ಕಾಡು ಹಂದಿಗಳ ಹತ್ಯೆಗೆ ಅನುಮತಿ ನೀಡಿದ ಸರ್ಕಾರ
ಕೇರಳ: ಕೃಷಿ ಜಮೀನುಗಳಲ್ಲಿ ಬೆಳೆ ಹಾಳು ಮಾಡುವ ಹಾಗೂ ಮನುಷ್ಯರಿಗೆ ಅಪಾಯಕಾರಿಯಾಗುವಂತಹ ಕಾಡು ಹಂದಿಗಳ ಹತ್ಯೆಗೆ ಕೇರಳ ಸರ್ಕಾರ ಅನುಮತಿ ನೀಡಿದೆ.
ಕಾಡು ಪ್ರದೇಶದ ಸುತ್ತಮುತ್ತ ವಾಸಿಸುವ ರೈತರು, ಕಾಡುಹಂದಿಗಳಿಂದ ಆಗುತ್ತಿರುವ ತೊಂದರೆ ಹಾಗು ಬೆಳೆ ಹಾನಿ ಕುರಿತು ಸರ್ಕಾರದ ಗಮನಕ್ಕೆ ತಂದಿದ್ದರು. ಇದರಿಂದಾಗಿ ಕೇರಳ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಯಾವ ಪ್ರದೇಶಗಳಲ್ಲಿ ಹಂದಿ ಉಪಟಳ ಹೆಚ್ಚಿದೆಯೋ ಅಂತಹ ಪ್ರದೇಶಗಳಲ್ಲಿನ ಹಂದಿಗಳನ್ನು ಕೊಲ್ಲಬಹುದು ಎಂದು ಸ್ಥಳೀಯಾಡಳಿತಕ್ಕೆ ಸೂಚಿಸಿದೆ. ಆದರೆ, ಬೆಳೆ ಹಾನಿ ನೆಪವೊಡ್ಡಿ ಕಾಡು ಹಂದಿಗಳ ಹತ್ಯೆಗೈಯಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಗೆ ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.