರದ ಹಿಂದೆ ಕೂಡಾ ಇಂಥದ್ದೇ ಘಟನೆ ನಡೆದಿದೆ. ವ್ಯಕ್ತಿಯೋರ್ವರು ಸಂಜೆ 6.30ರ ಹೊತ್ತಿಗೆ ಬಂಟ್ಸ್ ಹಾಸ್ಟೆಲ್‌ನಿಂದ ಕುಲಶೇಖರಕ್ಕೆ ಬಸ್‌ನಲ್ಲಿ ತೆರಳಿದ್ದು, ಇದೇ ಸಂದರ್ಭ ಅವರ ಪ್ಯಾಂಟ್‌ನ ಹಿಂಬದಿ ಜೇಬಿನಲ್ಲಿದ್ದ 2 ಸಾವಿರ ರೂ.ಹಣವನ್ನು ಕಳವು ಮಾಡಿದ್ದಾರೆ.

ಇದೇ ರೀತಿ, ಮಂಗಳೂರು ನಗರದ ವೆಲೆನ್ಸಿಯಾ ಸಮೀಪ ಎಟಿಎಂ ಹೊರ ಭಾಗದಲ್ಲಿ ನಿಂತ ಮಹಿಳೆಯೊಬ್ಬರು ಎಟಿಎಂನಲ್ಲಿ ಹಣ ಡ್ರಾ ಮಾಡಿ ಹೊರಗೆ ಬಂದ ವ್ಯಕ್ತಿಯ ಬಳಿ ‘ನನಗೆ ಅರ್ಜಂಟ್ 4 ಸಾವಿರ ರೂ. ಕ್ಯಾಷ್ ಬೇಕಿದೆ. ನನ್ನ ಎಟಿಎಂ ಕಾರ್ಡ್ ಸರಿಯಿಲ್ಲ. ನಿಮ್ಮ ನಂಬರ್ ಕೊಡಿ, ನನ್ನ ಗಂಡನ ಮೊಬೈಲ್‌ನಿಂದ ನಿಮಗೆ ಗೂಗಲ್ ಪೇ ಮಾಡುತ್ತೇನೆ’ ಎಂದು ಹೇಳಿ ಅವಸರಸವಾಗಿ ಮಾತನಾಡುತ್ತಾಳೆ. ಆ ಮಹಿಳೆಯ ದಯನೀಯ ಸ್ಥಿತಿಗೆ ಮರುಕ ಪಟ್ಟ ವ್ಯಕ್ತಿ 4 ಸಾವಿರ ರೂ. ಕ್ಯಾಷ್ ಕೊಟ್ಟು, ಮೊಬೈಲ್ ನಂಬರ್ ಪಡೆಯುತ್ತಾರೆ. ಕೂಡಲೇ ಮಹಿಳೆ, ರಿಕ್ಷಾ ಹಿಡಿದು ಅಲ್ಲಿಂದ ಎಸ್ಕೇಪ್ ಆಗುತ್ತಾಳೆ. ಸ್ವಲ್ಪ ಸಮಯದ ಬಳಿಕ ಮಹಿಳೆ ಕೊಟ್ಟ ಮೊಬೈಲ್ ನಂಬರ್‌ಗೆ ಕರೆ ಮಾಡಿದ್ರೆ ‘ನಾಟ್ ರೀಚೆಬಲ್’..! ಬುರ್ಖಾ ಧರಿಸಿದ ಈ ಮಹಿಳೆ ಇದೇ ರೀತಿ ಈ ಹಿಂದೆಯೂ ಎರಡರಿಂದ ಮೂರು ಬಾರಿ ಮಂಗಳೂರು ನಗರದ ಎಟಿಎಂಗಳ ಬಳಿ ವಂಚನೆ ಮಾಡಿರುವುದಾಗಿ ತಿಳಿದು ಬಂದಿದೆ.

error: Content is protected !!
Scroll to Top
%d bloggers like this: