ದೇಶದಾದ್ಯಂತ ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಆರಂಭವಾಗಲಿದೆ 5G ನೆಟ್ವರ್ಕ್!!

ದೇಶದಲ್ಲಿ ಈಗಾಗಲೇ 4 ಜಿ ನೆಟ್ವರ್ಕ್ ಬಳಕೆಯಲ್ಲಿದ್ದು, ಅತಿವೇಗದ ರೀತಿಯಲ್ಲಿ ಆವಿಷ್ಕಾರಗಳು ನಡೆಯುತ್ತಲೇ ಇದೆ. 2ಜಿ, 3ಜಿ, 4 ಜಿ ಆಗಿ ಇದೀಗ 5ಜಿ ನೆಟ್ವರ್ಕ್ ಗೆ ಪಾದಾರ್ಪಣೆ ಮಾಡಲಿದೆ. ಹೌದು. 5 ಜಿ ನೆಟ್ವರ್ಕ್ ಆರಂಭವಾಗುವ ಮಾಹಿತಿ ಬಂದಿದ್ದು, ಹೈಸ್ಪೀಡ್ ನೆಟ್ವರ್ಕ್ ಗಾಗಿ ಕಾದು ಕೂತಿದ್ದ ಮೊಬೈಲ್ ಬಳಕೆದಾರರಿಗೆ ಈ ಮೂಲಕ ಸಿಹಿ ಸುದ್ದಿ ನೀಡಿದೆ.

ಗುರುವಾರದಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಸ್ವದೇಶಿ ಸಾಧನ ಬಳಸುವ ಮೂಲಕ 5ಜಿ ನೆಟ್ವರ್ಕ್ ನಲ್ಲಿ ಮೊದಲ ಕರೆ ಮಾಡಿದ್ದಾರೆ. ಈ ನೆಟ್ವರ್ಕ್ ಅನ್ನು ಪ್ರಾಯೋಗಿಕವಾಗಿ ಐಐಟಿ ಮದ್ರಾಸ್ ನಲ್ಲಿ ಅಳವಡಿಸಲಾಗಿತ್ತು.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯ ತಿಳಿಸಿರುವ ಸಚಿವರು, ‘ಆತ್ಮ ನಿರ್ಭರ 5 ಜಿ. ಈ ಪರೀಕ್ಷೆಯನ್ನು ಐಐಟಿ ಮದ್ರಾಸ್ ನಲ್ಲಿ ನಾನು ಯಶಸ್ವಿಯಾಗಿ ಮಾಡಿದ್ದೇನೆ. ಇದನ್ನು ಭಾರತದಲ್ಲಿಯೇ ರೂಪಿಸಿ, ಅಭಿವೃದ್ಧಿಪಡಿಸಲಾಗಿದೆ ‘ ಎಂದು ತಿಳಿಸಿದ್ದಾರೆ.

5ಜಿ ಸೇವೆಗಳು ದೇಶದಾದ್ಯಂತ ವಾಣಿಜ್ಯಕವಾಗಿ ಆಗಸ್ಟ್ – ಸೆಪ್ಟೆಂಬರ್ ವೇಳೆಗೆ ಆರಂಭವಾಗುವ ನಿರೀಕ್ಷೆ ಇದೆ ಎನ್ನಲಾಗಿದ್ದು, ಐಐಟಿ ಮದ್ರಾಸ್ ನೇತೃತ್ವದಲ್ಲಿ ಈ ಸಾಧನವನ್ನು ಎಂಟು ಸಂಸ್ಥೆಗಳ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: