ಕುಂದಾಪುರ : ಕಟ್ಟೆ ಭೋಜಣ್ಣ ಆತ್ಮಹತ್ಯೆ ಪ್ರಕರಣ : ಡೆತ್ ನೋಟ್ ನಲ್ಲಿ ಕಾರಣ ಬಹಿರಂಗ
ಕುಂದಾಪುರದ ಖ್ಯಾತ ಉದ್ಯಮಿ, ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಭೋಜಣ್ಣ (80) ಅವರು ಗುರುವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿರುವ ದುರದೃಷ್ಟಕರ ಘಟನೆಯೊಂದು ನಡೆದಿತ್ತು. ಈಗ ಈ ಘಟನೆಗೆ ಸಂಬಂಧಿಸಿದಂತೆ ಸೂಸೈಡ್ ಡೆತ್ ನೋಟ್ ಲಭ್ಯವಾಗಿದೆ.
ಸುಸೈಡ್ ಮಾಡಿಕೊಳ್ಳಲು 9 ಕೋಟಿ ಸಾಲವೇ ಕಾರಣ ಎನ್ನಲಾಗಿದೆ. ಭೋಜಣ್ಣ ಬರೆದ ಡೆತ್ ನೋಟಿನಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಮಂಗಳೂರು ಇಸ್ಮಾಯಿಲ್ ಹೆಸರು ಪ್ರಸ್ತಾಪವಾಗಿದ್ದು, ಇಬ್ಬರು ಸೇರಿ 3ಕೋಟಿ 34 ಲಕ್ಷ ನಗದು, 5 ಕೆಜಿ ಬಂಗಾರ ವಂಚಿಸಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ. ಬಡ್ಡಿ ಆಸೆ ತೋರಿಸಿ ಭೋಜಣ್ಣ ಅವರಿಂದ ಸಾಲ ಪಡೆದು,
ಬಡ್ಡಿಯನ್ನು ಕೊಡದೇ ಅಸಲನ್ನು ನೀಡದೆ ಮೊಳಹಳ್ಳಿ ಗಣೇಶ್ ಶೆಟ್ಟಿ ಸತಾಯಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಂದ ಐದಾರು ಬಾರಿ ಕಾಂಪ್ರಮೈಸ್ ಮಾಡಲು ಪ್ರಯತ್ನಪಟ್ಟರೂ, ಇದಕ್ಕೂ ಒಪ್ಪದೇ ದುಡ್ಡು ಕೊಡದೆ ಸತಾಯಿಸುತ್ತಿದ್ದನಂತೆ
ಇದರಿಂದ ಬೇಸತ್ತು ಗಣೇಶ್ ಶೆಟ್ಟಿ ಮನೆ ಮುಂಭಾಗದಲ್ಲಿ
ಸುಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಂಗಳೂರು ಇಸ್ಮಾಯಿಲ್ ಮತ್ತು ಗಣೇಶ್ ಶೆಟ್ಟಿ ಇಂದ ಮನೆಯವರಿಗೆ ದುಡ್ಡು ತೆಗೆಸಿ ಕೊಡುವಂತೆ ಭೋಜಣ್ಣ ಕೊನೆಯ ಡೆತ್‌ನೋಟ್‌ನಲ್ಲಿ ಮನವಿ ಮಾಡಿ, ತನ್ನ ಪರವಾನಿಗೆ ಇರುವ ರಿವಾಲ್ವರ್ನಿಂದ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.