ಪುತ್ತೂರು : ನಗರಸಭಾ ವ್ಯಾಪ್ತಿಯಲ್ಲಿ 13 ಜನರಿಗೆ ಹುಚ್ಚು ನಾಯಿ ಕಡಿತ

ಗುರುವಾರ ಹುಚ್ಚುನಾಯಿಯೊಂದು ಸುಮಾರು 13 ಜನರಿಗೆ ಕಚ್ಚಿದ ಘಟನೆ ಸಂಭವಿಸಿದೆ.

 

ನೆಹರೂನಗರ, ಬನ್ನೂರು, ಬೊಳುವಾರು, ಬಲಮುರಿ ಮೊದಲಾದ ಪ್ರದೇಶದಲ್ಲಿ ಈ ಹುಚ್ಚುನಾಯಿ ಮೂವರು ಬಾಲಕರು ಸೇರಿದಂತೆ 13 ಜನರಿಗೆ ಕಚ್ಚಿದೆ

ನಗರಸಭಾ ಅಧ್ಯಕ್ಷ ಜೀವಂಧರ ಜೈನ್ ಅವರು ಅಧಿಕಾರಿಗಳಿಗೆ ತುರ್ತು ಆದೇಶ ನೀಡಿ ಕಾರ್ಯಾಚರಣೆಗೆ ಸೂಚಿಸಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿ ನಾಯಿಯನ್ನು ಸೆರೆ ಹಿಡಿಯಲಾಯಿತು

ನಗರಸಭೆ ಸದಸ್ಯ ಶಿವರಾಮ ಸಫಲ್ಯ ಮತ್ತಿತರರ ಸಹಕಾರದೊಂದಿಗೆ ನಾಯಿ ಕಡಿತಕ್ಕೆ ಒಳಗಾದವರೆಲ್ಲ ಸರಕಾರಿ ಆಸ್ಪತ್ರೆಗೆ ಬಂದು ರ‍್ಯಾಬಿಸ್ ನಿರೋಧಕ ಚುಚ್ಚುಮದ್ದು ಪಡೆದುಕೊಂಡಿದ್ದಾರೆ.

Leave A Reply

Your email address will not be published.