ನೂತನ ಪರಿಷತ್ ಹಂಗಾಮಿ ಸಭಾಪತಿಯಾಗಿ ‘ರಘುನಾಥ್ ರಾವ್ ಮಲಕಾಪೂರೆ’ ಅಧಿಕಾರ ಸ್ವೀಕಾರ

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿಯವರು ನಿನ್ನೆ ರಾಜೀನಾಮೆ ನೀಡಿದ ಹಿನ್ನೆಲೆ, ಅವರ ಸ್ಥಾನಕ್ಕೆ ಇದೀಗ ಪರಿಷತ್ ಸದಸ್ಯ ರಘುನಾಥ್ ರಾವ್ ಮಲಕಾಪೂರೆ ಅವರನ್ನು ಹಂಗಾಮಿ ಸಭಾಪತಿಯಾಗಿ ಆಯ್ಕೆ ಮಾಡಲಾಗಿದೆ.

 

ವಿಧಾನ ಪರಿಷತ್​ನ ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ ಹಿನ್ನೆಲೆ ಆ ಸ್ಥಾನಕ್ಕೆ ರಘುನಾಥ್ ‌ಮಲ್ಕಾಪುರೆ ಅವರನ್ನು ನೇಮಿಸಿ, ರಾಜ್ಯಪಾಲ ತಾವರ್​ಚಂದ್ ಗೆಲ್ಹೋತ್​ ಆದೇಶಿಸಿದ್ದಾರೆ. ಅದನವು ಅಧ್ಯಕ್ಷರನ್ನು ನೇಮಕ ಮಾಡುವವರೆಗೆ ರಘುನಾಥ್ ಮಲ್ಕಾಪುರೆ ಅವರೇ ಸಭಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ವಿಧಾನ ಪರಿಷತ್ ಸಭಾಪತಿಯಾಗಿದ್ದಂತ ಬಸವರಾಜ ಹೊರಟ್ಟಿಯವರು, ತಮ್ಮ ಸ್ಥಾನಕ್ಕೆ ಹಾಗೂ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ನಿನ್ನೆ ಸಲ್ಲಿಸಿದ್ದರು. ಉಪ ಸಭಾಪತಿ ಇಲ್ಲದ ಕಾರಣ, ವಿಧಾನ ಪರಿಷತ್ ಕಾರ್ಯದರ್ಶಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ಅವರ ರಾಜೀನಾಮೆ ಅಂಗೀಕಾರಗೊಂಡಿದೆ.

ಇಂದು ವಿಧಾನಸೌಧದಲ್ಲಿ ನಡೆದಂತ ಸರಳ ಸಮಾರಂಭದಲ್ಲಿ, ನೂತನ ಪರಿಷತ್ ಸಭಾಪತಿಯಾಗಿ ರಘುನಾಥ್ ರಾವ್ ಮಲಕಾಪೂರೆ ಅಧಿಕಾರ ಕೂಡ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರದ ವಿನಂತಿಯಂತೆ ರಾಜ್ಯಪಾಲರು ಈ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದಾರೆ. ಎಲ್ಲ ಪಕ್ಷಗಳ ಸದಸ್ಯರ ಸಹಕಾರದೊಂದಿಗೆ ಸದನವನ್ನ ಪಕ್ಷಾತೀತವಾಗಿ ನಡೆಸುವೆ ಎಂದರು.

Leave A Reply

Your email address will not be published.