ಪತ್ನಿಗೆ 90,000 ಮೌಲ್ಯದ ಉಡುಗೊರೆ ನೀಡಿದ ಭಿಕ್ಷುಕ
ಭಿಕ್ಷುಕನೊಬ್ಬ ತನ್ನ ಪತ್ನಿಗೆ ಉಡುಗೊರೆ ನೀಡಲು 90,000 ರೂ. ಮೌಲ್ಯದ ಮೊಪೆಡ್‌ನ್ನು ಖರೀದಿಸಿದ ಘಟನೆ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ನಡೆದಿದೆ.
ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಅಮರವಾರ ಗ್ರಾಮದ ಸಂತೋಷ್ ಎಂಬ ಭಿಕ್ಷುಕ ಅಂಗವಿಕಲನಾಗಿದ್ದಾನೆ. ಈತನಿಗೆ ಕಾಲುಗಳಿಲ್ಲದಿದ್ದರಿಂದ ತ್ರಿಚಕ್ರ ವಾಹನದಲ್ಲಿ ಕುಳಿತು ಸಂಚರಿಸಬೇಕಿತ್ತು.
ತನ್ನ ತ್ರಿಚಕ್ರ ವಾಹನವನ್ನು ಮುಂದಕ್ಕೆ ತಳ್ಳಲು ಪತ್ನಿ ಮುನ್ನಿ ಸಾಹು ಅವಳ ಸಹಾಯ ಪಡೆದುಕೊಳ್ಳುತ್ತಿದ್ದ, ಈ ರೀತಿಯಾಗಿಯೇ ಇಬ್ಬರು ಜೊತೆಗೆ ಭಿಕ್ಷೆ ಬೇಡುತ್ತಿದ್ದರು. ಹದಗೆಟ್ಟ ರಸ್ತೆಗಳು ಮತ್ತು ಹವಮಾನ ವೈಪರೀತ್ಯದಿಂದಾಗಿ ಭಿಕ್ಷೆ ಕೇಳಲು ಇವರಿಗೆ ಆಗಾಗ ತೊಂದರೆ ಆಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಇವರು ಮೊಪೆಡ್ ಖರೀದಿಸಲು ನಿರ್ಧರಿಸಿದ್ದಾರೆ. ಪ್ರತಿದಿನ ಭಿಕ್ಷೆ ಬೇಡಿದ ಹಣದಲ್ಲಿ 300 ರಿಂದ 400 ರೂ.ಗಳನ್ನು ನಾಲ್ಕು ವರ್ಷಗಳ ಕಾಲ ಉಳಿತಾಯ ಮಾಡಿ 90 ಸಾವಿರ ಸಂಗ್ರಹಿಸಿ ಖರೀದಿಸಿ ತನ್ನ ಪತ್ನಿಗೆ ಪ್ರೀತಿಯ ಉಡುಗೊರೆಯಾಗಿ ನೀಡಿದ್ದಾರೆ.
ಈಗ ದಂಪತಿ ಭಿಕ್ಷೆ ಕೇಳುತ್ತಾ ಮೊಪೆಡ್‌ನಲ್ಲಿ ಚಲಿಸುತ್ತಾರೆ.