ವಿಕಾಸ ಥಟ್ ಅಂತ ಹೇಳಿ- ಬೀದರಿನ ಗುರುಶ್ರೀ ಎಸ್. ಮಠಪತಿ ಪ್ರಥಮ

ವಿಜಯನಗರ(ಹೊಸಪೇಟೆ): ವಿಕಾಸ ಬ್ಯಾಂಕಿನ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ, ಯಾಜಿ ಪ್ರಕಾಶನ ಮತ್ತು ವಿವಿಡ್ಲಿಪಿ ಸಹಯೋಗದೊಡನೆ ಡಾ.ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ ಕನ್ನಡಿಗರಿಗಾಗಿ ಕನ್ನಡದ ಜನಪ್ರಿಯ “ವಿಕಾಸ ಥಟ್ ಅಂತ ಹೇಳಿ” ಸರಣಿ ಕಾರ್ಯಕ್ರಮ, ಸೋಮವಾರದಂದು ಆನ್ಲೈನ್ ವೇದಿಕೆಯಲ್ಲಿ ನಡೆಯಿತು.

ಈ ವಾರದ ಸ್ಪರ್ಧೆಯನ್ನು ವಿಶೇಷವಾಗಿ ಯುವ ಸಮುದಾಯಕ್ಕಾಗಿ ಹಮ್ಮಿಕೊಳ್ಳಲಾಗಿತ್ತು. ಬಳ್ಳಾರಿ ಶಾಖೆಯಿಂದ ಸುಪ್ರಿಯಾ, ಬೀದರ್ ಶಾಖೆಯಿಂದ ಗುರುಶ್ರೀ ಎಸ್.ಮಠಪತಿ, ಕೊಟ್ಟೂರು ಶಾಖೆಯಿಂದ ಸಂವತ್ಸರ್ ಶಾಸ್ತ್ರಿಮಠ ಹಾಗೂ ತೊರಣಗಲ್ಲು ಶಾಖೆಯಿಂದ ತುಷಾರ್ ಜೋಶಿ ಅವರು ಸ್ಪರ್ಧಿಗಳಾಗಿ ಭಾಗವಹಿಸಿದ್ದರು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

8 ಸುತ್ತುಗಳ ಕಾರ್ಯಕ್ರಮದಲ್ಲಿ ಅಂತಿಮವಾಗಿ ಬೀದರಿನ ಗುರುಶ್ರೀ ಎಸ್.ಮಠಪತಿ 190 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರು. ಉಳಿದಂತೆ ಬಳ್ಳಾರಿಯ ಸುಪ್ರಿಯಾ 180 ಅಂಕಗಳನ್ನು, ಕೊಟ್ಟೂರಿನ ಸಂವತ್ಸರ್ ಶಾಸ್ತ್ರಿಮಠ 90 ಅಂಕಗಳನ್ನು ಹಾಗೂ ತೊರಣಗಲ್ಲಿನ ತುಷಾರ್ ಜೋಶಿ 70 ಅಂಕಗಳನ್ನು ಗಳಿಸಿದರು.

ಈ ಕಾರ್ಯಕ್ರಮವು ಬಳ್ಳಾರಿ ಶಾಖೆಯ ಬಸಯ್ಯ.ಎಸ್.ಪಿ ಮತ್ತು ಅವರ ತಂಡದ ಮುಂದಾಳತ್ವದಲ್ಲಿ ನಡೆಯಿತು. ಕಾರ್ಯಕ್ರಮದ ನೇರ ಪ್ರಸಾರ ವಿಕಾಸ ಬ್ಯಾಂಕಿನ ಯೂಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ಹಾಗೂ ವಿವಿಡ್ಲಿಪಿಯ ಯೂಟ್ಯೂಬ್ ಮತ್ತು ಫೇಸ್ಬುಕ್ ಚಾನೆಲ್ ನಲ್ಲಿ ಪ್ರಸಾರಗೊಂಡಿತ್ತು.

Leave a Reply

error: Content is protected !!
Scroll to Top
%d bloggers like this: