ಕಳೆದ 4 ವರ್ಷದಿಂದ ಅಡುಗೆ ಅನಿಲದಿಂದ ಬಟ್ಟೆ ಇಸ್ತ್ರೀ ಮಾಡುವ ವ್ಯಕ್ತಿ | ನೀವು ಎಲ್ಲೂ ನೋಡಿರದ, ಕಂಡಿರದ ವೀಡಿಯೋ | ನೆಟ್ಟಿಗರನ್ನು ನಿಬ್ಬೆರಗು ಮಾಡಿಸಿದ ವೀಡಿಯೋ ಸಖತ್ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವೀಡಿಯೋಗಳನ್ನು ನೋಡಿರಬಹುದು. ಆದರೆ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರೋ ವೀಡಿಯೋ ಇಸ್ತ್ರಿ ವೀಡಿಯೋ. ಇದರಲ್ಲೇನು ವಿಶೇಷ ಅಂತೀರಾ ? ಇಲ್ಲೊಬ್ಬ ವ್ಯಕ್ತಿ ಗ್ಯಾಸ್ ನಿಂದ ಬಟ್ಟೆಗೆ ಇಸ್ತ್ರಿ ಮಾಡುತ್ತಿದ್ದಾನೆ ಅಂದರೆ ನಂಬ್ತೀರಾ ?

ಹೌದು. ನಂಬಲೇಬೇಕು. ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ವ್ಯಕ್ತಿ ಅಡುಗೆ ಅನಿಲದ ಮೂಲಕ ಬಟ್ಟೆ ಪ್ರೆಸ್ ಮಾಡುತ್ತಿರುವುದನ್ನು ನೀವು ನೋಡಬಹುದು.

https://www.instagram.com/reel/Cdxl4sEpRnn/?utm_source=ig_web_copy_link

ಎಲ್ಪಿಜಿ ಗ್ಯಾಸ್ ನಿಂದ ಬಟ್ಟೆಗೆ ಇಸ್ತ್ರಿ ಹಾಕುವುದನ್ನು ನೀವು ವೀಡಿಯೋದಲ್ಲಿ ನೋಡಬಹುದು. ಆಶ್ಚರ್ಯದ ಸಂಗತಿ ಎಂದರೆ, ಬಟ್ಟೆ ಪ್ರೆಸ್ ಮಾಡಲು ಆತ ಇದ್ದಿಲು ಅಥವಾ ಕರೆಂಟ್ ಬಳಸುತ್ತಿಲ್ಲ. ಅಡುಗೆ ಅನಿಲ ಸಿಲಿಂಡರ್ ಮೇಲೆ ಬಟ್ಟೆಗಳ ಇಸ್ತ್ರೀ ಮಾಡುತ್ತಿದ್ದಾನೆ. ಹೇಗೆ ಓರ್ವ ವ್ಯಕ್ತಿ ಈ ರೀತಿ ಅಡುಗೆ ಅನಿಲದಿಂದ ಬಟ್ಟೆ ಪ್ರೆಸ್ ಮಾಡಬಹುದು ಎಂಬುದರ ಬಗ್ಗೆ ವೀಡಿಯೋ ತಯಾರಿಸಿದ ವ್ಯಕ್ತಿ ಕೂಡ ಆಶ್ಚರ್ಯಕ್ಕೆ ಒಳಗಾಗಿದ್ದಾನೆ. ಅಷ್ಟೇ ಅಲ್ಲ ಇದನ್ನು ಹೇಗೆ ಮಾಡುತ್ತೀರಾ ಎಂದು ಕೇಳಿದಾಗ, ಇಸ್ತ್ರಿ ಹಾಕುವವನು
ಕಳೆದ ನಾಲ್ಕು ವರ್ಷಗಳಿಂದ ತಾನು ಅಡುಗೆ ಅನಿಲ ಬಳಸಿ ಇಸ್ತ್ರಿ ಮಾಡುತ್ತಿರುವುದಾಗಿ ಹೇಳುತ್ತಾನೆ. ವೈರಲ್ ವಿಡಿಯೋದಲ್ಲಿ ವ್ಯಕ್ತಿ ನೇರವಾಗಿ ಅಡುಗೆ ಅನಿಲ ಸಿಲಿಂಡರ್ ಮೂಲಕ ಪೈಪನ್ನು ತನ್ನು ತನ್ನ ಇಸ್ತ್ರಿಪೆಟ್ಟಿಗೆಗೆ ಜೋಡಿಸಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಅಷ್ಟೇ ಅಲ್ಲ ಆತ ಬಟ್ಟೆಗಳನ್ನು ಕೂಡ ಪ್ರೆಸ್ ಮಾಡುತ್ತಿದ್ದಾನೆ. ಆದರೆ, ಇಸ್ತ್ರೀ ಪೆಟ್ಟಿಗೆ ಅಡುಗೆ ಅನಿಲದಿಂದ ಹೇಗೆ ಬಿಸಿಯಾಗುತ್ತಿದೆ ಎಂಬುದು ಮಾತ್ರ ಗೊತ್ತಾಗುತ್ತಿಲ್ಲ. ಆದರೆ, ವ್ಯಕ್ತಿ ಮಾತ್ರ ಅದರಿಂದಲೇ ತನ್ನ ಬಟ್ಟೆಗಳನ್ನು ಪ್ಲೆಸ್ ಮಾಡುವುದನ್ನು ನೀವು ನೋಡಬಹುದು.

Leave A Reply

Your email address will not be published.