ಮೈಸೂರಿನಲ್ಲೋರ್ವ ವಿಕೃತ ಕಾಮಿಯ ಮುಖವಾಡ ಕಳಚಿದ ಯುವತಿ| ಯುವತಿಯರನ್ನು ಬಲೆಗೆ ಬೀಳಿಸಿ, ದುಡ್ಡು ಪೀಕಿಸಿದ್ದ ನೀಚ, ಈತನ ಮೊಬೈಲ್ ನೋಡಿ ಬೆಚ್ಚಿ ಬಿದ್ದ ಪೊಲೀಸರು!!!

ಈ ಪ್ರೀತಿ ಪ್ರೇಮದ ಹೆಸರಲ್ಲಿ ಎಷ್ಟೊಂದು ಜನ ಮೋಸ ಹೋಗುತ್ತಾರೋ ಗೊತ್ತಿಲ್ಲ. ಅದಕ್ಕೇ ಹೇಳುವುದು ಮೋಸ ಮಾಡುವವರು ಇರುವವರೆಗೆ ಮೋಸ ಹೋಗುವವರು ಕೂಡಾ ಇರ್ತಾರೆ. ಅದಕ್ಕೆ ನಿದರ್ಶನವಾಗಿಯೇ ಈ ಘಟನೆಯೊಂದು ನಡೆದಿದೆ.

ಇಲ್ಲೊಬ್ಬ ಯುವಕ ಪ್ರೀತಿ-ಪ್ರೇಮದ ಹೆಸರಲ್ಲಿ ಯುವತಿಯರಿಗೆ ಬಲೆ ಬೀಳಿಸಿ, ನಂತರ ಯುವತಿರ ಜತೆ ಆಪ್ತತೆ ಬೆಳೆಸಿಕೊಂಡು ಮದುವೆ ಆಸೆ ಕೊಟ್ಟು, ಅಶ್ಲೀಲ ಚಾಟಿಂಗ್ ಮಾಡುತ್ತಾ ಯುವತಿಯರ ಬೆತ್ತಲೆ ವೀಡಿಯೋ-ಫೋಟೋಗಳನ್ನ ವಾಟ್ಸಾಪ್ ಗೆ ಕಳಿಸುವಂತೆ ಮಾಡಿಕೊಳ್ಳುತ್ತಿದ್ದ. ಯುವತಿಯರು ಕೂಡಾ ಈತನ ಬಲೆಗೆ ಸುಲಭವಾಗಿಯೇ ಬೀಳುತ್ತಿದ್ದರು.

ಇನ್ನೂ ಮುಂದುವರಿದು, ಲೈಂಗಿಕವಾಗಿಯೂ ಯುವತಿಯರನ್ನು ಬಳಸಿಕೊಂಡು, ಖಾಸಗಿ ಕ್ಷಣದ ದೃಶ್ಯವನ್ನ ಯುವತಿಯರಿಗೆ ಗೊತ್ತಾಗದಂತೆ ವೀಡಿಯೋ ಮಾಡಿಟ್ಟುಕೊಳ್ಳುತ್ತಿದ್ದ. ಅಷ್ಟೇ ನೋಡಿ, ಆಮೇಲೆ ನೀನ್ಯಾರೋ ನಾನ್ಯಾರೋ ಅಂತಿದ್ದ.

ಈ ವಿಕೃತ ಕಾಮುಕನ ಹೆಸರು ಶಿವಪ್ರಕಾಶ್ ಬಿ.ಜಿ., ನಂಜನಗೂಡು ತಾಲೂಕಿನ ಬಸವಟಿಕೆ ಗ್ರಾಮದವ. ನೋಡೋಕೆ ಹ್ಯಾಂಡ್ ಸಮ್ ಆಗಿದ್ದು, ಇದನ್ನೇ ಬಡವಾಳ ಮಾಡಿಕೊಂಡು ಈತ ಬಣ್ಣ ಬಣ್ಣದ ಮಾತುಗಳನ್ನಾಡುತ್ತಾ ಯುವತಿಯರಿಗೆ ಫೇಸ್ ಬುಕ್, ಗೂಗಲ್ ಮೀಟ್ ಮೂಲಕ ಗಾಳ ಹಾಕುತ್ತಿದ್ದ. ಅವರಿಗೆ ತನ್ನ ಬೆತ್ತಲೆ ಫೋಟೋ ಕಳುಹಿಸುತ್ತಿದ್ದ. ಹಲವು ಯುವತಿಯರ ಜೊತೆ ಪ್ರೀತಿ ನಾಟಕವಾಗಿ, ಏಕಾಂತದಲ್ಲಿರೋ ವಿಡಿಯೋ ಮಾಡಿಕೊಳ್ಳುತ್ತಿದ್ದ. ನಂತರ ಕಾಮುಕ ಹಣಕ್ಕಾಗಿ ಪೀಡಿಸುತ್ತಿದ್ದ. ಮರ್ಯಾದೆಗೆ ಅಂಜಿ ಅದೆಷ್ಟೋ ಯುವತಿಯರು ಹಣ ಕೊಟ್ಟು ಇವನ ಕಾಟ ತಪ್ಪಿದರೆ ಸಾಕಪ್ಪ ಎಂದು ನಲುಗಿದ್ದಾರಂತೆ. ಆದರೆ, ಈತನಿಂದ ಅನ್ಯಾಯಕ್ಕೊಳಗಾದ ಮೈಸೂರಿನ ಯುವತಿಯೊಬ್ಬಳು ಶಿವಪ್ರಕಾಶ್‌ನ ಕರಾಳ ಮುಖವನ್ನ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ.

ಮೈಸೂರು ಮೂಲದ ಯುವತಿಯೊಬ್ಬಳ ಜೊತೆ ಸ್ನೇಹ ಬೆಳೆಸಿ ಪ್ರೀತಿಯ ನಾಟಕವಾಡಿದ್ದ ಶಿವಪ್ರಕಾಶ್, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಾ 20 ಲಕ್ಷ ಹಣ ತಗೊಂಡಿದ್ದ. ನೊಂದ ಯುವತಿ ಮೈಸೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಕೂಡಲೇ ಕಾರ್ಯಪ್ರವೃತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಮೊಬೈಲ್ ನೋಡಿದರೇ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಅದರಲ್ಲಿ ಯುವತಿಯರ ಜೊತೆ ಅಶ್ಲೀಲ ಚಾಟಿಂಗ್, ಬೆತ್ತಲೆ ದೃಶ್ಯಗಳು ಮೊಬೈಲ್‌ನಲ್ಲಿ ತುಂಬಿಕೊಂಡಿದೆಯಂತೆ.

Leave A Reply