ಅಣ್ಣನಿಂದಲೇ ಒಡಹುಟ್ಟಿದ ಸಹೋದರಿ ಮೇಲೆ ನಿರಂತರ ಅತ್ಯಾಚಾರ: ಗರ್ಭಣಿಯಾದ ಅಪ್ರಾಪ್ತ ಸಹೋದರಿ, ವಿಷಯ ತಿಳಿದ ತಾಯಿ ಶಾಕ್!!!

ಒಡಹುಟ್ಟಿದ ಸಹೋದರಿ ಮೇಲೆ ಕಾಮಾಂಧ ಅಣ್ಣನೊಬ್ಬ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅತ್ಯಾಚಾರವೆಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂತಹ ಒಂದು ಅಮಾನವೀಯ ಘಟನೆ ನಡೆದಿರುವುದು ತೆಲಂಗಾಣದ ಬಾಚುಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬಾಚುಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಂಪತಿ ವಾಸವಾಗಿದ್ದು, ಇವರಿಗೆ 17 ವರ್ಷದ ಮಗ ಹಾಗೂ 13 ವರ್ಷದ ಮಗಳಿದ್ದಾಳೆ. ಕಳೆದ ಒಂದು ವರ್ಷದಿಂದ ಸಹೋದರಿ ಮೇಲೆ ಕಾಮುಕ ಅಣ್ಣ ಅತ್ಯಾಚಾರವೆಸಗಿದ್ದಾನೆ. ಜೊತೆಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ ಈ ನೀಚ ಅಣ್ಣ. ಇದರಿಂದ ಆಕೆ ಭಯಗೊಂಡು ಸುಮ್ಮನಾಗಿದ್ದಾಳೆ.

ಕಳೆದ ಮೂರು ತಿಂಗಳಿಂದ ಬಾಲಕಿಗೆ ಮುಟ್ಟಾಗುವ ಚಕ್ರ ಆಗದ ಕಾರಣ ಸ್ತ್ರೀರೋಗ ತಜ್ಞರ ಬಳಿ ಕರೆದದೊಯ್ದಿದ್ದಾರೆ. ಆಕೆಯನ್ನ ಪರೀಕ್ಷೆಗೊಳಪಡಿಸಿದಾಗ, ನಾಲ್ಕು ತಿಂಗಳ ಗರ್ಭಿಣಿ ಎಂಬ ಮಾಹಿತಿ ತಿಳಿದು ಬಂದಿದೆ. ಇದನ್ನ ಕೇಳಿರುವ ತಾಯಿ ಆಘಾತಕ್ಕೊಳಗಾಗಿದ್ದಾಳೆ. ಘಟನೆ ಬಗ್ಗೆ ಬಾಲಕಿ ಬಳಿ ಕೇಳಿದಾಗ, ಕಳೆದ ಒಂದು ವರ್ಷದಿಂದ ಸಹೋದರ ತನ್ನ ಮೇಲೆ ಅತ್ಯಾಚಾರವೆಸಗಿದ್ದು, ಹಾಗೂ ಹೇಳಿದರೆ ಬೆದರಿಕೆ ಹಾಕಿರುವುದರ ಬಗ್ಗೆನೂ ಹೇಳಿದ್ದಾಳೆ.

ಈ ವೇಳೆ ಆಕೆಗೆ, ಗರ್ಭಪಾತ ಮಾಡುವಂತೆ ವೈದ್ಯರ ಬಳಿ ತಾಯಿ ಮನವಿ ಸಹ ಮಾಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಮಕ್ಕಳ ರಕ್ಷಣಾ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಮೇ. 17ರಂದು ಬಾಚುಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

error: Content is protected !!
Scroll to Top
%d bloggers like this: