ಅಪಘಾತ: ಓರ್ವ ಸಾವು, ಇನ್ನೊರ್ವನಿಗೆ ಗಾಯ

ನವಲಗುಂದ: ತಾಲೂಕಿನ ಯಮನೂರ ಅರೇಕುರಹಟ್ಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡುವೆ ಟ್ಯಾಂಕರ್ ಹಾಗೂ ಟಾಟಾ ಏಸ್ ನಡುವೆ ಬೆಳ್ಳಿಗೆ ಅಪಘಾತ ಸಂಭವಿಸಿದ್ದು, ಸ್ಥಳದಲೇ ಓರ್ವ ಮೃತ ಪಟ್ಟರೆ, ಇನ್ನೊರ್ವ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಹುಬ್ಬಳ್ಳಿಯಿಂದ ಬಾಗಲಕೋಟೆಗೆ ಟ್ಯಾಂಕರ್ ಹೋಗುತ್ತಿದ್ದ ವೇಳೆ ನರಗುಂದದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಟಾಟಾ ಏಸ್ ಗಾಡಿಗಳ ನಡುವೆ ಡಿಕ್ಕಿ ಸಂಭವಿಸಿದೆ.

ಘಟನೆಯಲ್ಲಿ ಶಿವಾನಂದ ಸಕ್ರಪ್ಪ ರಾಯನಾಯ್ಕರ ಮೃತಪಟ್ಟಿದ್ದಾನೆ. ರಮೇಶ ಯಲ್ಲಪ್ಪ ಕಂಡ್ರಿಯವರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Car

Leave A Reply

Your email address will not be published.