ಸನ್ನಡತೆ ಆಧಾರದ ಮೇಲೆ ಐವರು ಕೈದಿಗಳಿಗೆ ಬಿಡುಗಡೆ ಭಾಗ್ಯ

ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಐವರು ಕೈದಿಗಳಿಗೆ ಗುರುವಾರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು.

ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಹುಬ್ಬಳ್ಳಿಯ ಪರಶುರಾಮ ನವಲಗುಂದ, ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದ ಹನಮಂತಪ್ಪ ದೊಡ್ಡಮನಿ, ಶಿವಮೊಗ್ಗದವರಾದ ನಯಾಜುಲ್ಲಾ ಮೌಲಾಸಾಬ್, ಸೈಯದಖಾದರ್ ಮೊಯಿದ್ದೀನ್, ಕಲಘಟಗಿ ತಾಲೂಕಿನ ಶಂಕರಪ್ಪ ದೊಡ್ಡಮನಿ ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಂಡಿದ್ದಾರೆ.

ರಾಜ್ಯದಾದ್ಯಂತ 96 ಕೈದಿಗಳನ್ನು ಬಿಡುಗಡೆ ಮಾಡಲಾಗಿದ್ದು, ಧಾರವಾಡ ಕೇಂದ್ರ ಕಾರಾಗೃಹದಿಂದ ಐವರು ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.

Leave A Reply

Your email address will not be published.