ಪಿವಿಸಿ ಪೈಪುಗಳಲ್ಲಿ ತರಕಾರಿ ಬೆಳೆದು ಯಶಸ್ವಿಯಾದ ಮಹಿಳೆ
ತಮ್ಮ ಮನೆಯಲ್ಲಿ ತರಕಾರಿ ತೋಟ ಬೇಕೆಂಬ ಹಂಬಲ ಎಲ್ಲರಿಗೂ ಇರ್ತದೆ..ಆದರೆ ಅದ್ಕೆ ಸ್ಥಳವಕಾಶದ ಕೊರತೆ ಇರುತ್ತೆ..ಇದಕ್ಕಾಗಿ ಇಲ್ಲೊಬ್ಬ ಮಹಿಳೆ ವಿಶೇಷ ಪ್ರಯತ್ನದ ಮೂಲಕ ಸುದ್ದಿಯಾಗಿದ್ದಾರೆ. ಸ್ಥಳಾವಕಾಶ ಇಲ್ಲದೇ ಹೋದರೂ ಹೇಗೆ ಒಂದು ಉತ್ತಮವಾದ ತೋಟವನ್ನು ಮಾಡಿಕೊಳ್ಳಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಬಿಹಾರದ ಛಾಪ್ರಾ ನಿವಾಸಿ,ಉತ್ಸಾಹಿ ತೋಟಗಾರ್ತಿ ಸುನಿತಾ ಪ್ರಸಾದ್ ಅವರು ತಮ್ಮ ಮನೆಯ ಟೆರೇಸ್ ಮೇಲೆ ಪಿವಿಸಿ ಪೈಪ್ ಗಳಿಗೆ ಬಿದಿರನ್ನು ಹಚ್ಚುವ ಮೂಲಕ ಲಂಬವಾದ ತೋಟವನ್ನು ರಚಿಸಲು ಒಂದು ಮಾರ್ಗ ಕಂಡುಕೊಂಡರು. ಇಲ್ಲಿ ಅವರು ಪ್ರತಿವಾರ ಸುಮಾರು ಐದು ಕೆಜಿ ತರಕಾರಿಗಳನ್ನು ಬೆಳೆಯುತ್ತಾರೆ.
ಈ ಸೃಜನಶೀಲ ಮಹಿಳೆಯು ಒಂದು ದಿನ ಗುಜರಿ ವ್ಯಾಪಾರಿ ಒಬ್ಬರಿಗೆ ಸರಕುಗಳನ್ನು ಮಾರಾಟ ಮಾಡುವಾಗ ಅವನ ಸೈಕಲ್ನಲ್ಲಿ ಪೈಪ್ ಒಂದನ್ನು ಗಮನಿಸಿದೆ ಮತ್ತು ಅದರಿಂದ ಏನಾದರೂ ಹೊಸದನ್ನು ರಚಿಸುವ ಭರವಸೆಯಿಂದ ಖರೀದಿಸಿದೆ.
ಆದರೆ ಅಂತಿಮವಾಗಿ ಅದರಲ್ಲಿ ಸ್ವಲ್ಪ ಮಣ್ಣು ತುಂಬಿಸಿ ಮನೆಯ ಮೇಲೆ ಅನೇಕ ವಾರಗಳ ನಂತರ ಅದರಿಂದ ಬೆಳೆಗಳು ಮೊಳಕೆ ಒಡೆಯುವುದನ್ನು ನಾನು ಗಮನಿಸಿದೆ” ಎಂದು ಹೇಳಿದರು. ಈ ರೀತಿ ಪೈಪುಗಳಲ್ಲಿ ತರಕಾರಿಗಳನ್ನು ಬೆಳೆಯುವ ಆಲೋಚನೆಯನ್ನು ಪಡೆದುಕೊಂಡರು.
ಇದರ ಮೂಲಕ ಬಹುತೇಕ ಎಲ್ಲಾ ಋತುಮಾನಗಳಲ್ಲಿ ಇವರು ತರಕಾರಿಗಳನ್ನು ಬೆಳೆಯುತ್ತಾರೆ ನನ್ನ ತರಕಾರಿಗಳನ್ನು ಪೋಷಿಸಲು ನಾನು ಎರೆಹುಳು ಗೊಬ್ಬರ ವಿಧಾನವನ್ನು ಬಳಸುತ್ತೇನೆ ಹಾಗಾಗಿ ಇಡೀ ಉತ್ಪನ್ನವು ಸಾವಯವವಾಗಿದೆ ಎಂದು ಹೇಳುತ್ತಾರೆ