ಮತ್ತೆ ಗ್ರಾಹಕರ ಕೈ ತಲುಪಲು ಹಾತೊರೆಯುತ್ತಿದೆ ನೋಕಿಯಾ ಬೇಸಿಕ್ ಸೆಟ್ !! | Nokia 8110 ಫೋನ್ ಕೊಳ್ಳಲು ನಿಮಗಿದೆ ಒಂದು ಉತ್ತಮ ಅವಕಾಶ

ಕಾಲ ಬದಲಾಗುತ್ತಾ ಬಂದಂತೆ ಜನರು ಬಳಸುವಂತಹ ವಸ್ತುಗಳಿಂದ ಹಿಡಿದು ಎಲ್ಲವೂ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಆದರೆ, ಇತ್ತೀಚೆಗೆ ಪುರಾತನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳು ಟ್ರೆಂಡ್ ಆಗಿದೆ ಅಂದರೆ ತಪ್ಪಾಗಲ್ಲ. ಸಾಮಾನ್ಯವಾಗಿ ನಾವು ಬಟ್ಟೆಗಳನ್ನೇ ಗಮನಿಸಬಹುದು. ಹಿಂದೆ ಇದ್ದಂತಹ ಕೆಲವು ಓಲ್ಡ್ ಸ್ಟೈಲ್ ಗಳು ಇಂದು ಟ್ರೆಂಡಿಂಗ್ ಪಟ್ಟಿಯಲ್ಲಿದೆ.

ಅದೇ ರೀತಿ ಮೊಬೈಲ್ ಫೋನ್ ಕೂಡ ಒಂದು. ಹಿಂದೆಲ್ಲ ಜನರಲ್ಲಿ ಮೊಬೈಲ್ ಇದ್ದಿದ್ದೆ ಅಪರೂಪ. ಆದರೆ ಇತ್ತು ಅಂದ್ರೆ ಅಂದು ನೋಕಿಯಾ ಮೊಬೈಲ್ ಫೋನ್. ಯಾಕಂದ್ರೆ ಮೊಬೈಲ್‌ ಅಂದ್ರೇನೇ ನೋಕಿಯಾ ಎಂಬಂತಾಗಿತ್ತು. ಇತ್ತೀಚೆಗೆ ಅಂತೂ ನೋಕಿಯಾ ಫೋನ್ ಬಳಕೆದಾರರು ಕಮ್ಮಿಯಾಗಿದ್ದಾರೆ. ಯಾಕೆಂದರೆ ಇಂದು ಎಲ್ಲರ ಕೈಯಲ್ಲಿ ಕಾಣಸಿಗುವುದೇ ಸ್ಮಾರ್ಟ್ ಫೋನ್. ಆದರೆ ಎಲ್ಲೋ ಒಂದು ಕಡೆ ನಾ ಇದ್ದೇನೆ ಎಂದು ನೋಕಿಯಾ ಕಾಣಸಿಗುತ್ತಲೇ ಇರುತ್ತದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಆರಂಭದಲ್ಲಿ ಜನಸಾಮಾನ್ಯರಿಗೆ ಮೊಬೈಲ್‌ ಪರಿಚಯಿಸಿದ್ದೇ ನೋಕಿಯಾ ಕಂಪನಿ. ಆದ್ರೆ ಸ್ಮಾರ್ಟ್‌ ಫೋನ್‌ ಬಂದ್ಮೇಲೆ ಬೇಸಿಕ್‌ ಫೋನ್‌ಗಳಿಗೆ ಬೇಡಿಕೆ ಕುಸಿದು ಹೋಯ್ತು. ನೋಕಿಯಾ ಕೂಡ ಕಣ್ಮರೆಯಾಯ್ತು. ಒಂದು ಕಾಲದಲ್ಲಿ ಮೊಬೈಲ್‌ ಜಗತ್ತನ್ನೇ ಆಳಿದ್ದ ನೋಕಿಯಾ ಕಂಪನಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡ್ತು. ಕ್ರಮೇಣ ಜನರು ಫೀಚರ್ ಫೋನ್‌ಗಳಿಂದ ಸ್ಮಾರ್ಟ್‌ಫೋನ್‌ಗಳತ್ತ ಮುಖ ಮಾಡಿದ್ರು.

