ಹೈನುಗಾರರಿಗೊಂದು ಸಿಹಿಸುದ್ದಿ !! | ದೇಸಿ ಹಸುಗಳ ಸಾಕಾಣಿಕೆಗೆ ಸರ್ಕಾರದಿಂದ 10,000 ರೂ. ಪ್ರೋತ್ಸಾಹ ಧನ ಘೋಷಣೆ

ಹೈನುಗಾರರಿಗೊಂದು ಸಿಹಿ ಸುದ್ದಿ ಇದೆ. ದೇಸಿ ಹಸುಗಳನ್ನು ಸಾಕಾಣಿಕೆ ಮಾಡುವ ರೈತರಿಗೆ ಮಧ್ಯಪ್ರದೇಶ ಸರ್ಕಾರ ಭಾರೀ ಪ್ರೋತ್ಸಾಹ ನೀಡುತ್ತಿದ್ದು, ದೇಸಿ ಹಸು ಸಾಕಾಣಿಕೆದಾರರಿಗೆ ಸರ್ಕಾರದ ವತಿಯಿಂದ ಬಂಪರ್‌ ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದೆ.

ಹೌದು. ರಾಜ್ಯದಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು, ಸ್ಥಳೀಯ ಹಸುಗಳನ್ನು ಸಾಕಲು ಮಧ್ಯಪ್ರದೇಶ ಸರ್ಕಾರವು ರೈತರಿಗೆ ತಿಂಗಳಿಗೆ ₹ 900 ನೀಡಲಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ಹೇಳಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ನೈಸರ್ಗಿಕ ಕೃಷಿಗೆ ದೇಸಿ ಹಸು ಅತ್ಯಗತ್ಯ. ದೇಸಿ ಹಸು ಇದ್ದರೆ ರೈತ ಸಾವಯವ ಗೊಬ್ಬರ ನಿರ್ವಹಣೆ ಮಾಡಲು ಹಾಗೂ ಉತ್ತಮ ಕೃಷಿ ಭೂಮಿ ಹೊಂದಲು ಸಾಧ್ಯವಾಗುತ್ತದೆ. ಹೀಗಾಗಿ ರೈತರಿಗೆ ದೇಸಿ ಹಸು ಸಾಕಣೆಗೆ ತಿಂಗಳಿಗೆ ₹ 900 ನೀಡಲು ನಿರ್ಧರಿಸಿದ್ದೇವೆ. ಈ ಮೂಲಕ ಒಂದು ವರ್ಷದಲ್ಲಿ ದೇಸಿ ಹಸು ಸಾಕುವ ರೈತನಿಗೆ ಒಟ್ಟು ₹ 10,800 ಸಿಗಲಿದೆ ಎಂದು ಸಿಎಂ ಹೇಳಿದ್ದಾರೆ.

20ನೇ ಜಾನುವಾರು ಸಮೀಕ್ಷೆ ಪ್ರಕಾರ ಮಧ್ಯಪ್ರದೇಶದದಲ್ಲಿ ಸುಮಾರು 8.5 ಲಕ್ಷ ಬಿಡಾಡಿ ದನಗಳಿವೆ. ನೆರೆಯ ಉತ್ತರ ಪ್ರದೇಶದ ಚುನಾವಣೆಯ ಸಮಯದಲ್ಲಿ ಪ್ರಮುಖ ರಾಜಕೀಯ ವಿಷಯವಾಗಿ ಮಾರ್ಪಟ್ಟಿರುವ ಬಿಡಾಡಿ ದನಗಳ ಸಮಸ್ಯೆಯನ್ನು ನಿಭಾಯಿಸುವುದು ಯೋಜನೆಯ ಮತ್ತೊಂದು ಉದ್ದೇಶವಾಗಿದೆ ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ.

ದೇಸಿ ಗೋವುಗಳ ಸಾಕಾಣಿಕೆಯನ್ನು ಉತ್ತೇಜಿಸಲು, ಮುಖ್ಯಮಂತ್ರಿ ಚೌಹಾಣ್ ಅವರು ಹಸುಗಳ ಕಲ್ಯಾಣಕ್ಕಾಗಿ ವ್ಯವಹರಿಸಲು “ಕೌ ಕ್ಯಾಬಿನೆಟ್” ಎಂಬ ಕ್ಯಾಬಿನೆಟ್ ಉಪಸಮಿತಿಯನ್ನು ರಚಿಸಲು ಈ ಹಿಂದೆ ನಿರ್ಧರಿಸಿದ್ದರು. ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಗೋಮೂತ್ರದಿಂದ ತಯಾರಿಸಿದ ಫಿನೈಲ್ ಅನ್ನು ಬಳಸಬೇಕು ಮತ್ತು ಸಾವಯವ ಗೊಬ್ಬರವನ್ನು ತಯಾರಿಸಲು ಗೋಮೂತ್ರವನ್ನು ಖರೀದಿಸಬೇಕು ಎಂದು ಸರ್ಕಾರ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿತ್ತು.

Leave a Reply

error: Content is protected !!
Scroll to Top
%d bloggers like this: