SSLC ಫಲಿತಾಂಶ: ಇಂದು ಮಧ್ಯಾಹ್ನ (ಮೇ.19) ಮಧ್ಯಾಹ್ನ 1 ಗಂಟೆಗೆ ಫಲಿತಾಂಶ ಪ್ರಕಟ – ಎಸ್ ಎಂ ಎಸ್ ಮೂಲಕ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಫಲಿತಾಂಶ ರವಾನೆ !!!

2021-22ನೇ ಸಾಲಿನ ಕರ್ನಾಟಕ 10ನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಳ್ಳಲಿದೆ. ಪರೀಕ್ಷಾ ಮಂಡಳಿಯು ಎಸ್ಎಸ್ ಎಲ್‌ಸಿ ಫಲಿತಾಂಶವನ್ನು ಮೇ 19, 2022( ಇಂದು) ರಂದು 1 ಗಂಟೆ ಬಳಿಕ ಬಿಡುಗಡೆ ಮಾಡಲಿದೆ. ಜೊತೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ರವರು ಪತ್ರಿಕಾಗೋಷ್ಠಿ ಮೂಲಕ ರಿಸಲ್ಟ್ ಪ್ರಕಟಿಸಲಿದ್ದಾರೆ.

ವಿದ್ಯಾರ್ಥಿಗಳು ವೆಬ್‌ಸೈಟ್‌ಗಳಾದ http://kseeb.kar.nic.in/ ಗೆ ಅಥವಾ karresults.nic.in ಗೆ ಭೇಟಿ ನೀಡಿ ತಮ್ಮ ಫಲಿತಾಂಶ ಚೆಕ್ ಮಾಡಬಹುದು. ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಮಾತ್ರವಲ್ಲದೇ ತಮ್ಮ ಶಾಲೆಗಳಲ್ಲಿಯೂ, ಎಸ್ಎಂಎಸ್ ಮೂಲಕವು ಫಲಿತಾಂಶ ಪಡೆಯಬಹುದು.

ಅಂತೆಯೇ ಇದೀಗ 2021-22ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ 85.63% ಫಲಿತಾಂಶ ಬಂದಿದೆ.

ಈ ಬಾರಿ ವಿಜಯಪುರ ಜಿಲ್ಲೆ ಟಾಪ್ 1, ತುಮಕೂರು 2, ಹಾವೇರಿ 3, ಬೆಳಗಾವಿ 4 ನೇ ಸ್ಥಾನ ಪಡೆದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಬಾರಿ ಅತ್ಯುತ್ತಮ ಮಾರ್ಕ್ಸ್ ಪಡೆದಿದ್ದಾರೆ. ಪ್ರತಿ ಬಾರಿ ಮೊದಲ ಸ್ಥಾನ ಪಡೆಯುತ್ತಿದ್ದ ದ.ಕ.ಜಿಲ್ಲೆ ಈ ಬಾರಿ ಮೊದಲ ಸ್ಥಾನ ಪಡೆಯದಿರುವುದು ಗಮನಾರ್ಹ ವಿಷಯವಾಗಿದೆ. ಈ ಬಾರಿ ಹಳ್ಳಿ ಸೊಗಡಿನ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿರುವುದು ಅವರು ಪಟ್ಟ ಶ್ರಮಕ್ಕೆ ಸಂದ ಫಲವಾಗಿದೆ.

ಎಸ್ಎಸ್ಎಲ್‌ಸಿ ಫಲಿತಾಂಶ ಚೆಕ್ ಮಾಡುವ ವಿಧಾನ

  • ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಫಲಿತಾಂಶ ವೆಬ್‌ಸೈಟ್ https://karresults.nic.in ಗೆ ಭೇಟಿ
    ನೀಡಿ. – ಓಪನ್ ಆದ ಪೇಜ್‌ನಲ್ಲಿ ಮೊದಲು ರಿಜಿಸ್ಟ್ರೇಷನ್ ನಂಬರ್ ಟೈಪ್ ಮಾಡಿ.
  • ನಂತರ ವಿದ್ಯಾರ್ಥಿಗಳು ತಮ್ಮ ಜನ್ಮ ದಿನಾಂಕ ಮಾಹಿತಿ
    ಸೆಲೆಕ್ಟ್ ಮಾಡಿ ನೀಡಿ.

-‘SUBMIT’ ಎಂಬಲ್ಲಿ ಕ್ಲಿಕ್ ಮಾಡಿ.

  • ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರದರ್ಶನವಾಗುತ್ತದೆ.
  • ತಮ್ಮ ಫಲಿತಾಂಶವನ್ನು ವಿಷಯವಾರು ಗಳಿಸಿದ ಅಂಕಗಳು, ಒಟ್ಟು ಅಂಕಗಳು, ಶೇಕಡ ಅಂಕಗಳ ಮಾಹಿತಿ ಲಭ್ಯ ಇರುತ್ತದೆ.
  • ಮುಂದಿನ ರೆಫರೆನ್ಸ್ ಗಾಗಿ ಪ್ರಿಂಟ್ ತೆಗೆದುಕೊಳ್ಳಿ.

Leave A Reply

Your email address will not be published.