ವಾಹನ ಸವಾರರೇ ಗಮನಿಸಿ: ಜೂನ್ 1 ರಿಂದ ಥರ್ಡ್ ಪಾರ್ಟಿ ಮೋಟಾರು ವಾಹನ ವಿಮಾ ಕಂತು ಹೆಚ್ಚಳ
ವಿವಿಧ ವಿಭಾಗಗಳ ವಾಹನಗಳಿಗೆ ಸಂಬಂಧಿಸಿದಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮೋಟಾರು ವಾಹನಗಳ ವಿಮಾ ಕಂತುಗಳನ್ನು ಮುಂಬರುವ ಜೂನ್ 1 ರಿಂದ ಹೆಚ್ಚಿಸಿ ಕ್ರಮ ಕೈಗೊಂಡಿದೆ. ಈ ನಿರ್ಧಾರದ ಮೂಲಕ ಕಾರು ಮತ್ತು ದ್ವಿಚಕ್ರ ವಾಹನದ ಇನ್ನೂರೆನ್ಸ್ ವೆಚ್ಚ ಹೆಚ್ಚಾಗಲಿದ್ದು ವಾಹನ ಮಾಲೀಕರಿಗೆ ಹೊರೆಯಾಗುವ ಸಂಭವವಿದೆ.
ಜೂನ್ 1 ರಿಂದ ಜಾರಿಗೆ ಬರುವಂತೆ ಮೋಟಾರ್ ಥರ್ಡ್-ಪಾರ್ಟಿ ವಿಮೆಯ ದರಗಳನ್ನು ಸರ್ಕಾರ ಪರಿಷ್ಕರಿಸಿದೆ. ಅಂತಿಮ ದರಗಳು ಇತರ ಪ್ರಯಾಣಿಕ-ಸಾಗಿಸುವ ವಾಹನಗಳಿಗೆ ಹೋಲಿಸಿದರೆ ಶಿಕ್ಷಣ ಸಂಸ್ಥೆಯ ಬಸ್ ಗಳಿಗೆ ಶೇ. 15 ರಿಯಾಯಿತಿಯನ್ನು ಅನುಮತಿಸುತ್ತವೆ.
1,000 ಸಿಸಿ ಸಾಮರ್ಥ್ಯದ ಖಾಸಗಿ ಕಾರುಗಳ ಪ್ರೀಮಿಯಂ ದರವು 2019-10ರಲ್ಲಿದ್ದ 2,072 ರೂ.ಯಿಂದ ಇದೀಗ 2,094 ರೂ.ಗೆ ಹೆಚ್ಚಳ ಆಗಲಿದೆ ಎಂದು ಸಚಿವಾಲಯದ ಪರಿಷ್ಕೃತ ಅಧಿಸೂಚನೆ ತಿಳಿಸಿದೆ. ಅದೇ ರೀತಿ, 1,000 ಮತ್ತು 1,500 ನಡುವಿನ ಸಿಸಿ ಸಾಮರ್ಥ್ಯದ ಎಂಜಿನ್ ಸಾಮರ್ಥ್ಯದ ಖಾಸಗಿ ಕಾರುಗಳ ಹಳೆಯ ಪ್ರೀಮಿಯಂ ದರ ರೂ.3,221 ಇದ್ದು, ಇದೀಗ ರೂ.3,416 ರಷ್ಟಾಗಲಿದೆ. ಆದರೆ, 1,500 ಸಿಸಿ ಸಾಮರ್ಥ್ಯದ ಕಾರು ಮಾಲೀಕರಿಗೆ ಕೊಂಚ ತಲೆಬಿಸಿ ಕಡಿಮೆ. ಏಕೆಂದರೆ, ಪ್ರೀಮಿಯಂ ದರವು ರೂ.7,897 ರಿಂದ ರೂ.7890ಕ್ಕೆ ಇಳಿಯಲಿದೆ.
ದ್ವಿಚಕ್ರ ವಾಹನಗಳ ವಿಚಾರಕ್ಕೆ ಬಂದರೆ, 150 ಸಿಸಿಗಿಂತಲೂ ಹೆಚ್ಚಿನ ಸಾಮರ್ಥ್ಯದ ಮತ್ತು 350 ಸಿಸಿಗಿಂತ ಕಡಿಮೆ ಇರುವ ವಾಹನಗಳ ಪ್ರೀಮಿಯಂ ರೂ.1,366 ಮತ್ತು 350 ಸಿಸಿ ಹೊಂದಿರುವ ವಾಹನಗಳಿಗೆ ರೂ.2,804 ಪ್ರೀಮಿಯಂ ನಿಗದಿಪಡಿಸಲಾಗಿದೆ.
