ಪತ್ನಿಗೆ ಸೀರೆ ಉಡಲು ಬರುವುದಿಲ್ಲವೆಂದು ಮನನೊಂದು ಪತಿ ಆತ್ಮಹತ್ಯೆ!!!

ಇದೊಂದು ವಿಚಿತ್ರದಲ್ಲಿ ವಿಚಿತ್ರ ಕೇಸ್. ಈ ತರಹ ನೆಪವೊಡ್ಡಿ ಯಾರಾದರೂ ಆತ್ಮಹತ್ಯೆ ಮಾಡ್ತಾರಾ? ಇಷ್ಟೊಂದು ಸಣ್ಣ ವಿಷಯಕ್ಕೆ ತನ್ನ ಜೀವನವನ್ನೇ ಕೊನೆಗಾಣಿಸ್ತಾನಾ ಮನುಷ್ಯ ಅನ್ನೋದು ಈ ವಿಷಯದಲ್ಲಿ ಪ್ರಶ್ನೆಯಾಗಿಯೇ ಉಳಿದಿದೆ.

 

ಈತನಿಗೆ ತನ್ನ ಹೆಂಡತಿಯೇ ಇಷ್ಟವಿರಲಿಲ್ಲವೋ ಅಥವಾ ಮದುವೆ ಇಷ್ಟು ಬೇಗ ಇಷ್ಟವಿರಲಿಲ್ಲವೋ…ಅದಕ್ಕೆ ನೆಪವೊಡ್ಡಿ ಈ ರೀತಿಯ ತೀರ್ಮಾನ ಕೈಗೊಂಡನೇ ? ಅದೇನೇ ಇರಲಿ ಈಗ ಆ ವ್ಯಕ್ತಿ ಇಲ್ಲ.

ಘಟನೆ ವಿವರ : ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಸರಿಯಾಗಿ ಸೀರೆ ಉಡಲು ಬರುವುದಿಲ್ಲ ಎಂದು ಅಸಮಾಧಾನಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಔರಂಗಬಾದ್ ನಡೆದಿದೆ.

ಮುಕುಂದನಗರದ ನಿವಾಸಿ ಸಮಾಧಾನ್ ಸಾಬಲ್(34) ಮೃತ ವ್ಯಕ್ತಿ. ಸಾಬಲ್ 6 ತಿಂಗಳ ಹಿಂದೆ ಅವನಿಗಿಂತ 6 ವರ್ಷ ದೊಡ್ಡವಳನ್ನು ಮದುವೆಯಾಗಿದ್ದ. ಆದರೆ ಈ ಮದುವೆಯಿಂದ ಆತ ಖುಷಿಯಾಗಿರಲಿಲ್ಲ.

ಸಾಬಲ್ ಪತ್ನಿಯ ಮೇಲೆ ಅಸಮಾಧಾನಗೊಂಡಿದ್ದನು. ಪತ್ನಿಗೆ ಸರಿಯಾಗಿ ಸೀರೆ ಉಡಲು ಬರುವುದಿಲ್ಲ. ಇದರ ಜೊತೆಗೆ ಸರಿಯಾಗಿ ನಡೆಯಲು ಮತ್ತು ಮಾತನಾಡಲು ಬರುವುದಿಲ್ಲ ಎಂದು ಮನನೊಂದಿದ್ದನು. ಇದರಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದ್ದಾನೆ.

ಸಾಬಾಲ್ ಮೃತ ದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದ ಕೊಠಡಿಯಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ಅದನ್ನು ಮುಕುಂದವಾಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave A Reply

Your email address will not be published.