17 ವರ್ಷಗಳ ಸುದೀರ್ಘ ಪ್ರೀತಿ, ಎರಡು ಮಕ್ಕಳಿಗೆ ತಂದೆಯಾದ ಬಳಿಕ ಮದುವೆಯಾದ ಬಾಲಿವುಡ್ ಖ್ಯಾತ ನಿರ್ದೇಶಕ !!

ಬಾಲಿವುಡ್ ಸಿನಿಮಾಗಳಿಗೆ ಮತ್ತು ಕಿರುತೆರೆಯಲ್ಲೂ ಸಾಕಷ್ಟು ಧಾರಾವಾಹಿಗಳಿಗೆ ಆಕ್ಷನ್ ಕಟ್ ಹೇಳಿರುವ ಖ್ಯಾತ ನಿರ್ದೇಶಕ ಹನ್ಸಲ್ ಮೆಹ್ತಾ, ಹದಿನೇಳು ವರ್ಷದಿಂದ ಪ್ರೀತಿಸುತ್ತಿದ್ದ ಸಫೀನಾ ಹುಸೇನ್ ಅವರನ್ನು ಇದೀಗ ಮದುವೆಯಾಗಿದ್ದಾರೆ. ಸಫೀನಾ ಹುಸೇನ್ ಮತ್ತು ಹನ್ಸಲ್ ಮೆಹ್ತಾ ಬರೋಬ್ಬರಿ ಹದಿನೇಳು ವರ್ಷಗಳಿಂದ ಡೇಟ್ ಮಾಡುತ್ತಿದ್ದರಂತೆ !!

ಅಜಯ್ ದೇವಗನ್ ನಟನೆ ಛಲಾಂಗ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳನ್ನು ಮೆಹ್ತಾ ನಿರ್ದೇಶನ ಮಾಡಿದ್ದಾರೆ. ಹಲವಾರು ಟಿವಿ ಧಾರಾವಾಹಿಗಳಿಗೆ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಸಾಹಿದ್ ಚಿತ್ರಕ್ಕಾಗಿ ಇವರು ರಾಷ್ಟ್ರ ಪ್ರಶಸ್ತಿ ಕೂಡ ಸಂದಿದೆ. ಇಂತಹ ನಿರ್ದೇಶಕರು ಹದಿನೇಳು ವರ್ಷಗಳ ಪ್ರೀತಿಸಿ, ಎರಡು ಮಕ್ಕಳು ಆದ ನಂತರ ಮದುವೆಯಾಗಿ ಸುದ್ದಿಯಾಗಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಸಫೀನಾ ಹುಸೇನ್ ಮತ್ತು ಮೆಹ್ತಾ ಅವರು ಡೇಟ್ ನಲ್ಲಿದ್ದರೂ ಸತಿ ಪತಿಗಳಂತೆಯೇ ಬದುಕುತ್ತಿದ್ದರು. ಹಾಗಾಗಿ ಈ ಜೋಡಿಗೆ ಎರಡು ಹೆಣ್ಣು ಮಕ್ಕಳು ಕೂಡ ಇದ್ದಾರೆ. ಈ ಕುರಿತು ಮಾತನಾಡಿರುವ ಮೆಹ್ತಾ, ‘ನಾವಿಬ್ಬರೂ ಮದುವೆ ಆಗದೇ ಇದ್ದರೂ, ಪ್ರತಿಜ್ಞೆ ತಗೆದುಕೊಂಡಂತೆ ಬದುಕು ನಡೆಸಿದೆವು. ಮಕ್ಕಳು ಬೆಳೆಯುವುದನ್ನು ನೋಡುತ್ತಾ 17 ವರ್ಷಗಳು ಹೇಗೆ ಕಳೆದವು ಎನ್ನುವುದೇ ಗೊತ್ತಾಗಲಿಲ್ಲ. ಇದೀಗ ನಾವಿಬ್ಬರೂ ಮದುವೆಯಾಗುತ್ತಿದ್ದೇವೆ’ ಎಂದಿದ್ದಾರೆ.

ಸಫೀನಾ ಮತ್ತು ಮೆಹ್ತಾ ಮದುವೆಯು ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಆಪ್ತರಷ್ಟೇ ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಸಫೀನಾ ಗುಲಾಬಿ ಬಣ್ಣದ ಕುರ್ತಾ ಧರಿಸಿದ್ದರೆ, ಹನ್ಸಲ್ ಜೀನ್ಸ್ ಪ್ಯಾಂಟ್ ಮತ್ತು ಕೋಟ್ ನಲ್ಲಿ ಮಿಂಚುತ್ತಿದ್ದರು.

ಹನ್ಸಲ್ ಮೆಹ್ತಾಗೆ ಇದು ಎರಡನೇ ಮದುವೆ. ಅವರು ತಮ್ಮ 20ನೇ ವಯಸ್ಸಿನಲ್ಲೇ ಸುನೀತಾ ಎನ್ನುವವರ ಜೊತೆ ಸಪ್ತಪದಿ ತುಳಿದಿದ್ದರು. ಈ ಜೋಡಿಗೆ ಪಲ್ಲವ ಮತ್ತು ಜಯ್ ಎಂಬಿಬ್ಬರು ಮಕ್ಕಳೂ ಇದ್ದಾರೆ. ಆನಂತರ ಸುನೀತಾ ಜೊತೆ ಮೆಹ್ತಾ ವಿಚ್ಛೇದನ ಪಡೆದುಕೊಂಡರು. ಸುನೀತಾ ಅವರಿಂದ ದೂರವಾದ ನಂತರ ನಟ ಯುಸೂಫ್ ಹುಸೇನ್ ಅವರ ಪುತ್ರಿ ಸಫೀನಾ ಜೊತೆ ಡೇಟ್‍ ಮಾಡಲು ಆರಂಭಿಸಿದ್ದರು. ಇದೀಗ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: