ಕಮೋಡ್ ನಲ್ಲಿ ಎರಡು ಬಟನ್ ನೀಡಿರೋದು ಯಾಕೆ ಗೊತ್ತಾ? ಇದರ ಹಿಂದಿದೆ ಅದ್ಭುತ ಮಾಹಿತಿ !!

ಶೌಚಾಲಯ ಎನ್ನುವುದು ಮನುಷ್ಯನ ಜೀವನದ ಭಾಗ ಅಂತಾನೇ ಹೇಳಬಹುದು. ಶೌಚಾಲಯ ನೀಟಾಗಿಲ್ಲದಿದ್ದರೆ ಅಥವಾ ಸರಿಯಾದ ಸಮಯಕ್ಕೆ ನೀರು ಬರದಿದ್ದರೆ, ಅದರಷ್ಟು ಯಾತನೀಯ ಯಾವುದೂ ಇಲ್ಲ. ಆದರೆ ಇಲ್ಲಿ ಈಗ ನಾವು ಮಾತನಾಡೋಕೆ ಹೋಗುವುದು ಟಾಯ್ಲೆಟ್ ನ ಕಮೋಡ್ ಬಗ್ಗೆ. ಅದೂ ವೆಸ್ಟರ್ನ್ ಟಾಯ್ಲೆಟ್ ಬಗ್ಗೆ. ಏನಿದು ಅಸಹ್ಯ ಅಂದ್ಕೋಬೇಡಿ. ಈ ವೆಸ್ಟರ್ನ್ ಕಮೋಡ್ ನ ಬಗ್ಗೆ ಒಂದಷ್ಟು ಮಾಹಿತಿ ನಿಮಗೆ ಇಲ್ಲಿ ನಾವು ಹೇಳ್ತಾ ಇದ್ದೀವಿ.

 

ಈ ಹಿಂದೆ ವೆಸ್ಟರ್ನ್ ಟಾಯ್ಲೆಟ್ ನಲ್ಲಿ ಒಂದೇ ಫ್ಲಶ್ ಬಟನ್ ಇರುತ್ತಿತ್ತು. ಆದರೀಗ ಎರಡು ಫ್ಲಶ್ ಬಟನ್ ಇದೆ. ಅಂದರೆ ಕಮೋಡ್ ನಲ್ಲಿ ಒಂದು ಚಿಕ್ಕದು ಮತ್ತು ಮತ್ತೊಂದು ದೊಡ್ಡದಾದ ಬಟನನ್ನು ನೀವು ಕಾಣಬಹುದು.

ಬಹುತೇಕರು ಈ ಬಟನ್ ಅನ್ನು ವಿನ್ಯಾಸಗೊಳಿಸಲು ಇಡಲಾಗಿದೆ ಎಂದುಕೊಂಡಿದ್ದಾರೆ. ಆದರೆ ಇದು ಕಮೋಡ್ ಅಂದ ಕಾಣಿಸಲು ಇಟ್ಟಿರುವುದು ಒಂದಾದರೆ, ಮತ್ತೊಂದು ಕಾರಣ ಬೇರೆಯೇ ಇದೆ. ಆ ಕಾರಣ ಏನೆಂದು ತಿಳಿಯೋಣ.

ಅಮೇರಿಕನ್ ಇಂಡಸ್ಟ್ರಿಯಲ್ ಡಿಸೈನರ್ ವಿಕ್ಟರ್ ಪಾಪನೆಕ್ ತನ್ನ 1978 ರ ಪುಸ್ತಕ ಡಿಸೈನ್ ಫಾರ್ ದಿ ರಿಯಲ್ ವರ್ಲ್ಡ್ ನಲ್ಲಿ ಈ ಡಬಲ್ ಫ್ಲ್ಯಾಷ್ ಸಿಸ್ಟಮ್ ಬಗ್ಗೆ ಬರೆದಿದ್ದಾರೆ. ಡ್ಯುಯಲ್ ಫ್ಲ್ಯಾಷ್ ಸಿಸ್ಟಮ್ ಅನ್ನು ಮೊದಲು ಆಸ್ಟ್ರೇಲಿಯಾದಲ್ಲಿ 1970 ರಲ್ಲಿ ಬಳಸಲಾಯಿತು.

ದೊಡ್ಡ ಗುಂಡಿಯನ್ನು ಒತ್ತಿದಾಗ ಬರುವ ನೀರಿನ ಪ್ರಮಾಣ ಘನತ್ಯಾಜ್ಯವನ್ನು ತೆಗೆದುಹಾಕಲು ಬಳಸಲು ಉಪಯೋಗವಾಗುತ್ತದೆ. ಅಂದಹಾಗೆಯೇ ದೊಡ್ಡ ಗುಂಡಿಯನ್ನು ಒತ್ತಿದಾಗ 8 ರಿಂದ 9 ಲೀಟರ್ ನೀರು ಬರುತ್ತದೆ. ಆದರೆ ಸಣ್ಣ ಬಟನ್ ಒತ್ತಿದಾಗ 3 ರಿಂದ 4 ಲೀಟರ್ ನೀರು ಬಳಸಲ್ಪಡುತ್ತದೆ. ಈ ಎರಡು ಗುಂಡಿಗಳು ನೀರನ್ನು ಉಳಿಸಲು ಮಾಡಲಾಗಿರುವಂತಹ ವಿನ್ಯಾಸ.

ಎರಡೂ ಗುಂಡಿಗಳು ನಿರ್ಗಮನ ಕವಾಟಕ್ಕೆ ಸಂಪರ್ಕ
ಹೊಂದಿದೆ. ಡ್ಯುಯಲ್ ಫ್ಲಶಿಂಗ್ ಸಿಸ್ಟಮ್‌ನ
ಉದ್ದೇಶವು ನೀರನ್ನು ಉಳಿಸುವುದು ಮತ್ತು ಸರಿಯಾದ
ಬಳಕೆಯಿಂದ ಸುಮಾರು 20,000 ಲೀಟರ್ ನೀರನ್ನು
ಉಳಿಸಬಹುದು. ಈ ಡ್ಯುಯಲ್ ಫ್ಲ್ಯಾಷ್ ಸಿಸ್ಟಮ್
ಸಾಕಷ್ಟು ಪರಿಸರ ಸ್ನೇಹಿಯಾಗಿದೆ.

ಡಬಲ್ ಫ್ಲ್ಯಾಷ್ ಸಿಸ್ಟಮ್ ಹೆಚ್ಚು ದುಬಾರಿಯಾಗಿದೆ. ಸಿಂಗಲ್ ಫ್ಲ್ಯಾಷ್ ಅಲ್ಲದೆ ಡ್ಯುಯಲ್ ಫ್ಲ್ಯಾಷ್ ವ್ಯವಸ್ಥೆಯು ಹೆಚ್ಚು ದೋಷಪೂರಿತವಾಗಿದೆ ಒಮ್ಮೆ ಸೋರಿಕೆಯಾದರೆ ಬಹಳಷ್ಟು ನೀರು ವ್ಯರ್ಥವಾಗುತ್ತದೆ

Leave A Reply

Your email address will not be published.