“ಸುಮಂಗಲಿಯಾಗಿ ನನ್ನ‌ ಅಂತ್ಯಸಂಸ್ಕಾರ ಮಾಡಬೇಡಿ, ಮುತ್ತೈದೆ ವಸ್ತುಗಳನ್ನು ದೂರ ಇಡಿ” ಡೆತ್ ನೋಟ್ ಬರೆದಿಟ್ಟು 25 ರ ನವವಿವಾಹಿತೆ ಆತ್ಮಹತ್ಯೆ!!!

Share the Article

ಮದುವೆಯಾದ ನವವಿವಾಹಿತೆಯೋರ್ವಳು ಕೇವಲ 3 ತಿಂಗಳಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೇ ತನ್ನ ಜೀವನವನ್ನು ಕೊನೆಗಾಣಿಸಿದ್ದಾಳೆ.

ಹರಿಯಾಣದ ಸೈಬರ್ ಸಿಟಿ ಗುರ್‌ಗಾಂವ್‌ನಲ್ಲಿ ಈ ಘಟನೆ ನಡೆದಿದೆ. ಗುರ್‌ಗಾಂವ್‌ನ ಕಾರ್ಟರ್ ಪುರಿ ಗ್ರಾಮದಲ್ಲಿ 25 ವರ್ಷದ ನವವಿವಾಹಿತೆ ರಿತು ತನ್ನ ಕೈ ಮೇಲೆ ಆತ್ಮಹತ್ಯೆ ಪತ್ರ ಬರೆದುಕೊಂಡು ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾಳೆ. ಅಷ್ಟು ಮಾತ್ರವಲ್ಲದೇ, ಸೂಸೈಡ್ ನೋಟ್‌ನಲ್ಲಿ ನನ್ನ ಅತ್ತಿಗೆ ನನ್ನ ಮುಖವನ್ನೂ ನೋಡಬಾರದು ಎಂದು ಕೊನೆಯ ಆಸೆಯನ್ನು ಬರೆದಿದ್ದಾಳೆ.

ಕೈಯಲ್ಲಿ ಬರೆದಿರುವ ಸೂಸೈಡ್ ನೋಟ್ ಮಾತ್ರವಲ್ಲದೇ, ಐದು ಪುಟಗಳಲ್ಲಿ ರಿತು ಆತ್ಮಹತ್ಯೆಯ ಕಾರಣಗಳನ್ನು ಬರೆದಿದ್ದಾಳೆ. ‘ನನ್ನ ಅತ್ತೆಮನೆಯವರ ನಿಂದನೆಗಳಿಂದ ನಾನು ತೊಂದರೆಗೀಡಾಗಿದ್ದೇನೆ. ನನ್ನ ಅಂತ್ಯಕ್ರಿಯೆಯನ್ನು ನನ್ನ ಬಾಲ್ಯದ ಹಳ್ಳಿಯಲ್ಲಿಯೇ ಮಾಡಬೇಕು. ಮದುವೆಯಾದವಳ ರೀತಿಯಲ್ಲಿ ನನ್ನ ಅಂತಿಮ ಸಂಸ್ಕಾರವನ್ನು ಮಾಡಬೇಡಿ, ಮುತ್ತೈದೆ ವಸ್ತುಗಳನ್ನು ಅಂತ್ಯಕ್ರಿಯೆಯಿಂದ ದೂರ ಇಡಬೇಕು’ ಎಂದು ಬರೆದಿದ್ದಾಳೆ.

‘ಫೆಬ್ರವರಿ 18 ರಂದು ನನ್ನ ಸಹೋದರಿಗೆ ದೆಹಲಿಯ ದರಿಯಾಪುರ ಖುರ್ದ್ ನಿವಾಸಿ ಚೇತನ್ ಜೊತೆ ವಿವಾಹವಾಗಿತ್ತು. ನನ್ನ ತಂಗಿ ಎಂಬಿಎ ಮಾಡಿದ ನಂತರ ಕೆಲಸ ಮಾಡಬೇಕೆಂದು ಬಯಸಿದ್ದಳು, ಆದರೆ ಅವಳ ಅತ್ತೆಗೆ ಅದು ಇಷ್ಟವಾಗಲಿಲ್ಲ. ಪತಿ ಚೇತನ್, ಸಹೋದರಿ ಗಂಡ ಕುಲದೀಪ್, ಗಂಡನ ಸಹೋದರಿ ಶೋಭಾ ಮತ್ತು ಅತ್ತೆ ರಮೇಶ್ ದೇವಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು
ರಿತು ಅವರ ಸಹೋದರ ಕುಲದೀಪ್ ಆರೋಪ ಮಾಡಿದ್ದಾರೆ.

‘ಮೂರು ತಿಂಗಳ ಹಿಂದೆಯಷ್ಟೇ ರಿತು ಮದುವೆಯಾಗಿದ್ದು, ಎಂದು ಸಂಬಂಧಿಕರು ಹೇಳಿದ್ದಾರೆ. ಮದುವೆಯಲ್ಲಿ ಹೆಚ್ಚು ವರದಕ್ಷಿಣೆ ನೀಡಿದ್ದೆವು. ಚಿಕ್ಕ ಚಿಕ್ಕ ವಿಷಯಗಳಿಗೂ ವರದಕ್ಷಿಣೆಗಾಗಿ ಆಕೆಯ ಅತ್ತೆ ಕಿರುಕುಳ ನೀಡುತ್ತಿದ್ದರು. ಎಲ್ಲವೂ ಸರಿಹೋಗುತ್ತದೆ ಎಂದು ನಾವು ನಮ್ಮ ಸಹೋದರಿಗೆ ಹೇಳಿದ್ದೆವು’ ಎಂದು ಕುಲದೀಪ್ ಹೇಳಿದ್ದಾರೆ.

ಕುಲದೀಪ್ ಅವರ ದೂರಿನ ಮೇರೆಗೆ ಗುರುಗ್ರಾಮದ ಪಾಲಮ್ ವಿಹಾರ್ ಠಾಣೆ ಪೊಲೀಸರು ಅತ್ತೆಯ ವಿರುದ್ಧ ವರದಕ್ಷಿಣೆ ಕೊಲೆ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರಿದಿದೆ.

Leave A Reply