ಮತ್ತೆ ತೆರೆದ ಕೊಳವೆ ಬಾವಿಗೆ ಬಿದ್ದ 6 ರ ಬಾಲಕ, ಸತತ 9 ಗಂಟೆಗಳ ಸೇನಾ ಕಾರ್ಯಾಚರಣೆ ನಂತರ ಸಿಕ್ಕಿದ್ದು ಶೂನ್ಯ

100 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ ಆರು ವರ್ಷದ ಬಾಲಕನನ್ನು ಸತತ 9 ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯ ಮೂಲಕ ರಕ್ಷಿಸಲಾಗಿತ್ತು. ಆದರೆ ದುರ್ವಿಧಿ ಬಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಈ ದುರ್ಘಟನೆ ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ನಡೆದಿದೆ. ಹೋಶಿಯಾರ್‌ಪುರದ ಬೈರಾಂಪುರ ಸಮೀಪದ ಖ್ಯಾಲಾ ಬುಲಂಡಾ ಗ್ರಾಮದಲ್ಲಿ ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳುವ ವೇಳೆ 6 ವರ್ಷದ ಬಾಲಕ ರಿತಿಕ್ ಕೊಳವೆಬಾವಿಗೆ ಬಿದ್ದಿದ್ದನು. ಬಳಿಕ ಸೇನಾ ಸಿಬ್ಬಂದಿ 9 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಗುವನ್ನು ಬೋರ್‌ವೆಲ್‌ನಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇದೀಗ ಚಿಕಿತ್ಸೆ ವೇಳೆ ಮಗು ಸಾವನ್ನಪ್ಪಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ರಿತಿಕ್ ಮೈದಾನದಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಈ ವೇಳೆ ಕೆಲ ಬೀದಿ ನಾಯಿಗಳು ಆತನ ಹಿಂದೆ ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಓಡಿ ಹೋಗಿ ಸೆಣಬಿನ ಚೀಲಗಳಿಂದ ಮುಚ್ಚಲಾಗಿದ್ದ ಬೋರ್‌ವೆಲ್‌ ಶಾಫ್ಟ್‌ ಮೇಲೆ ಹತ್ತಿದ ಪರಿಣಾಮ ಬಾಲಕನ ಭಾರ ತಾಳಲಾರದೆ ಹೊಂಡಕ್ಕೆ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.

ಅಧಿಕಾರಿಗಳ ಪ್ರಕಾರ, ರಿತಿಕ್ ಅವರನ್ನು ಹೊರಗೆ ತೆಗೆಯುವಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದನು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಹುಡುಗ ವಲಸೆ ಕಾರ್ಮಿಕರ ಕುಟುಂಬಕ್ಕೆ ಸೇರಿದವನು ಎಂದು ತಿಳಿದುಬಂದಿದೆ.

Leave a Reply

error: Content is protected !!
Scroll to Top
%d bloggers like this: