ಎಸಿ,ಎಸ್ ಟಿ ಮೀಸಲಾತಿ ಶ್ರೀಗಳ ಹೋರಾಟ, 100 ನೇ ದಿನ : ವಿಜಯನಗರದಲ್ಲಿ ಅರೆಬೆತ್ತಲೆ ಪ್ರತಿಭಟನೆ

0 6

ವಿಜಯನಗರ,ಹೊಸಪೇಟೆ ಮೇ20: ವಾಲ್ಮೀಕಿ ಶ್ರೀಗಳು ಎಸ್ಸಿ ಎಸ್ಟಿ ಮೀಸಲಾತಿಗೆ ಆಗ್ರಹಿಸಿ ನಡೆಸುತ್ತಿರುವ ಹೋರಾಟ 100ನೇ ದಿನಕ್ಕೆ ಕಾಲಿಟ್ಟದ್ದು ವಿಜಯನಗರ ದಲ್ಲಿಯೂ ಅರೆಬೆತ್ತಲೆ ಮೇರವಣಿಗೆ ಮೂಲಕ ಪ್ರತಿಭಟಿಸಲಾಯಿತು.


ನಗರದ ವಾಲ್ಮೀಕಿ ವೃತ್ತದಿಂದ ನಗರದ ಪ್ರಮುಖ ವೃತ್ತಗಳ ಮೂಲಕ ಸುರಿಯುವ ಮಳೆಯನ್ನು ಲೆಕ್ಕಿಸದೇ ನಡೆದ ಮೇರವಣಿಗೆ ತಹಶೀಲ್ದಾರರ ಕಚೇರಿಯ ಮುಂದೆ ಬಂದು ಮನವಿಸಲ್ಲಿಸುವ ಮೂಲಕ ತಮ್ಮ ಆಗ್ರಹವನ್ನು ಸರ್ಕಾರಕ್ಕೆ ಸಲ್ಲಿಸಿದರು.
ಸರ್ಕಾರದ ನಿರ್ಲಕ್ಷಿಸಿಸುವ ಮೂಲಕ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಇಂದು ಪ್ರತಿ ಜಿಲ್ಲಾ ಕೇಂದ್ರದಂತೆ ವಿಜಯನಗರದಲ್ಲಿಯೂ ಅರೆಬೆತ್ತಲೆ ಮೇರವಣಿಗೆಯ ಮೂಲಕ ಪ್ರತಿಭಟನೆ ಮಾಡಲಾಯಿತು.
ಮೀಸಲಾತಿ ಕುರಿತು ನ್ಯಾ. ನಾಗಮೋಹನದಾಸ್ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ ವೇಳೆ
ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು
ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಶ್ರೀಗಳ ಧರಣಿ 100ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆ ಪ್ರತಿಭಟನೆ ನಡೆಸಲಾಯಿತು.

ವೀರಸ್ವಾಮಿ, ಬಿ.ಎಸ್‌.ಜಂಬಯ್ಯನಾಯಕ, ಎಂ‌ ಜಂಬಯ್ಯನಾಯಕ, ತಾಯಪ್ಪನಾಯಕ,ವ ಡಿ.ವೆಂಕಟರಮಣ, ಪರಶುರಾಮ, ಸೋಮಶೇಖರ್, ಪಿ.ವೆಂಕಟೇಶ, ಕಟಗಿ ಜಂಬಯ್ಯನಾಯಕ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Leave A Reply