ದ್ವಿಚಕ್ರವಾಹನ ಸವಾರರೇ ಗಮನಿಸಿ : ಈ ಹೆಲ್ಮೆಟ್ ನ್ನೇ ನೀವು ಇನ್ಮುಂದೆ ಧರಿಸಬೇಕು | ಇಲ್ಲದಿದ್ದರೆ ಬೀಳುತ್ತೆ 2000 ರೂ.ದಂಡ!
ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಕೆಲವೊಂದು ಕಟ್ಟುನಿಟ್ಟಿನ ರೂಲ್ಸ್ ನ್ನು ಜಾರಿಗೆ ತರುತ್ತಿದೆ. ಇದರಲ್ಲಿ ದ್ವಿಚಕ್ರ ವಾಹನ ಸವಾರರು ಧರಿಸುವ ಹೆಲ್ಮೆಟ್ ಮುಖ್ಯ ಪಾತ್ರ ವಹಿಸುತ್ತದೆ.
ಇಲ್ಲಿಯವರೆಗೂ ಹೆಲ್ಮೆಟ್ ಧರಿಸದವರಿಗೆ ಮಾತ್ರ ದಂಡ ವಿಧಿಸಲಾಗುತ್ತಿತ್ತು. ಈಗ ಹೆಲ್ಮೆಟ್ ಧರಿಸಿದ್ದರೂ ದಂಡ ಪಾವತಿಸಬೇಕಾಗುತ್ತದೆ. ಅರೆ.. ಏನಿದು ಹೆಲ್ಮೆಟ್ ಧರಿಸದರೂ ಯಾಕೆ ದಂಡ ಪಾವತಿಸಬೇಕು ಎಂದು ಆಶ್ಚರ್ಯ ಪಡುವವರಿಗೆ ಇಲ್ಲಿದೆ ಉತ್ತರ.
ಹೌದು, ಈಗಾಗಲೇ ದ್ವಿಚಕ್ರ ವಾಹನ ಸವಾರರು, ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡಿದರೆ ದಂಡ ಪಾವತಿಸಬೇಕಾಗಿತ್ತು. ಈಗ ಇನ್ನೊಂದು ಹೊಸ ನಿಯಮ ಜಾರಿಗೆ ಬಂದಿದೆ. ಅದೇನೆಂದರೆ, ಸರ್ಕಾರ ಹೇಳಿರುವ ಮಾರ್ಕ್ ಇರುವ ಹೆಲ್ಮಟ್ಟನ್ನೇ ಧರಿಸಬೇಕೆಂಬ ಕಟ್ಟುನಿಟ್ಟಾದ ನಿಯಮವನ್ನು ಜಾರಿಗೆ ತಂದಿದೆ.
ಹೆಲ್ಮೆಟ್ ಧರಿಸುವುದು ಮೋಟಾರ್ ವೆಹಿಕಲ್ ಕಾಯಿದೆಯ ಕಡ್ಡಾಯ ನಿಯಮ. ಈಗ ಹೆಲ್ಮೆಟ್ ಜತೆಗೆ ಐಎಸ್ಐ ಮಾರ್ಕ್ ಹೊಂದಿರುವುದು ಕೂಡ ಕಡ್ಡಾಯವಾಗಿದೆ.
ಒಂದು ವೇಳೆ ಐಎಸ್ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸಿದರೆ ನೀವು 1000 ರೂ. ದಂಡ ಪಾವತಿಸಬೇಕಾಗುತ್ತದೆ. ಇನ್ನು ಈ ಹೆಲ್ಮೆಟ್ ಮಾನದಂಡಗಳಿಗನುಗುಣವಾಗಿ ಪೂರ್ತಿ ತಲೆಯನ್ನು ಮುಚ್ಚಿರಬೇಕು. ಹಾಗೆ ಇಲ್ಲದಿದ್ದರೆ 1000 ರೂ. ದಂಡ ಎರಡು ಸೇರಿ ಒಟ್ಟು 2 ಸಾವಿರ ರೂ. ದಂಡ ವಿಧಿಸಬೇಕಾಗುತ್ತದೆ.
2021 ಜೂನ್ 1 ರಿಂದ ಐಎಸ್ಐ ಮಾರ್ಕ್ ಇಲ್ಲದ ಹೆಲ್ಮೆಟ್ ಬಳಕೆಯನ್ನು ನಿಷೇಧಿಸಲಾಗಿದೆ. ಈ ಬಾರಿ ಕಟ್ಟುನಿಟ್ಟಾಗಿ ದ್ವಿ ಚಕ್ರ ವಾಹನ ಬಳಕೆದಾರರು ಐಎಸ್ಐ ಮಾರ್ಕ್ ಇರುವ ಹೆಲ್ಮೆಟ್ ನ್ನೇ ಧರಿಸಬೇಕೆಂದು ಕೇಂದ್ರ ಸರ್ಕಾರ ಹೇಳಿದೆ.