ಸಚಿವಾಲಯದ ಅಧಿಸೂಚನೆಯ ಪ್ರಕಾರ, ಹೈಬ್ರಿಡ್ ಎಲೆಕ್ಟ್ರಿಕಲ್ ವಾಹನಗಳಿಗೆ ಶೇ 7.5 ರಷ್ಟು ರಿಯಾಯಿತಿ ದೊರೆಯಲಿದೆ. ಆದರೆ 30 ಕೆ.ವಿ ಗಿಂತಲೂ ಹೆಚ್ಚಿನ ಸಾಮರ್ಥ್ಯದ ಎಲೆಕ್ಟ್ರಿಕ್ ವಾಹನಗಳಿಗೆ ರೂ.1,780 ಮತ್ತು 30 ಕೆ.ವಿ ಗಿಂತಲೂ ಹೆಚ್ಚು ಸಾಮರ್ಥ್ಯದ ಮತ್ತು 65 ಕೆ.ವಿ ಗಿಂತ ಒಳಗಿರುವ ವಾಹನಗಳಿಗೆ ರೂ.2,904 ಪ್ರೀಮಿಯಂ ಕಂತು ಬರಲಿದೆ.
ಥರ್ಡ್ ಪಾರ್ಟಿ ಇನ್ನೂರೆನ್ಸ್ ಕವರ್ ಅನ್ನೋದು ಮಾಲೀಕ ವಾಹನಕ್ಕೆ ತಮ್ಮಿಂದಾಗುವ ಹಾನಿಯ ಹೊರತಾಗಿಯೂ, ಸ್ವಂತ ಹಾನಿಯನ್ನೂ ಒಳಗೊಂಡಂತೆ ಕಡ್ಡಾಯವಾಗಿ ಖರೀದಿಸಬೇಕಿರುವ ಇನ್ಸೂರೆನ್ಸ್ ಆಗಿದೆ. ಇದು ಮುಖ್ಯವಾಗಿ, ಥರ್ಡ್ ಪಾರ್ಟಿಗೆ ಗಂಭೀರ ಸ್ವರೂಪದ ಹಾನಿ, ಸಾಮಾನ್ಯವಾಗಿ ಮನುಷ್ಯ ಇಲ್ಲವೇ ರಸ್ತೆ ಅಪಘಾತ ನಡೆದಾಗ ಉಂಟಾಗುವುದಕ್ಕೆ ಬೇಕಿರುವ ಇನ್ಸೂರೆನ್ಸ್ ಆಗಿದೆ.
ಮೋಟಾರು ಥರ್ಡ್-ಪಾರ್ಟಿ ದರಗಳಲ್ಲಿನ ಪರಿಷ್ಕರಣೆಯು ಕ್ರೈಮ್ ಮೊತ್ತದಲ್ಲಿನ ಹೆಚ್ಚಳವನ್ನು ಗಣನೆಗೆ ತೆಗೆದುಕೊಳ್ಳುವ ಸೂತ್ರದ ಆಧಾರದ ಮೇಲೆ ನಿಯಂತ್ರಕರಿಂದ ವಾರ್ಷಿಕವಾಗಿ ನಡೆಸಲ್ಪಡುತ್ತದೆ. ಹಣದುಬ್ಬರಕ್ಕೆ ಅನುಗುಣವಾಗಿ ಮೋಟಾರು ಅಪಘಾತ ಕ್ರೈಮ್ಸ್ ಟ್ರಿಬ್ಯೂನಲ್ ಗಳು ಅವಾರ್ಡ್ ಗಳನ್ನು ಹೆಚ್ಚಿಸುತ್ತಿರುವುದರಿಂದ ನಿಯಂತ್ರಕ ಸೂತ್ರವನ್ನು ಅಳವಡಿಸಿಕೊಳ್ಳಲು ನಿರ್ಧಾರ ಮಾಡಲಾಗಿದೆ.