ಪೋಷಕಾಂಶ ವಂಚಿತ ಮಕ್ಕಳಿಗೆ ಸಹಾಯ ಮಾಡಲು ತನ್ನ 118 ಲೀಟರ್ ಎದೆಹಾಲನ್ನು ಮಾರಾಟ ಮಾಡಿದ ಮಹಾತಾಯಿ !!
ಎಳೆಯ ಮಕ್ಕಳಿಗೆ ತಾಯಿಯ ಎದೆಹಾಲು ತುಂಬಾನೇ ಮುಖ್ಯ. ಅತಿ ಹೆಚ್ಚು ಪೋಷಕಾಂಶವಿರುವ ಎದೆಹಾಲು ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ತಪ್ಪಾಗಲಾರದು. ಹಾಗೆಯೇ ಪೋಷಕಾಂಶಗಳಿಂದ ವಂಚಿತವಾದ ಪುಟ್ಟ ಮಕ್ಕಳಿಗೆ ಮತ್ತು ಕುಟುಂಬಗಳಿಗೆ ಸಹಾಯ ಮಾಡಲು ತಾಯಿಯೊಬ್ಬರು ತನ್ನ 118 ಲೀಟರ್ ಎದೆಹಾಲನ್ನು ಮಾರಾಟ ಮಾಡಿದ್ದಾರೆ.
ಯುನೈಟೆಡ್ ಸ್ಟೇಟ್ನಲ್ಲಿ ಬೇಬಿ ಫಾರ್ಮುಲಾ ಕೊರತೆ ಹೆಚ್ಚಾಗುತ್ತಿದ್ದು, ಈ ಕುರಿತು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಯುಎಸ್ ನ ತಾಯಿಯೊಬ್ಬಳು ತನ್ನ 118 ಲೀಟರ್ಗಿಂತಲೂ ಹೆಚ್ಚು ಎದೆ ಹಾಲನ್ನು ಅಗತ್ಯವಿರುವವರಿಗೆ ಮಾರಾಟ ಮಾಡುವ ಮೂಲಕ ಸಹಾಯ ಮಾಡಲು ಮುಂದಾಗಿದ್ದಾರೆ.
ಈ ಕುರಿತು ತಾಯಿ ಅಲಿಸ್ಸಾ ಚಿಟ್ಟಿ ಮಾತನಾಡಿದ್ದು, ತಾನು ಎದೆಹಾಲು ತುಂಬಿರುವ ಮೂರಕ್ಕಿಂತ ಹೆಚ್ಚು ಫ್ರೀಜ್ಗಳನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ನಾನು ಮನೆಯಿಂದ ಯಾವಾಗಲೂ ಹೊರಗೆ ಇರಲು ಬಯಸುತ್ತೇನೆ. ಇದರಿಂದ ಬೇರೆಯವರಿಗೆ ಸಹಾಯ ಮಾಡಬಹುದು. ನನ್ನ ಬಳಿ 3,000 ಔನ್ಸ್ಗಳಿವೆ ಎಂದು ನನಗೆ ತಿಳಿದಿದೆ ಎಂದಿದ್ದಾರೆ.
ಮೊದಲಿಗೆ, ಚಿಟ್ಟಿ ಹಾಲಿನ ಬ್ಯಾಂಕ್ಗೆ ದೇಣಿಗೆ ನೀಡಲು ಪ್ರಯತ್ನಿಸಿದರು. ಅವರ ಸುದೀರ್ಘ ಪ್ರಯತ್ನದಿಂದ ತಮ್ಮ ಎದೆಹಾಲಿನ ಬೆಲೆಯನ್ನು ಒಂದು ಔನ್ಸ್ ಗೆ 1 ಡಾಲರ್(77.48) ನಿಗದಿಪಡಿಸಿದರು. ಅಲ್ಲದೇ ದೇಶದಲ್ಲಿ ಬೇಬಿ ಫಾರ್ಮುಲಾ ಕೊರತೆಯ ಬಗ್ಗೆ ನಮ್ಮ ಮನೆಯವರಿಗೆ ತಿಳಿಸುವುದು ಮತ್ತು ಅವರೊಂದಿಗೆ ಮಾತುಕತೆ ನಡೆಸಲು ನಾನು ಸಿದ್ಧಳಿದ್ದೆ ಎಂದು ತಿಳಿಸಿದರು.
ನನಗೆ ಗೊತ್ತು, ಬಹಳಷ್ಟು ತಾಯಂದಿರಿಗೆ ಹಾಲಿನ ತೊಂದರೆ ಇರುವುದರಿಂದ ಮಕ್ಕಳಿಗೆ ಯಾವುದೇ ನಿರ್ದಿಷ್ಟ ಪೋಷಕಾಂಶ ಸಿಗುವುದಿಲ್ಲ. ಇದರಿಂದ ಮಕ್ಕಳಿಗೆ ಭವಿಷ್ಯದಲ್ಲಿ ಎಷ್ಟು ಕಷ್ಟವಾಗಬಹುದು ಎಂದು ನನಗೆ ತಿಳಿದಿದೆ. ಈ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನನಗೆ ತಿಳಿದಿದೆ ಎಂದು ಇದೇ ವೇಳೆ ಆಕೆ ತಿಳಿಸಿದ್ದಾರೆ.