ಆದ್ರೆ Nokia ಬೇಸಿಕ್‌ ಫೋನ್‌ಗಳು ಈಗಲೂ ಇವೆ. 26 ವರ್ಷಗಳ ಹಿಂದೆ Nokia 8110 ಫೋನ್‌ ಬಿಡುಗಡೆಯಾಗಿತ್ತು. 1996 ರಲ್ಲಿ ಲಾಂಚ್‌ ಆಗಿದ್ದು ಸ್ಲೈಡರ್ ಫೋನ್. ಆ ಸಮಯದಲ್ಲಿ ಈ ಫೋನ್ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಇದನ್ನು ಬನಾನಾ ಫೋನ್ ಎಂದೂ ಕರೆಯಲಾಗುತ್ತಿತ್ತು. ಮುಚ್ಚಿರುವ ಕೀಪ್ಯಾಡ್, ವಿಶಿಷ್ಟ ಲುಕ್‌ ನೋಡಿ ಜನರು ಅದನ್ನು ಇಷ್ಟಪಟ್ಟಿದ್ದರು. ಹಾಲಿವುಡ್ ಚಲನಚಿತ್ರ ʼಮ್ಯಾಟ್ರಿಕ್ಸ್‌ʼನಲ್ಲಿ ನೋಕಿಯಾದ ಈ ಫೋನ್‌ ಕಾಣಿಸಿಕೊಳ್ತಿದ್ದಂತೆ ಅದನ್ನು ಕೊಳ್ಳಲು ಜನರು ಪೈಪೋಟಿಗೆ ಬಿದ್ದಿದ್ದರು.

ಈ ಫೋನ್‌ನ ಉತ್ಪಾದನೆ ಸ್ಥಗಿತಗೊಂಡು ವರ್ಷಗಳೇ ಕಳೆದಿವೆ. ಆದರೆ ಈ ಅಪರೂಪದ ಫೋನ್‌ ಇರುವವರು ಅದನ್ನು ಭಾರೀ ಮೊತ್ತಕ್ಕೆ ಮಾರಾಟ ಮಾಡ್ತಿದ್ದಾರೆ. ಹೌದು. ಅಮೆರಿಕದಲ್ಲಿ ಈ ಫೋನ್‌ ಮಾರಾಟಕ್ಕಿದ್ದು, ಇಬೇ ಮೂಲಕ ಆಸಕ್ತರು Nokia 8110 ಅನ್ನು ಸುಮಾರು 40 ಸಾವಿರ ರೂಪಾಯಿ ಕೊಟ್ಟು ಖರೀದಿಸಬಹುದಾಗಿದೆ.

ಸೆಕೆಂಡ್ ಹ್ಯಾಂಡ್ ಫೋನ್ 55-200 ಡಾಲರ್‌ ಅಂದ್ರೆ ಸುಮಾರು 4,280 ರೂಪಾಯಿಯಿಂದ 15,600 ರೂಪಾಯಿಗೆ ಮಾರಾಟವಾಗುತ್ತಿದೆ. ಇಬೇ, ಈ ಫೋನ್ ಅನ್ನು ಅಮೆರಿಕದಲ್ಲಿ ಮಾತ್ರ ವಿತರಿಸುತ್ತಿದೆ. ನೋಡಿ, ಇದೇ ಕಾಲ ಬದಲಾಗೋದು ಅಂದ್ರೆ, ಅಂದು ಸುಲಭವಾಗಿ ಸಿಗುತ್ತಿದ್ದ ನೋಕಿಯಾ ಇಂದು ಕೈಗೆ ಎಟುಕಲು ಕಷ್ಟ ಎಂಬಂತಾಗಿದೆ!!.

Leave a Reply

error: Content is protected !!
Scroll to Top
%d bloggers like this: