ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರ: ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ

Share the Article

ಧಾರವಾಡ: ವಿಧಾನಪರಿಷತ್ತಿನ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಅವರು ಸಹಾಯಕ ಚುನಾವಣಾಧಿಕಾರಿಗಳಾಗಿರುವ, ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ದ್ವಿಪ್ರತಿಯಲ್ಲಿ ನಾಮಪತ್ರಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದರು.

ಮೊದಲ ಬಾರಿ ಸಲ್ಲಿಸುವಾಗ ಪತ್ನಿ ಹೇಮಲತಾ ಹೊರಟ್ಟಿ, ಎನ್.ಎನ್.ಸವಣೂರ. ಎರಡನೇ ಬಾರಿ ನಾಮಪತ್ರ ಸಲ್ಲಿಸುವಾಗ ವಿ.ಎಸ್.ಹುದ್ದಾರ, ಶ್ಯಾಮ ಮಲ್ಲನಗೌಡರ ಇದ್ದರು.

ನಾಮಪತ್ರ ಸಲ್ಲಿಸುವ ಮೂಲಕ 8ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಹೊರಟ್ಟಿ ಇಳಿದಿದ್ದಾರೆ. 1980 ರಿಂದ ಸತತವಾಗಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

Leave A Reply