ಈ ವಸ್ತುಗಳು ಅಡುಗೆ ಕೋಣೆಯಲ್ಲಿ ಖಾಲಿಯಾದರೆ ನಿಮ್ಮ ಮನೆಗೆ ಕಾಡಬಹುದು ದೋಷ!
ಮನೆ ಅಂದಮೇಲೆ ಅಲ್ಲಿ ಸುಖ-ಶಾಂತಿ-ನೆಮ್ಮದಿ ಮುಖ್ಯ. ಇಂತಹ ವಾತಾವರಣ ಮನೆಯಲ್ಲಿ ಸೃಷ್ಟಿಯಾಗಬೇಕಾದರೆ ಲಕ್ಷ್ಮೀದೇವಿಯ ಅನುಗ್ರಹ ಅತ್ಯಗತ್ಯ. ಅಲ್ಲದೆ ಮನೆಯ ವಾಸ್ತು, ಜಾತಕಗಳು ಮುಖ್ಯವಾಗಿರುತ್ತದೆ. ಯಾಕಂದ್ರೆ ಇಂದು ಒಂದು ಮನೆಯನ್ನು ನಿರ್ಮಿಸಬೇಕಾದರೆ ಪ್ರತಿಯೊಬ್ಬರು ಕೂಡ ಈ ಜಾಗದಲ್ಲಿ ಏನಿದ್ದರೆ ಶುಭ ಎಂಬುದನ್ನು ವಾಸ್ತು ಪ್ರಕಾರವಾಗಿ ನೋಡುತ್ತಾರೆ.
ಅಂತೆಯೇ, ಮನೆಯಲ್ಲಿ ಈ ವಸ್ತುಗಳು ಇದ್ದರೆ ಶುಭ ಶಕುನ ಅಪಶಕುನ ಎಂಬ ಸೂಚನೆಗಳು ಇರುತ್ತವೆ. ಅದೇ ರೀತಿ ಮನೆಯಲ್ಲಿ ಯಾವ ವಸ್ತುಗಳು ಖಾಲಿಯಾದರೆ ಮನೆಗೆ ಕೆಟ್ಟದಾಗುತ್ತದೆ ಎಂಬ ವಾಸ್ತು ಪ್ರಕಾರ ಗಳು ಕೂಡ ಇವೆ. ಬನ್ನಿ ಹಾಗಿದ್ರೆ, ಯಾವ ವಸ್ತು ಅಡುಗೆ ಕೋಣೆಯಲ್ಲಿ ಖಾಲಿಯಾದರೆ ಮನೆಗೆ ಕಾಡಬಹುದು ದೋಷ ಎಂಬ ಮಾಹಿತಿಯನ್ನು ತಿಳಿಯೋಣ.
ಮನೆಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹ ಇಲ್ಲವಾದರೆ, ಮನೆಯಲ್ಲಿ ಬಡತನದ ಸಮಸ್ಯೆ ಕಾಡುತ್ತದೆ. ಹಾಗೇ ಜಾತಕದಲ್ಲಿ ಗ್ರಹ ಬಲವು ಉತ್ತಮವಾಗಿದ್ದರೆ ಅದರಿಂದ ಒಳ್ಳೆಯದಾಗುತ್ತದೆ. ಇಲ್ಲವಾದರೆ ಅದರಿಂದ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ವಸ್ತುಗಳು ಅಡುಗೆ ಮನೆಯಲ್ಲಿ ಖಾಲಿಯಾಗದಂತೆ ನೋಡಿಕೊಳ್ಳಿ.
ಅರಶಿನ :
ಅರಿಶಿನವು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಅಡುಗೆಗೆ ಬಳಸುವುದಲ್ಲದೆ, ಶುಭ ಕಾರ್ಯಗಳಲ್ಲಿಯೂ ಬಳಸುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಇದು ಗುರು ಗ್ರಹಕ್ಕೆ ಸಂಬಂಧಿಸಿದೆ. ಅಡುಗೆಮನೆಯಲ್ಲಿ ಅರಿಶಿನ ಖಾಲಿಯಾದರೆ ಗುರುದೋಷ ಕಾಡುತ್ತದೆ. ಸಂತೋಷ, ಸಮೃದ್ಧಿಯ ಕೊರತೆಯಾಗುತ್ತದೆ. ಶುಭ ಕಾರ್ಯಗಳಿಗೆ ಅಡ್ಡಿಯಾಗುತ್ತದೆ.ಹಾಗಾಗಿ ಅರಶಿನ ಖಾಲಿಯಾಗದಂತೆ ನೋಡಿಕೊಳ್ಳೋದು ಉತ್ತಮ.
ಅಕ್ಕಿ :
ಕೆಲವರಿಗೆ ಅಕ್ಕಿ ಸಂಪೂರ್ಣವಾಗಿ ಮುಗಿದ ಬಳಿಕ ಅದನ್ನು ಖರೀದಿಸುವ ಅಭ್ಯಾಸವಿರುತ್ತದೆ. ಆದರೆ ಹಾಗೇ ಮಾಡಬಾರದು. ಯಾಕೆಂದರೆ, ಅಕ್ಕಿ ಶುಕ್ರ ಗ್ರಹಕ್ಕೆ ಸಂಬಂಧಿಸಿದ್ದರಿಂದ ಅಕ್ಕಿಯ ಕೊರತೆಯು ಶುಕ್ರ ದೋಷಕ್ಕೆ ಕಾರಣವಾಗುತ್ತದೆ. ಇದರಿಂದ ಭೌತಿಕ ಸೌಕರ್ಯಗಳಿಂದ ವಂಚಿತರಾಗುತ್ತೀರಿ.