ಕಾರಿನಲ್ಲಿ ಜೋಡಿ ಆತ್ಮಹತ್ಯೆ ಪ್ರಕರಣ | ಗುರುತು ಪತ್ತೆ,ಕುಟುಂಬ ಸದಸ್ಯರ ಆಗಮನ

ಉಡುಪಿಯಲ್ಲಿ ಕಾರಿನೊಳಗೆ ಬೆಂಕಿಹಚ್ಚಿಕೊಂಡು ಪ್ರೇಮಿಗಳು ಆತ್ಮಹತ್ಯೆ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದ ಓರ್ವ ಸದಸ್ಯ ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.

 

ಕುಟುಂಬ ಸದಸ್ಯರ ಸಮ್ಮುಖದಲ್ಲಿ ಬ್ರಹ್ಮಾವರ ಪೊಲೀಸರು ಮಹಜರು ಪ್ರಕ್ರಿಯೆ ನಡೆಸಿದ್ದಾರೆ.

ಮೃತದೇಹಗಳನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಕೆಎಂಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ಯಶವಂತ ಮತ್ತು ಜ್ಯೋತಿ ಮಂಗಳೂರಿನಲ್ಲಿ ಮೂರು ದಿನಗಳ ಹಿಂದೆ ಬಾಡಿಗೆ ಮನೆ ಮಾಡಿದ್ದರು ಎಂದು ಹೇಳಲಾಗಿದೆ.5000 ರೂಪಾಯಿ ಪಾವತಿಸಿ ಆಧಾರ್ ಕಾರ್ಡ್ ದಾಖಲೆ ಕೊಟ್ಟು ಬಾಡಿಗೆ ಕಾರು ಪಡೆದಿದ್ದರು.

ಆನ್ ಲೈನ್ ಮೂಲಕ ಕಾರ್ ಬುಕ್ ಮಾಡಿದ್ದ ಯಶವಂತ ಮತ್ತು ಜ್ಯೋತಿ ಬಂದು ಕಾರು ಪಡೆದು ಹೋಗಿದ್ದರು ಎನ್ನಲಾಗಿದೆ.

Leave A Reply

Your email address will not be published.